ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಮಗುವಿಗೆ ಹೇಗೆ ಬಾಳಬೇಕು ಎನ್ನುವುದನ್ನು ಕವಿತೆಯ ಸಾಲುಗಳಲ್ಲಿ ಸುಂದರವಾಗಿ ವರ್ಣಿಸಿದ್ದಾರೆ, ತಪ್ಪದೆ ಓದಿ…
ನೆರೆಜನರಿಗೆ ಹೊರೆಯಾಗಿ
ಅರೆಕಾಲ ಜೀವಿಸದಿರು
ಮರದ ನೆರಳಂತೆ ನೆರವಾಗಿ #ಬಾಳು
ಕರೆನುಡಿಯಲು ಸೆರೆಯಾಗಿ
ತೆರೆಮರೆಯ ಸೇರದಿರು
ಬಿರಿದ ಸುಮದ ಗಮದಂತೆ ಬಾಳು
ಕುಟುಕಾಡುವ ನಟರೊಳಗೆ
ದಿಟವಾಡುತ ಬೆರೆಯದಿರು
ಮೊಟುಕಾಗಿ ಅವರಿಂದ ಹಠವಾಗಿ ಬಾಳು
ಚಟವಿರುವ ವಟಬಿಳಲನು
ಮುಟ್ಟುತಲಿ ಕರೆಯದಿರು
ಮೆಟ್ಟುತಲಿ ಅವರನ್ನು ದೂರವಿಟ್ಟು ಬಾಳು
ತಪ್ಪಾಡುತಲಿ ಬೆಪ್ಪಾಗುತಲಿ
ಹೆಪ್ಪಾಗುತಲಿ ತೆರೆಯದಿರು
#ತೆಪ್ಪಗೆ ಸೊಪ್ಪಾಗಿ ಹಸಿರಂತೆ ಬಾಳು
ಕೆಪ್ಪನಾಗುತಲಿ #ಕುಪ್ಪೆಯಾಗುತಲಿ
ಕಪ್ಪೆಗಳಡಚುವ ದನಿಯಾಗದೆ
ತೆಪ್ಪವ ತೇಲಿಸುವ ನಾವಿಕನಾಗಿ ಬಾಳು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
