ಕಾಮನ ಬಿಲ್ಲು ಮೂಡಿದ್ದ ಕಾಶ್ಮೀರದ ಮುಗಿಲ ತುಂಬ ರಕುತದ ಚಿತ್ತಾರ ಬರೆದು ರಕ್ಕಸರು ತಾವೆಂದು ಬಿಂಬಿಸಿಕೊಂಡವರು…ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಆಕ್ರೋಶದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ರಕ್ಕಸರೊಡಲಲಿ ಜನಿಸಿದ
ಕಲಿಯುಗದ ಅಸುರರು
ಕಂಡವರ ರಕುತದ ರುಚಿಗೆ ನಾಲಗೆ
ಚಪ್ಪರಿಸುವ ಚಪ್ಪರುಗಳು
ಎದೆಗಂಟಿದ ನಾಲ್ಕಕ್ಷರಕೂ ನಂಜoಟಿಸಿಕೊಂಡು
ಧರ್ಮದ ಹೆಸರಲಿ ವಿಷಬೀಜ ಬಿತ್ತಿ
ರಕ್ತದೋಕುಳಿಯಾಟ ಆಡುವ ಅರಿವುಗೇಡಿಗಳು
ನೆತ್ತರಂಟಿದ ಗಡ್ಡ ಸವರಿಕೊಂಡು
ಶಾಂತಿ ಸಾರುವ ಧರ್ಮ ಗ್ರಂಥಕೆ ತಿಥಿ ಮಾಡಿ
ಕ್ರೌರ್ಯ ಸಾರುವುದೇ ನಿಜ ಧರ್ಮವೆಂದು
ಸೌಹಾರ್ಧ ಪುಟಗಳನೇ ತಿದ್ದಿ
ಸುಳ್ಳಿನೂಟವನು ಜಗಕೆ ಬಡಿಸುತಿರುವರು
ಭಾಯಿ ಭಾಯಿ ಎಂದು ಬಾಯಲ್ಲಿ ಉದ್ಘರಿಸುತ
ಭಾಯಿಯ ಸೋದರಿಯನೇ ಮುಕ್ಕುವ
ಮೃಗೀಯ ಮನದವರು
ಕಾಮನ ಬಿಲ್ಲು ಮೂಡಿದ್ದ ಕಾಶ್ಮೀರದ
ಮುಗಿಲ ತುಂಬ ರಕುತದ ಚಿತ್ತಾರ ಬರೆದು
ರಕ್ಕಸರು ತಾವೆಂದು ಬಿಂಬಿಸಿಕೊಂಡವರು
ದಂಡಿ, ಭಾಮ, ವಾಮನ, ಕವಿರತ್ನಕಾಳಿದಾಸರು
ಮೆರೆದಂತ ನಾಡಲಿ ವಿಷದ ಅಧ್ಯಾಯ ಬರೆದು
ಸರಸತಿಯ ನಾಡನು ಅಪವಿತ್ರ ಗೊಳಿಸಿ
ತಾಯಿ ಕಾಶ್ಮೀರಿಯ ಕತ್ತು ಹಿಸುಕುತಿರುವವರು
ಪಾಪವರಿಯದ ಪಂಡಿತರ ತಲೆಗೆ ಗುಂಡಿಟ್ಟು
ಸತ್ಯದ ಇತಿಹಾಸವನೆ ಮರೆಮಾಚಿ
ಪಂಡಿತರ ಎಂಜಲೆಲೆ ನೆಕ್ಕುತಿರುವರು
ಲಾಲಿ ಪೊಪ್ಪು ಚೀಪುವ ಕೈಗಳಿಗೂ ಬಂದೂಕು
ಕೊಟ್ಟು ಕ್ರೌರ್ಯದ ಲಾಲಿ ಹಾಡು ಹಾಡಿದವರು
ಧರ್ಮಾoದತೆಯ ನಶೆಯೇರಿಸಿ
ಹೆತ್ತೋಡಲನೇ ಬಗೆಯುವ ಪಾಠ ಕಲಿಸಿಕೊಟ್ಟವರು
ಇನ್ನೆಷ್ಟು ದಿನ ಈ ನಿಮ್ಮ ರಕ್ತ-ಸಿಕ್ತ ಅಧ್ಯಾಯ?
ಕೂಡಿ ಬಂದಿದೆ ಕಾಲ ಅದು ನಿಮ್ಮ ವಿನಾಶ ಕಾಲ
ಇಂತಹ ನೀಚರಿಗೆ
‘ಬಾ ಮನುಜರಾಗಿ ಬಾಳೋಣ’ ಎಂದು
ಸ್ನೇಹದ ಹಸ್ತ ಚಾಚಲಾದೀತೇ!?
ಪ್ರೀತಿಯಿಂದ ಭಾಯಿಗಳೆಂದು
ತಬ್ಬಿಕೊಳ್ಳಲಾದೀತೇ!?
ಗುಂಡಿಟ್ಟು ಉಡಾಯಿಸಿ
ಕಾಶ್ಮೀರಿಯನು ಸ್ವಚ್ಛ ಗೊಳಿಸುವುದಷ್ಟೇ ಈಗುಳಿದಿರುವ ಅಂತಿಮ ತೀರ್ಪು!!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
