ಮರೆಯಲಾರದ ಆ ದಿನಗಳು – ಎಂ.ಎ.ಶಶಿಕುಮಾರ್

ಅವರೆಕಾಯಿಯೊಂದಿಗೆ ಬೆಸೆದ ಒಂದು ಹಳೆಯ ನೆನಪನ್ನು ಲೇಖಕ ಎಂ.ಎ.ಶಶಿಕುಮಾರ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಅವರೆಕಾಯಿ ಗಮಲಿನ ಜೊತೆಗೆ ಹಳೆಯ ನೆನಪು ತಾಜಾವಾಗಿದೆ.ನಿಮ್ಮದು ಅವರೆ ಕಾಯಿಯೊಂದಿಗಿನ ಹಳೆಯ ನೆನಪುಗಳಿದ್ದರೆ ತಪ್ಪದೆ ಹಂಚಿಕೊಳ್ಳಿ ….

ಬಹಳ ಚಿಕ್ಕ ಹುಡುಗ ನಾನು. ಇದೆ ಅವರೆಕಾಯಿ ಬರುವ ಕಾಲ ಮೈಸೂರಿನ ನಂಜುಮಳಿಗೆ, ಬನುಮಯ್ಯ ಕಾಲೇಜು ಮುಂಬಾಗ, ದೊಡ್ಡ ಮಾರ್ಕೆಟ್,ಮಂಡಿ ಮಾರ್ಕೆಟ್,ಅಗ್ರಹಾರದ ಮಾರ್ಕೆಟ್ ಹೀಗೆ ಎಲ್ಲಾ ಕಡೆಯಲ್ಲೂ ಅವರೆಕಾಯಿ ಮಾರುವವರೆ ರಾಶಿ ರಾಶಿ ಅವರೆ ಕಾಯಿ ನೋಡಲು ಬಲು ಚೆಂದ ಅದರ ಸೊನೆಯ ಗಮ ಕಿಲೋಮೀಟರ್ ಗು ದೂರಕ್ಕೆ ಮೂಗಿಗೆ ಬಡಿಯುತ್ತಿತ್ತು.

ನನ್ನ ತಾತ ಒಂದು ಭಾನುವಾರ ಬೆಳಗ್ಗೆ ನನ್ನ ಕೈ ಹಿಡಿದು ನಂಜುಮಳಿಗೆಯ ಕಡೆ ನಡೆದೆಬಿಟ್ಟರು ಅವರು ದಾಪುಗಾಲು ಸಮಕ್ಕೆ ನನಗೆ ನಡೆಯಲಾಗದೆ ಓಡುತ್ತಿದ್ದೆ. ಸುಮಾರು 25 ಕೆ.ಜಿ ಯಷ್ಟು ಸೊನೆ ಅವರೆಕಾಯಿಯನ್ನು ಕೊಂಡು ಒಂದು ಜಟಕಾ ಗಾಡಿಯಲ್ಲಿ ಪೇರಿಸಿ ಮನೆಯಕಡೆ ಹೊರಟರು.

ಕುದುರೆಗಾಡಿಯ ಸವಾರಿ ತುಂಬಾ ಇಷ್ಟವಾಗಿತ್ತು. ಮೈಸೂರು ದಸರಾ ವೇಳೆಯಲ್ಲಿ ಹೋಗುತ್ತಿದ್ದೆವು, ಇಲ್ಲವೆ ದೂರದ ಯಾವುದಾದರೊ ಕಾರ್ಯಕ್ರಮಕ್ಕೆ ಹೋಗುವಾಗ ಜಟಕಾಬಂಡಿಯಲ್ಲೆ ಹೋಗಬೇಕು. ಇಂದಿನ ಹಾಗೆ ಆಟೋರಿಕ್ಷಾ ಅಥವಾ ಬೈಕ್, ಸ್ಕೂಟರ್ ಗಳು ಇರಲಿಲ್ಲ.

ಇಂದಿಗೂ ನಮಗೆ ಕಾರಿನ ಸವಾರಿಗಿಂತ ಅಂದು ನಮ್ಮನ್ನು ಜಟಕಾಬಂಡಿಯಲ್ಲಿ ಕೊಂಡೊಯ್ಯುತಿದ್ದ ಕರಿಯಪ್ಪನ ಬಂಡಿಯ ಮಜಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಬಾಲ್ಯದ ದಿನಗಳು ಎಂದಿಗೂ ಮಾಸದ ನೆನಪುಗಳು.


  • ಚಿತ್ರ ಹಾಗು ಬರಹ : ಎಂ.ಎ.ಶಶಿಕುಮಾರ್ – ರೈಲ್ವೆ ಉದ್ಯೋಗಿ, ಚುಟುಕು,ಕವನ, ನ್ಯಾನೊ ಕಥೆ, ಚಿಕ್ಕ ಕಥೆಗಳನ್ನು ಬರೆಯುವ ಹವ್ಯಾಸವುಳ್ಳವರು,ಜೊತೆಗೆ ಲೇಖಕರು ಎಂಟನೆಯ ತರಗತಿಯಿಂದಲು ಫೋಟೋಗ್ರಫಿಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ, ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW