ಮನುಜನ ಬದುಕಿನ ವಿವಿಧ ಮಜಲುಗಳನ್ನು ಸಾರುವ ಸಾಲುಗಳು

ತಮ್ಮ ಚೊಚ್ಚಲ ಕೃತಿಯ ಹಸ್ತ ಪ್ರತಿಗೆ ಕಾವ್ಯ ಪ್ರಶಸ್ತಿಯನ್ನು ಪಡೆದು ಉತ್ತಮ ಕವಯಿತ್ರಿಯಾಗಿ ಗುರುತಿಸಿಕೊಂಡವರು ಶ್ರೀಮತಿ ಅನ್ನಪೂರ್ಣ ಪದ್ಮಶಾಲಿರವರು. ಅವರ ‘ಗುರುತಿನ ಕೊರತೆಗಳು’ ಕವನಸಂಕಲನದ ಕುರಿತು ಕವಿ ನಾರಾಯಣ ಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಗುರುತಿನ ಕೊರತೆಗಳು (ಕವನಸಂಕಲನ)
ಲೇಖಕರು : ಅನ್ನಪೂರ್ಣ ಪದ್ಮಶಾಲಿ
ಪ್ರಕಾಶನ : ಲಿಖಿತ್ ಲಿನಾ ಪ್ರಕಾಶನ
ಬೆಲೆ : 100 ರೂಪಾಯಿಗಳು

ಕನ್ನಡ ಸಾಹಿತ್ಯದ ಬರವಣಿಯು ಸೆಳೆತ, ಇಂದು ಕನ್ನಡ ಸಾಹಿತ್ಯ ಬಹಳಷ್ಟು ಜನರನ್ನು ಸೆಳೆಯುತ್ತಿದೆ. ಅಂಥದೊಂದು ಶಕ್ತಿ ಈ ನಮ್ಮ ಕನ್ನಡ ಸಾಲುಗಳಿಗೆ ಇದೆ. ನೂರಾರು ಜನರು ಬರಹಗಾರರಾಗಬಹುದು. ಅದರೆ ಆ ಬರಹವು ಕಲಾತ್ಮಕವಾಗಿ ಓದುಗರ ಮನಸ್ಸನ್ನು ಸೆಳೆಯಬೇಕು. ಆ ಬರಹವು ಬದುಕಿನ ಅಸ್ಮಿತೆಯಿಂದ ರೂಪಗೊಂಡು, ಎದೆಯ ಭಾವದಿಂದ ಹೊರಬರಬೇಕು ಆ ಬರಹವನ್ನು ಮಾತ್ರ ಓದುಗರು ಕನ್ನಡ ಸಾಹಿತ್ಯ ಲೋಕ ಗುರುತಿಸುತ್ತದೆ.

ನವ್ಯ ಸಾಹಿತ್ಯ ಲೋಕದಲ್ಲಿ ಇತ್ತೀಚೆಗೆ ಬಹಳಷ್ಟು ಕವಯಿತ್ರಿಯರು ಲೇಖನ ಕಥೆ ಕವನ ಬರೆಯುತ್ತಾ ಗುರುತಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗುತ್ತಿದ್ದಾರೆ. ತಮ್ಮ ಚೊಚ್ಚಲ ಕೃತಿಯ ಹಸ್ತ ಪ್ರತಿಗೆ ಕಾವ್ಯ ಪ್ರಶಸ್ತಿಯನ್ನು ಪಡೆದು ಉತ್ತಮ ಕವಯಿತ್ರಿಯಾಗಿ ಗುರುತಿಸಿಕೊಂಡವರು ಶ್ರೀಮತಿ ಅನ್ನಪೂರ್ಣ ಪದ್ಮಶಾಲಿರವರು.

ಅನ್ನಪೂರ್ಣ ಪದ್ಮಶಾಲಿ ರವರು ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡವರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತಾ ಇತರ ಬರಹಗಾರರ ಬರಹವನ್ನು ಓದುತ್ತಾ ಅವರವನ್ನು ಪ್ರೋತ್ಸಾಹಿಸುವ ಗುಣವನ್ನು ಹೊಂದಿದ್ದಾರೆ ಇವರು ಇತ್ತೀಚೆಗೆ ಹೊರತಂದಿರುವ ಕೃತಿಯೇ ಜೈಸಿಂಗರಾವ್ ಅಪ್ಪಾ ಸಾಹೇಬ ಬರ್ಗೆ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಗುರುತಿನ ಕೊರತೆಗಳು ಕವನಸಂಕಲನ.

ಈ ಗುರುತಿನ ಕೊರತೆಗಳು ಕವನಸಂಕಲನಕ್ಕೆ ಮಹೇಶ ಬಳ್ಳಾರಿ ಕೊಪ್ಪಳ ಇವರು ಮನ್ನುಡಿಯನ್ನು ಬರೆದಿದ್ದು ಕವಯಿತ್ರಿ ಅನ್ನಪೂರ್ಣ ಪದ್ಮಶಾಲಿಯವರು ಕಾವ್ಯದ ಒಳ _ ಹೊರಗಿನ ದೀರ್ಘಕ್ಕೆ ಹೋದಂತೆಲ್ಲಾ ಇವರ ಕಾವ್ಯ ಖಂಡಿತ ವಿಸ್ಕೃತ ರೂಪ ಹೊಂದಬಲ್ಲದು. ಕೊಪ್ಪಳದ ಮಹಿಳಾ ಬರಹಗಾರರ ತಂಡಕ್ಕೆ ಈ ಕೃತಿಯ ಮೂಲಕ ಕವಯಿತ್ರಿಯೊಬ್ಬರು ಜೊತೆಯಾಗಿದ್ದಾರೆ. ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆಯೆಂದು ಹೇಳಿ ಶುಭ ಹಾರೈಸಿದ್ದಾರೆ.

ಆಶಯ ನುಡಿಗಳನ್ನು ಬರೆದಿರುವ ಭೀಮರಾಶಿ ಹನುಮಪ್ಪ ಹೂಗಾರ ಜನಪದ ಕಲಾವಿದರು ಮೊರಬ ಇವರು ಬರವಣಿಗೆಯ ಮೆರವಣಿಗೆಯಲ್ಲಿ ಕವಿಯ ಕನಸಿಗೆ ರೆಕ್ಕೆ ಹಚ್ಚಿದ ಕವಿತೆಗಳಿವು ಎಂಬ ಶೀರ್ಷಿಕೆಯಲ್ಲಿ ಸೊಗಸಾಗಿ ಆಶಯ ನುಡಿ ಬರೆದು ಕವಯಿತ್ರಿಗೆ ಹಾರೈಸಿದ್ದಾರೆ.

ಗುರುತಿನ ಕೊರತೆಗಳು ಈ ಕವನಸಂಕಲನದಲ್ಲಿ ಸುಮಾರು ನಲವತ್ತು ಕವಿತೆಗಳಿವೆ. ಪುಸ್ತಕದ ವಿನ್ಯಾಸ ಮುದ್ರಣವೂ ಕೂಡ ಓದುಗರ ಗಮನವನ್ನು ಸೆಳೆಯುತ್ತದೆ.

ಗಂಟನು ಕಟ್ಟೇನಿ..
ತಲೆಮ್ಯಾಲೆ ಇಂಟೇನಿ
ಹೊರಟ ಬಿಟ್ಟೇನಿ…
ನಾ ಹೊರಟ ಬಿಟ್ಟೇನಿ….

ಈ ಕವಿತೆಯ ಸಾಲುಗಳು ತವರು ತಲುಪಲು ಶೀರ್ಷಿಕೆಯ ಈ ಕವಿತೆಯಲ್ಲಿ ಬರುವ ಸಾಲುಗಳು. ಒಬ್ಬ ಹೆಣ್ಣು ಮಗಳು ತವರಿಗೆ ಹೋಗಬೇಕೆಂಬ ಕಾರಣದಿಂದ ಬೆಳಗ್ಗೆಯಿಂದ ಸಂಜೆಯ ವರೆಗೆ ಹೇಗಲ್ಲಾ ಮಾತನಾಡುತ್ತಾ, ಗಂಡನ ಜೊತೆಯಲ್ಲಿ ಹೇಗೇಲ್ಲಾ ಮುನಿಕೊಳ್ಳುತ್ತಾರೆ. ಆ ಮುನಿಸು ಗಂಡ ಹೆಂಡತಿಯ ಮಧ್ಯದಲ್ಲಿ ಹೇಗೆ ನೆಡೆಯುತ್ತದೆ ಎಂಬುದನ್ನು ಉತ್ತರ ಕನ್ನಡದ ಭಾಷೆಯಲ್ಲಿ ಬಹು ಸೊಗಸಾಗಿ ಬಣ್ಣಿಸಿದ್ದಾರೆ.

ಮುಂಜಾನೆಯೇ ಎದ್ದ ಗಂಡ ತನ್ನ ಹೆಂಡತಿಯನ್ನು ಕುರಿತು ಊರಿನ ಗುಡಿಯೊಳಗೆ ಪೂಜಾರಿ ಬಂದು ದೇವರ ಪೂಜೆಗೆ ರೆಡಿ ಮಾಡಿ ಘಂಟೆಯನ್ನು ಬಡಿಯುತ್ತಿದ್ದಾನೆ.. ನೀನು ಬೇಗ ಎದ್ದು ಗುಡಿಗೆ ಹೋಗು ಅಂದಾಗ ಆ ಗುಡಿಯ ಪೂಜಾರಿ ಸಾಯಲಿ ಇಲ್ಲ ಆ ದೇವಸ್ಥಾನದ ಘಂಟೆಯು ಮುರಿದು ಹೋಗಲಿ ನಾನು ಹೋಗಲ್ಲ ಅಂದರೆ ಹೋಗಲ್ಲ ಅಷ್ಟೇ ಎಂದು ಹಠವನ್ನು ಮಾಡುತ್ತಾಳೆ. ತಿಂಡಿಗೆ ದೋಸೆ ಮಾಡಿ ಚಟ್ನಿಯನ್ನು ರುಬ್ಬಿ ಇಟ್ಟಿದ್ದೇನೆ ತಿನ್ನು ಎದ್ದೇಳು ಮಧ್ಯಾಹ್ನದ ಸಮಯವಾದಾಗ ಅನ್ನ ಸಾರು ಮಾಡಿದ್ದೇನೆ ಸ್ವಲ್ಪನಾದರೂ ತಿನ್ನು ಎಂದು ಪ್ರೀತಿಯಿಂದ ಹೇಳಿದರೂ ಕೂಡ ತನ್ನ ಹಠವನ್ನೆ ಸಾಧಿಸುತ್ತಾಳೆ. ಸಾಯಂಕಾಲದ ಹೊತ್ತಿಗೆ ಹೆಂಡತಿಯ ಹತ್ತಿರ ಬಂದ ಗಂಡ ನಿಮ್ಮ ತವರಿಗೆ ಹೋಗು ಗಾಡಿ ಬಂದು ಹಾರನ್ ಮಾಡುತಿದೆ ನಿನ್ನ ತವರಿಗಾದರೂ ಹೋಗಿ ಬಾ ಅಂದಾಗ ಹೆಂಡತಿ ಖುಷಿಯಿಂದ ಹೇಳುತ್ತಾಳೆ ತವರಿಗೆ ಹೋಗಲು ಆದಾಗಲೇ ನಾನು ಗಂಟು ಕಟ್ಟಿ ಇಟ್ಟಿರುವೆ ಹೊರಡಲು ಅಂದಾಗ ಗಂಡನಿಗೆ ತನ್ನ ಹೆಂಡತಿ ಯಾತಕ್ಕಾಗಿ ಮುನಿಸಿಕೊಂಡಿದ್ದಾಳೆ ಎಂಬುದು ಅರ್ಥವಾಗುತ್ತದೆ. ತವರು ಮನೆಗೆ ಹೋಗಲು ಯಾವ ತರಹ ನಾಟಕವಾಡುತ್ತಿದ್ದಾಳೆ ಎಂಬ ಅರಿವಾಗುತ್ತದೆ. ಬಹಳಷ್ಟು ಸೊಗಸಾಗಿ ಈ ಕವಿತೆಯಲ್ಲಿ ಗಂಡ ಹೆಂಡತಿಯ ಸಂಭಾಷಣೆಯನ್ನು ಸಾಲುಗಳಾಗಿ ರೂಪಿಸಿದ್ದಾರೆ ಕವಯಿತ್ರಿ.

ಅಳಿಸಿದ ಅಂಗೈಗೆರೆ ಶೀರ್ಷಿಕೆ ಕವನದಲ್ಲಿ ಈ ದೇಶದ ಬೆನ್ನೆಲುಬಾದ ಅನ್ನದಾತ ಬಗ್ಗೆ ಬರೆದಿದ್ದಾರೆ.

ಅನ್ನದಾತನ ಒಡಲಿನ ಬಿಸಿಯ
ತಾಪಕೆ ಮಾತಿಲ್ಲ
ನಿಲ್ಲದ ದಾಹಕೆ ಗೆಲುವಿಲ್ಲ
ದು:ಖ ಪೀಡಿತ ಧಾತ್ರಿ ….

ಭಾರತ ದೇಶದಲ್ಲಿ ರೈತನ ಜೀವನ ಒಂದು ದುಸ್ತರವಾದ ಬದುಕಾಗಿದೆ. ಮಳೆಯಿಲ್ಲ ಬೆಳೆಯಿಲ್ಲ ರಾಸುಗಳಿಗೆ ಮೇವು ಸಿಗುತ್ತಿಲ್ಲ ಅಸಾಯಕತೆಗೆ ಒಳಗಾಗಿದ್ದಾನೆ ಕೃಷಿಯ ಹೊಲದೊಳಗೆ ಅವನಿಗೆ ಬೇಕಾದಂತಹ ಜೀವಧಾರೆಯು ಸಿಗುತ್ತಿಲ್ಲ.. ಕೃಷಿಗಾಗಿ ರೈತ ಮಾಡಿದ ಸಾಲ ಅವನ ಜೀವನವನ್ನೇ ಹಿಂಡಿ ಹಿಪ್ಪೆಯಾಗಿಸಿ ಶೂಲವಾಗಿ ಅವನ ದೇಹವನ್ನೇ ತಿವಿಯುತಿದೆ. ರೈತನು ನರಕದಂತಹ ಬದುಕನ್ನು ಅನುಭವಿಸಿ ತನ್ನ ನೋವನ್ನು ಬಿತ್ತಿ ಅನ್ನವನ್ನು ಬೆಳೆಯುತ್ತಿದ್ದಾನೆ. ಎಂದು ಬಹಳಷ್ಟು ಸೊಗಸಾಗಿ ರೈತರ ಬವಣೆಯನ್ನು ಸಾಲುಗಳಲ್ಲಿ ರೂಪಿಸಿದ್ದಾರೆ.

ಸಿಡಿಲುಗಳ ನಡುವೆ ಕವನದ ಶೀರ್ಷಿಕೆಯಲ್ಲಿ ಹೇಳುತ್ತಾರೆ.

ಲಕ್ಷೋಪಲಕ್ಷ ಜತನದ ಜತೆ
ಸಂತ್ಸರಗಳ ಮಾತು
ಕ್ರಿಸ್ತನ ಸಿಲುಬೆಯ ಮೇಲೆ
ರಕ್ತಪಾತ
ಗಾಂಧಿ ಎದೆಯ ಮೇಲೆ
ಗುಂಡಿನ ಗುರುತು

ಈ ಕವಿತೆಯಲ್ಲಿ ಕವಯಿತ್ರಿ ಅನ್ನಪೂರ್ಣ ಪದ್ಮಶಾಲಿರವರು ಪ್ರಸ್ತುತ ದಿನಗಳಲ್ಲಿ ಮನುಜನ ವ್ಯಕ್ತಿತ್ವ ಹೇಗಿದೆ? ಕಾಡಿನಲ್ಲಿ ಯಾವುದೇ ಜಾತಿ ಮತ ಕುಲಗಳಿಲ್ಲ ಅಲ್ಲಿ ಸಕಲ ಜೀವಿಗಳು ಸ್ವಾಮ್ಯ…


  • ನಾರಾಯಣ ಸ್ವಾಮಿ – ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಗಳು, ಮಾಲೂರು.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading