ಅಕ್ಕಿ,ರಾಗಿ, ಗೋಧಿ ಬಳಸಿ ಹಾಲು ಬಾಯಿಯನ್ನು ತಿಂದಿರಬಹುದು, ಸಾಂಪ್ರದಾಯಿಕ ಶೈಲಿಯ ‘ಅವಲಕ್ಕಿ ಹಾಲು ಬಾಯಿ’ ಮಾಡುವ ಬಗೆಯನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಪದಾರ್ಥಗಳು :
- ಅವಲಕ್ಕಿ 1 ಕಪ್
- ಬೆಲ್ಲ 1 ಕಪ್
- ತೆಂಗಿನ ತುರಿ ಅರ್ಧ ಕಪ್
- ಏಲಕ್ಕಿ 2
- ತುಪ್ಪ 3 ಸ್ಪೂನ್

ಮಾಡುವ ವಿಧಾನ :
ಅವಲಕ್ಕಿಯನ್ನು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ನೆನೆಯಲು ಇಡಿ. ಈಗ ನೆನೆದ ಅವಲಕ್ಕಿ , ಬೆಲ್ಲ ,ತೆ0ಗಿಕಾಯಿ, ಏಲಕ್ಕಿ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ರುಬ್ಬಿಕೊಂಡ ಮಿಶ್ರಣಕೆ ನೀರು ಹಾಕಿ ಸ್ವಲ್ಪ ತೆಳ್ಳಗೆ ಮಾಡಿ ಕೊಂಡು ಬಾಣಲಿಯಲ್ಲಿ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟಿ ಆಗುವ ತನಕ ಗೊಟಾಯಿಸಿ .
2 ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗೋಟಯಿಸುತ್ತ ಇರಿ ಬಾಣಲಿಯಿಂದ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ .ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಚಾಕುವಿನ ಸಹಾಯದಿಂದ ಕಟ್ ಮಾಡಿ. ಈಗ ಅವಲಕ್ಕಿ ಹಾಲು ಬಾಯಿ ರೆಡಿ.
- ಶಕುಂತಲಾ ಸವಿ
