ಅತ್ತೆಯರಿಗೊಂದು ಕಿವಿ ಮಾತು

ಹೆಣ್ಣು ಸಂಸಾರದ ಕಣ್ಣು..ಅತ್ತೆ ಆಗುವ ಮೊದಲು ಸೊಸೆಯಾಗಿದ್ದಳು ಎನ್ನುವ ಸತ್ಯ ಅರಿತರೆ ಸಂಸಾರ ಹಾಲು ಜೇನು …ಸಂಪಿಗೆ ವಾಸು ಅವರ ಒಂದು ಒಂದು ಪುಟ್ಟ ಬರಹ ತಪ್ಪದೆ ಮುಂದೆ ಓದಿ…

ಪ್ರತಿ ಅತ್ತೆಯು ಮೊದಲಿಗೆ ಬೇರೊಂದು ಮನೆಯಿಂದ ಇನ್ನೊಂದು ಮನೆಗೆ ಸೊಸೆಯಾಗಿ ಬಂದಿರುವವಳೇ ಈ ಮಾತನ್ನು ಪ್ರತಿ ಅತ್ತೆಯೂ ಅತ್ತೆ ಯಾಗುವವರೂ ಗಮನದಲ್ಲಿಟ್ಟುಕೊಳ್ಳಬೇಕು.

ಒಂದು ಮನೆಗೆ ಒಬ್ಬ ಸೊಸೆ ಬಂದಾಗ ಆ ಹುಡುಗಿ ಅಷ್ಟು ದಿವಸಗಳೂ ತನ್ನವರಾಗಿದ್ದವರನ್ನೆಲ್ಲ ಬಿಟ್ಟು ಬೇರೆಯದೇ ಆದ ಹೊಸ ಸಂಸಾರಕ್ಕೆ ಬರುವಳು ಎಂಬುವ ಅಂಶ ಅತ್ತೆಯರಾದ ನಿಮ್ಮಲ್ಲಿ ಸದಾ ಗಮನದಲ್ಲಿರಲಿ.

ಐದೂ ಬೆರಳುಗಳು ಯಾವತ್ತೂ ಸಮ ನಿರುವುದಿಲ್ಲ, ಹಾಗೆಯೇ ಒಂದು ಮನೆಯ ಆಚಾರ, ವಿಚಾರ, ಸಂಪ್ರದಾಯ ಹೀಗೆ ಪ್ರತಿಯೊಂದು ವಿಚಾರಗಳು ಇನ್ನೊಂದು ಮನೆಯವುದಕ್ಕೆ ಭಿನ್ನವಾಗಿಯೇ ಇರುತ್ತವೆ. ಹಾಗಿದ್ದಾಗ ಸೊಸೆ ಹೊಸದಾಗಿ ಮದುವೆಯಾಗಿ ಮನೆಗೆ ಬಂದೊಡನೆ ಅದೇ ರೀತಿ ಇರಬೇಕೆಂದು ಅತ್ತೆಯಾದವಳು ಬಯಸುವುದು ಎಷ್ಟು ಸಮಂಜಸ!!

ಎಲ್ಲಾ ಅತ್ತೆಯವರಿಗೆ ನಾನು ಹೇಳುವುದಿಷ್ಟೇ  ನೀವುಗಳು ಪೂರ್ವಗ್ರಹ ಪೀಡಿತರಾಗದೆ, ನಿಮ್ಮದೇ ಯಜಮಾನಿಕೆ ನಡೆಯಬೇಕೆಂಬ ಹಠಕ್ಕೆ ಬೀಳದೆ, ಕೆಲವು ವಿಷಯಗಳಲ್ಲಿ ನೀವು ಸೋತರೂ ಅದನ್ನು ಮನಸ್ಸಿಗೆ ಹಾಕಿಕೊಂಡು ಕುಗ್ಗದಿರಿ. ಸ್ನೇಹ ,ಪ್ರೀತಿ ,ಅಭಿಮಾನದಿಂದ ನಿಮ್ಮ ಮನೆಯ ಪ್ರತಿಯೊಂದು ವಿಷಯವನ್ನು ನಿಮ್ಮ ಸೊಸೆಗೆ ಸಹನೆಯಿಂದ ಅರ್ಥೈಸಿಕೊಟ್ಟರೆ ನೀವೊಬ್ಬ ಆದರ್ಶ ಅತ್ತೆಯಾಗುವುದರಲ್ಲಿ ಎಳ್ಳಸ್ಟೂ ಸಂಶಯವಿಲ್ಲ.


  • ಸಂಪಿಗೆ ವಾಸು, ಬಳ್ಳಾರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading