ದೇಹ ಶುದ್ಧಿಗಾಗಿ ನೆಲ್ಲಿಕಾಯಿ ಜ್ಯೂಸ್ ಉತ್ತಮ, ಮಾಡಲು ಅತ್ಯಂತ ಸರಳ. ಉದ್ಯಮಿ ಹಾಗೂ ಲೇಖಕರೂ ಆದ ಅರುಣ್ ಪ್ರಸಾದ್ ಅವರು ವರ್ಷಕೊಮ್ಮೆ ಇದನ್ನು ಕುಡಿಯುತ್ತಾರಂತೆ. ನೆಲ್ಲಿಕಾಯಿ ಜ್ಯೂಸ್ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ನಲ್ಲಿಕಾಯಿ – ನಾಲ್ಕು
ನೀರು – ಅರ್ಧ ಲೋಟ
ಒಂದು ಹತ್ತು ನೆಲ್ಲಿಕಾಯಿ ಚೆನ್ನಾಗಿ ತೊಳೆದು ಅದರಲ್ಲಿನ ಬೀಜ ತೆಗೆದು ಅದಕ್ಕೆ ಅರ್ಧ ಲೋಟ ನೀರು ಸೇರಿಸಿ ಮಿಕ್ಸಿ ಮಾಡಿದರೆ ದೇಹದ ವಿಷ ನಿವಾರಕ ನೆಲ್ಲಿಕಾಯಿ ಜ್ಯೂಸ್ ರೆಡಿ.
ಖಾಲಿ ಹೊಟ್ಟಿಯಲ್ಲಿ ಬೆಳ್ಳಂಬೆಳಗೆ ಒಂದು ಲೋಟ ನೆಲ್ಲಿ ಕಾಯಿ ಜ್ಯೂಸ್ ಮಾಡಿ ಕುಡಿದು ಬಿಡಿ. ಒಂದು ಗಂಟೆ ಬೇರೆ ಎನನ್ನೂ ಸೇವಿಸಬಾರದು. ಹೆಚ್ಚಿನವರಿಗೆ ಒಂದೆರೆಡು ಬಾರಿ ಬೇದಿ ಆದೀತು. ನೆಲ್ಲಿಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳ ಕಾರಣ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.
ಇದು ತ್ವಚೆ ಮತ್ತು ಕೂದಲು ಎರಡಕ್ಕೂ ಪೋಷಣೆಯನ್ನು ಒದಗಿಸುತ್ತದೆ. ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ
