‘ಅವಳಿಲ್ಲದೆ ಹೊತ್ತು’ ಕವನ – ಬಸವಣ್ಣೆಪ್ಪ.ಕಂಬಾರ



‘ಅವಳಿಲ್ಲದೆ ಇಂದು ಹೊತ್ತು ಮುಳುಗಿದ ಸೋಜಿಗವೆ ಗೆಳೆಯಾ…’ ಕವಿ ಬಸವಣ್ಣೆಪ್ಪ.ಕಂಬಾರ ಸುಂದರ ನೆನಪುಗಳನ್ನು ಹೊತ್ತು ಬರೆದಂತಹ ಕವನ,  ಮುಂದೆ ಓದಿ… 

ಅವಳಿಲ್ಲದೆ ಇಂದು ಹೊತ್ತು ಮುಳುಗಿದ
ಸೋಜಿಗವೆ ಗೆಳೆಯಾ
ನಿರಾಸೆಯ ಹನ್ನೊಂದು ಮುಖಗಳು
ಮನೇಯ ಚಾವಡಿಯಲ್ಲಿ ಗಸ್ತು ತಿರುಗ್ಗುತ್ತಿವೆ
ಕೈಯಾಗಿನ ಪೆನ್ನು, ಅವಳೆ ಚುಚ್ಚಿದ್ದ ಹೇರ್ಪಿನ್ನು
ಎದೆಗೆ ಚುಚ್ಚುತ್ತಿವೆ

ಮನೆಮುಂದೆ ನಾಯಿ ಇಲ್ಲ
ಕಂಬದ ಮ್ಯಾಲ ಲೊಚಗುಡುವ ಹಲ್ಲಿ ಇಲ್ಲ
ಸೊಲ್ಲು ಸೊಲ್ಲಿಗು ನನ್ನ ಕಿಂವಿ ಹಿಂಡುವ ಅವಳ ಕೈ ಬಳಿ ಸದ್ದಿಲ್ಲ

ಅವಳಿಗಿ ಪ್ರೀತಿ ಅಂದರ ನಾನಲ್ಲ
ನನಗ ಪ್ರೀತಿ ಅಂದರ ಅಕೀನ ಬಿಟ್ಟ ಬ್ಯಾರೇ ಎನೂ ಕಾಣತಿಲ್ಲ

ತುಸು ಸೊಕ್ಕಿನಾಕಿ,ತೆಕ್ಕಿ ಹಿಡಿದರ ರಿಕ್ಕ ಆಗಾಕಿ
ಬಟ್ಟಲಗಣ್ಣ,ಸುರುಳಿ ಮುಂಗ್ರುಳಿನಾಕಿ
ನಾನು ಕರಿ ಹುಡುಗ,ಅಕೀ ಬಿಳಿ ಹುಡಿಗಿ
ಅದಲ ಬದಲ ಕಂಚಿ ಕದಲ

ಯಾರಿಗಾದರ ಸಿಕ್ರ ಹೇಳ್ರಿ…
ಅಕೀ ನನ್ನ ಮುಂಗಾರ ಮಳಿ…
  • ಬಸವಣ್ಣೆಪ್ಪ.ಕಂಬಾರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading