ಅರ್ಥಪೂರ್ಣ ಬದುಕು

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶ್ರೀಕಾಂತ್ ಹಡಪದ್ ಅವರು ಬರವಣಿಗೆಯನ್ನು ಹವ್ಯಾಸವನ್ನಾಗಿ ತಗೆದುಕೊಂಡು ಕೆಲಸದ ಮಧ್ಯೆ ಕವನ, ಲೇಖನಗಳನ್ನು ಬರೆಯುತ್ತಾರೆ. ಅವರು ಬರೆದ ಒಂದು ಪುಟ್ಟ ಬರಹವನ್ನು ಆಕೃತಿಕನ್ನಡದಲ್ಲಿ ಹಂಚಿಕೊಳ್ಳುತ್ತಿದ್ದೇನೆ, ತಪ್ಪದೆ ಮುಂದೆ ಓದಿ….

ತೂಕ ಹೆಚ್ಚಾದರೆ ಏನು ಮಾಡಬೇಕೆಂಬ ಪ್ರಶ್ನೆಗೆ ಗುರುಗಳೊಬ್ಬರಿಂದ ಬಂದ ಉತ್ತರ…….
ತನುವಿನ ತೂಕ ಹೆಚ್ಚಾದರೆ “ವ್ಯಾಯಾಮ”
ಮನದ ತೂಕ ಹೆಚ್ಚಾದರೆ ‘ಧ್ಯಾನ ಮತ್ತು
ಧನದ ತೂಕ ಹೆಚ್ಚಾದರೆ ದಾನ
ಬೇಕೆನಿಸಿದ್ದನೆಲ್ಲ ಪಡೆದುಕೊಂಡರೆ ಅದು “ಯಶಸ್ಸು’
ಪಡೆದಷ್ಟನ್ನೇ ಅನುಭವಿಸಿದರೆ ಅದು”ಆನಂದ’
ಇರುವುದರಲ್ಲಿಯೇ ಸುಖವಿದ್ದರೆ ಅದು “ನೆಮ್ಮದಿ”
ಇರುವುದೆಲ್ಲವನ್ನು ಬಿಟ್ಟುಕೊಟ್ಟರೆ ಅದು “ಸಂತೃಪ್ತಿ”
ನೀವು ಬದುಕಿರುವವರೆಗೆ ಮಾತ್ರ ನಿಮಗೇ ಸ್ಥಾನ ನೀವು ಸತ್ತಾಗ ಮುಟ್ಟಿದರೆ ಮಾಡಬೇಕು ಸ್ನಾನ ಇಷ್ಟೇ ತಿಳಿಯೋ ಈ ಆಡಂಬರದ ಜೀವನ …
ಜೀವನದ ಬಗ್ಗೆ ಎರಡು ಮಾತಿನಲ್ಲಿ ಹೇಳಬೇಕೆಂದರೆ
ಕಣ್ಣಿಗೆ ಇಷ್ಟವಾಗಿದ್ದು ಕೈಯಲ್ಲಿ ಇರುವುದಿಲ್ಲ ಮನಸ್ಸಿಗೆ ಇಷ್ಟವಾಗಿದ್ದು ಜೀವನದಲ್ಲಿ ಸಿಗುವುದಿಲ್ಲ


  • ಶ್ರೀಕಾಂತ್ ಹಡಪದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading