ಕೂಡು ಕುಟುಂಬದ ಯಾವುದೇ ಹಿರಿ ಕಿರಿಯ ತೀರ್ಮಾನಗಳೇ ಇರಲಿ ಅದನ್ನು ಮನೆಯ ಯಜಮಾನರೇ ತೆಗೆದುಕೊಳ್ಳುತ್ತಿದ್ದರು. ಕೂಡು ಕುಟುಂಬದ ಎಲ್ಲಾ ಸದಸ್ಯರು ರೈತಾಪಿ ಕುಟುಂಬದ ಎಲ್ಲಾ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಹೀಗಿದ್ದ ಕೂಡು ಕುಟುಂಬಗಳೆಲ್ಲ ಇಂದು ಒಂಟಿಯಾಗಿ ಬದುಕುತಿದೆ. ವೀಣಾ ಹೇಮಂತಗೌಡ ಪಾಟೀಲ್ ಅವರ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ ಲೇಖನದಲ್ಲಿ ತಪ್ಪದೆ ಮುಂದೆ ಓದಿ…
ಈ ಹಿಂದೆ ನಮ್ಮ ಹಳ್ಳಿಯ ಮನೆಗಳಲ್ಲಿ ಮನೆಯ ಹಿರಿಯರು ಅತ್ಯಂತ ಗೌರವಯುತ ಸ್ಥಾನವನ್ನು ಹೊಂದಿದ್ದು ಅವರ ಮುಂದೆ ಮಾತನಾಡಲು ಕೂಡ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೆದರುತ್ತಿದ್ದರು. ತನ್ನ ಮಗನಿಗೆ ಮದುವೆ ಮಾಡಿ ತನಗೆ ಸೊಸೆ ಬಂದಿದ್ದರೂ ಕೂಡ ಅವರು ತಮ್ಮ ಹಿರಿಯರಿಗೆ ಹೆದರುತ್ತಿದ್ದುದು ಅವರಿಗೆ ಕೊಡುತ್ತಿದ್ದ ಗೌರವಕ್ಕೆ ಸಾಕ್ಷಿಯಾಗಿತ್ತು ಕೂಡ. ಕೂಡು ಕುಟುಂಬದ ಯಾವುದೇ ಹಿರಿ ಕಿರಿಯ ತೀರ್ಮಾನಗಳೇ ಇರಲಿ ಅದನ್ನು ಮನೆಯ ಯಜಮಾನರೇ ತೆಗೆದುಕೊಳ್ಳುತ್ತಿದ್ದರು. ಮನೆಯ ಎಲ್ಲ ಚಟುವಟಿಕೆಗಳ ಕುರಿತು ಮನೆಯ ಹಿರಿಯರ ನಿಗಾ ಇರುತ್ತಿತ್ತು.
ಒಕ್ಕಲುತನವೇ ಪ್ರಧಾನ ಉದ್ಯೋಗವಾಗಿದ್ದ ಆ ಸಮಯದಲ್ಲಿ ತಂದೆಯಿಂದ ಮಕ್ಕಳಿಗೆ ಕೃಷಿ ಚಟುವಟಿಕೆಯ ಪ್ರಾಥಮಿಕ ಪಾಠಗಳಿಂದ ಆರಂಭವಾಗಿ ಎಲ್ಲಾ ಬಗೆಯ ಕೃಷಿ ಸಂಬಂಧಿತ ಕೆಲಸಗಳ ಪಾಠ ಹೆತ್ತವರಿಂದಲೇ ಪ್ರಾಯೋಗಿಕವಾಗಿ ದೊರೆಯುತ್ತಿತ್ತು. ಮುಂದೆ ಮಕ್ಕಳಿಗೆ ಈ ಜವಾಬ್ದಾರಿಗಳು, ಕೆಲಸ ಕಾರ್ಯಗಳು ನಿಧಾನವಾಗಿ ವರ್ಗಾಯಿಸಲ್ಪಡುತ್ತಿದ್ದವು. ಕೂಡು ಕುಟುಂಬದ ಎಲ್ಲಾ ಸದಸ್ಯರು ರೈತಾಪಿ ಕುಟುಂಬದ ಎಲ್ಲಾ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಜಾನುವಾರುಗಳ ಪೋಷಣೆ ಕೂಡ ಇದರಲ್ಲಿ ಸೇರಿತ್ತು. ಹಬ್ಬ ಹುಣ್ಣಿಮೆಗಳನ್ನು ಜಾತ್ರೆ ಉತ್ಸವಗಳನ್ನು ಇಡೀ ಕುಟುಂಬದ ಜನರು ಒಟ್ಟಾಗಿ ಮಾಡುತ್ತ ಸಂಭ್ರಮದಿಂದ ನಕ್ಕು ನಲಿಯುತ್ತಿದ್ದರು. ಮನೆಯ ತುಂಬಾ ಮನೆಯ ಹೆಣ್ಣು ಮಕ್ಕಳು, ನೆಂಟರು ಇಷ್ಟರು ತಮ್ಮ ಕುಟುಂಬದೊಂದಿಗೆ ಬಂದು ಇವರ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದರು.
ಮನೆಯ ಹಿರಿಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತಾ ಅನುಭವಗಳನ್ನು ಹಂಚಿಕೊಳ್ಳುತ್ತ ಸಮಯೋಚಿತವಾಗಿ ಸಲಹೆಗಳನ್ನು ನೀಡುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಕೇವಲ ಕೃಷಿ ಚಟುವಟಿಕೆಯಲ್ಲಿ ಬದುಕಿನ ಎಲ್ಲ ಬಗೆಯ ಆಶಯಗಳು ಈಡೇರುವುದಿಲ್ಲ, ಕೂಡು ಕುಟುಂಬದಲ್ಲಿ ಕೆಲಸದ ಹೊರೆ ಹೆಚ್ಚು, ಕೂಡು ಕುಟುಂಬದಲ್ಲಿ ಸ್ವಾತಂತ್ರ್ಯ ಕಡಿಮೆ ಎಂಬ ಭ್ರಮೆ ಹಾಗೂ ದುಡಿದು ತಿನ್ನಲು ಮಾರ್ಗಗಳು ನೂರಾರು ಎಂಬ ಕಾರಣದಿಂದ ಅವಿಭಕ್ತ ಕುಟುಂಬಗಳು ವಿಘಟನೆಗೆ ಒಳಗಾದವು. ರೆಕ್ಕೆ ಬಲಿತ ಹಕ್ಕಿಗಳು ತಮ್ಮ ಸಂಗಾತಿಯನ್ನು ಕಟ್ಟಿಕೊಂಡು ಊರು ಬಿಟ್ಟು ಹಾರಿಹೋದವು. ತಮ್ಮ ಮಕ್ಕಳು, ಮರಿಗಳೊಂದಿಗೆ ಅಲ್ಲೇ ನೆಲೆಸಿದರು. ಆಗಾಗ ಹಬ್ಬಗಳಿಗೆ, ರಜೆಗಳಿಗೆ ಮಾತ್ರ ಊರಿಗೆ ಬರುವುದನ್ನು ರೂಢಿ ಮಾಡಿಕೊಂಡರು.
ಫೋಟೋ ಕೃಪೆ : ಗೂಗಲ್
ಆರಂಭದಲ್ಲಿ ಇದನ್ನು ಹಿರಿಯರು ಒಪ್ಪಿದರು. ಅಲ್ಲೂ ಕೂಡ ಒಬ್ಬ ಮಗ ಕಡ್ಡಾಯವಾಗಿ ಹಿರಿಯರ ಜೊತೆಗೆ ಇದ್ದು ಅವರ ಯೋಗ ಕ್ಷೇಮವನ್ನು, ಕುಟುಂಬದ ಆಸ್ತಿಪಾಸ್ತಿಗಳನ್ನು ನಿರ್ವಹಿಸಬೇಕು ಎಂಬ ಅಲಿಖಿತ ನಿಯಮಗಳು ಜಾರಿಯಾದವು. ಆದರೆ ತನ್ನ ಉಳಿದ ಸೋದರರಿಗೆ ಸಿಗುತ್ತಿರುವ ಗೌರವ, ಸನ್ಮಾನಗಳು ತನಗೆ ದೊರೆಯುತ್ತಿಲ್ಲ. ತನ್ನ ಸಹೋದರರ ಮಕ್ಕಳ ಹಾಗೆ ತನ್ನ ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ದೊರೆಯುವುದಿಲ್ಲ. ಒಕ್ಕಲುತನದಲ್ಲಿ ಬದುಕನ್ನು ನಡೆಸುವುದು ದುಸ್ತರ, ಅನಿಶ್ಚಿತತೆಯ ಬಾಳಿಗೆ ಬವಣೆಗಳು ಹೆಚ್ಚು ಎಂಬ ಕಾರಣಗಳು ಮುಂದಾಗಿ ಆ ಒಬ್ಬ ಮಗನು ಕೂಡ ತನ್ನ ವೈಯುಕ್ತಿಕ ಹಿತಾಕಾಂಕ್ಷೆಯನ್ನು ಮೆರೆದು ಊರನ್ನು ತೊರೆದು ಪಟ್ಟಣವನ್ನು ಸೇರಿದ. ಗೂಡು ಬಿಟ್ಟ ಹಕ್ಕಿಗಳಂತೆ ಆಗಾಗ ಹಬ್ಬ, ಜಾತ್ರೆಗಳಿಗೆ ಬರುತ್ತಿದ್ದ ಮಕ್ಕಳು ಕ್ರಮೇಣ ಆಧುನಿಕ ಬದುಕಿನ ಜಂಜಡಗಳಲ್ಲಿ ಸಿಲುಕಿ, ಮಕ್ಕಳ ಶಾಲೆ ಕಾಲೇಜು ಉನ್ನತ ವಿದ್ಯಾಭ್ಯಾಸಗಳ ಅನಿವಾರ್ಯತೆಯ ಕಾರಣ ನೆವವನ್ನು ಹೂಡಿ ವರ್ಷಕ್ಕೆ ಒಂದು ಬಾರಿ ಕೂಡ ಬರದೇ ಇರುವಷ್ಟು ವ್ಯಸ್ತರಾದರು.
ಇನ್ನು ಮಾಡುವವರಿಲ್ಲದೆ ಹೊಲಗಳು ಪಾಳು ಬಿದ್ದರೆ ದನಗಳು ಕೊಳ್ಳುವವರ ಮತ್ತು ಕಟುಕನ ಪಾಲಾದವು. ಕೂಡು ಕುಟುಂಬಕ್ಕಾಗಿ ಕಟ್ಟಿಸಿದ ದೊಡ್ಡ ಮನೆಗಳು ನಿರ್ವಹಣೆಯ ಕೊರತೆಯಿಂದ ಅಭದ್ರವಾದವು. ವಯೋ ಸಹಜ ತೊಂದರೆಗಳಿಂದ ಬಳಲುತ್ತಿದ್ದ ಪಾಲಕರು ತಮ್ಮ ಕೈ ಸಾಗುವ ಸಮಯದಲ್ಲಿ ದೂರದ ಊರಿನಲ್ಲಿದ್ದ ಮಕ್ಕಳಿಗೆ ಹತ್ತು ಹಲವು ಅಡುಗೆಗಳನ್ನು ತಿಂಡಿಗಳನ್ನು ಮಾಡಿ ಕಟ್ಟುತ್ತಿದ್ದವರು ಇದೀಗ ಮುಂಚಿನ ದೈಹಿಕ ಸಾಮರ್ಥ್ಯಗಳನ್ನು ಕಳೆದುಕೊಂಡು ತಮ್ಮದೇ ವೈಯುಕ್ತಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗದೆ ಮೂಲೆ ಹಿಡಿದರು.
ತುಸು ಚೈತನ್ಯವುಳ್ಳವರು ತಮ್ಮದೇ ಮಕ್ಕಳು ಮರಿಗಳ ಜೊತೆಗಿನ ಹಿಂದಿನ ಬದುಕನ್ನು ನೆನೆಯುತ್ತಾ ಮನೆಯ ಕಟ್ಟೆಯ ಮೇಲೆ ಕುಳಿತು ಈಗಾಗಲೇ ಕೃಶವಾಗಿ ಉದ್ದವಾಗಿ ಕಾಣುತ್ತಿರುವ ಗೋಣನ್ನು ಮತ್ತಷ್ಟು ಉದ್ದವಾಗಿಸುತ್ತ ಮಕ್ಕಳ ಬರುವಿಗಾಗಿ ಕಾಯುತ್ತಿದ್ದಾರೆ. ನಿರಾಶೆಯ ನಡುವೆಯೂ ಎಂದೋ ಒಂದು ದಿನ ಮನಸ್ಸು ಬದಲಿಸಿ ಮಕ್ಕಳು ಮನೆಗೆ ಬರುತ್ತಾರೆ ಎಂಬ ಆಶಯದ, ಭರವಸೆಯ ಒಂದು ಎಳೆ ಅವರ ಬದುಕನ್ನು ಇಲ್ಲಿಯವರೆಗೂ ಹಿಡಿದಿಟ್ಟಿದೆ ಎಂದರೂ ತಪ್ಪಿಲ್ಲ. ಆದರೆ ಮತ್ತೆ ಕೆಲ ಜನರ ಬದುಕು ನಾಯಿ ಪಾಡಾಗಿದೆ.
ಇದುವರೆಗೂ ಸ್ವಾಭಿಮಾನದಿಂದ ಬದುಕುತ್ತಿದ್ದ ಅವರು ದುಡಿಯುವ ದೈಹಿಕ ಚೈತನ್ಯವಿಲ್ಲದೆ, ಆರ್ಥಿಕ ಆದಾಯವಿಲ್ಲದೆ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳು ಅವರನ್ನು ಕಾಡತೊಡಗಿದ್ದು ಸಾಮಾಜಿಕವಾಗಿ ಅವರು ಅಭದ್ರರಾಗಿದ್ದಾರೆ. ಮಕ್ಕಳನ್ನು ಕೇಳಲು ಒಂದೆಡೆ ಅವರಿಗೆ ಸ್ವಾಭಿಮಾನ ಅಡ್ಡ ಬಂದರೆ ಮತ್ತೆ ಕೆಲವೆಡೆ ಕೇಳಿದರೂ ದೊರೆಯದಂತಹ ಅವಜ್ಞೆ ಅವರ ಬದುಕನ್ನು ದುರ್ಬರಗೊಳಿಸಿದೆ. ಹಾಗೆಂದು ಎಲ್ಲ ಮಕ್ಕಳು ಕೆಟ್ಟವರಲ್ಲ. ಬದುಕಿನ ದಾರಿಯಲ್ಲಿ ಬಲು ದೂರ ಸಾಗಿ ಹೋಗಿರುವ ಅವರು ತಮ್ಮ ಪಾಲಕರ ಅಳಲನ್ನು ಕೇಳುವ ಅದಕ್ಕೆ ಪ್ರತಿ ಸ್ಪಂದಿಸುವ ವ್ಯವಧಾನವನ್ನು ಹೊಂದಿಲ್ಲ. ಅಕಸ್ಮಾತ್ ತುಸು ವ್ಯವಧಾನ ಹೊಂದಿದ್ದರೂ ಪಾಲಕರ ಮಾತುಗಳು ಅವರಿಗೆ ವ್ಯರ್ಥ ಆಲಾಪದಂತೆ ತೋರಿದರೆ ಅದು ಅವರ ತಪ್ಪಲ್ಲ. ಮತ್ತೆ ಕೆಲ ಹಿರಿಯರ ದುರಭಿಮಾನ, ಅತಿರೇಕದ ವರ್ತನೆಗಳು, ಹಠದ ಪ್ರವೃತ್ತಿ ಮಕ್ಕಳನ್ನು ಅವರಿಂದ ದೂರ ಮಾಡಿವೆ.
ಒಟ್ಟಿನಲ್ಲಿ ಹಿರಿಯರ ಪಾಡು ಶೋಚನೀಯವಾಗಿದೆ. ಅದೇನೇ ಇದ್ದರೂ ಹಿರಿಯರ ಬದುಕು ಸಹನೀಯವಾಗಬೇಕು. ಜೀವನದ ಸಂಧ್ಯಾಕಾಲದಲ್ಲಿ ಅವರು ನೆಮ್ಮದಿಯ ಬಾಳನ್ನು ಹೊಂದಬೇಕು ಆರ್ಥಿಕ ತೊಂದರೆಗಳಿಂದ, ಆರೋಗ್ಯದ ಸಮಸ್ಯೆಗಳಿಂದ ಬಳಲಬಾರದು ಹಾಗೂ ಸಾಮಾಜಿಕವಾಗಿ ತಾವು ತಳ್ಳಲ್ಪಟ್ಟರು ಎಂಬ ಭಾವ ಅವರಲ್ಲಿ ಉಂಟಾಗಬಾರದು ಎಂಬ ಕಾಳಜಿ ನಾಗರಿಕ ಪ್ರಜ್ಞೆಯನ್ನು ಹೊಂದಿರುವ ಪ್ರತಿಯೊಬ್ಬರಲ್ಲೂ ಇರಲೇಬೇಕು.
ಹಳೆಯ ಬೇರು ಹೊಸ ಚಿಗುರುಗಳು ಕೂಡಿದರೆ ಮರ ಸೊಗಸು ಎಂಬ ಮಾತಿನಂತೆ ನಮ್ಮ ಇಂದಿನ ಬದುಕನ್ನು ಭದ್ರವಾಗಿಸುವ ಅಗೋಚರ ಬೇರುಗಳಾಗಿರುವ ನಮ್ಮ ಹಿರಿಯರನ್ನು ಸೂಕ್ತವಾಗಿ ನೋಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಆ ಪ್ರಯತ್ನಗಳ ಫಲವಾಗಿ ಹಿರಿಯರ ಸಮಸ್ಯೆಗಳನ್ನು ನಾಲ್ಕು ವಿಧವಾಗಿ ಗುರುತಿಸಿದೆ.
ಅವುಗಳೆಂದರೆ
- ಆರ್ಥಿಕ ಭದ್ರತೆ
- ಆರೋಗ್ಯ ಸಮಸ್ಯೆ
- ಮಾನಸಿಕ ಒತ್ತಡ ಹಾಗೂ
- ಸಾಮಾಜಿಕ ಪ್ರತ್ಯೇಕತೆ.
ಎಲ್ಲ ಸಮಸ್ಯೆಗಳು ಒಂದೇ ರೀತಿ ಇರದಿದ್ದರೂ ಸ್ತೂಲವಾಗಿ ನೋಡಿದಾಗ ಎಲ್ಲಾ ಸಮಸ್ಯೆಗಳ ಮೂಲ ಮಾತ್ರ ಇದೇ ಎಂಬುದು ಗಮನಾರ್ಹ. ತಮ್ಮ ಎಲ್ಲ ಜೀವಿತದ ಗಳಿಕೆಯನ್ನು ತಮ್ಮ ಮಕ್ಕಳ ಓದು ಶಿಕ್ಷಣ ಉದ್ಯೋಗಕ್ಕೆ ವ್ಯಯಿಸಿರುವ ಹಾಗೂ ಕುಟುಂಬದ ದೈನಂದಿನ ಖರ್ಚು ವೆಚ್ಚಗಳಿಗೆ ವ್ಯಯಿಸಿ ಯಾವುದೇ ರೀತಿಯ ಹಣವನ್ನು ವೈಯಕ್ತಿಕವಾಗಿ ಹೊಂದಿರದ ಹಿರಿಯರು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಮಕ್ಕಳನ್ನು ಕೇಳಲಾರದ, ಕೇಳಿದರೂ ಪಡೆಯಲಾರದ ಸರ್ಕಾರದ ಸಾಲ ಸೌಲಭ್ಯಗಳು ವಯಸ್ಸಿನ ಆಧಾರದ ಮೇಲೆ ದೊರೆಯಲಾರದ ಪರಿಸ್ಥಿತಿಯಲ್ಲಿರುವ ವೃದ್ದ ಜೀವಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.

ಫೋಟೋ ಕೃಪೆ : ಗೂಗಲ್
ವಯೋ ಸಹಜವಾಗಿ ಉಂಟಾಗುವ ದೈಹಿಕ ಅಶಕ್ತತೆ, ಆರೋಗ್ಯ ಸಮಸ್ಯೆಗಳು ಮತ್ತು ಇವುಗಳ ಜೊತೆಗೆ ತೀವ್ರವಾಗಿ ಕಾಡುವ ಆರ್ಥಿಕ ಅಸಹಾಯಕತೆ ಹಾಗೂ ಮಾನಸಿಕ ಒತ್ತಡಗಳು ಅವರ ಆರೋಗ್ಯ ಇನ್ನಷ್ಟು ಹದಗೆಡಲು ಕಾರಣವಾಗಿದೆ.
ಆರ್ಥಿಕವಾಗಿ ಅಸಹಾಯಕನಾಗಿರುವ ವ್ಯಕ್ತಿಗೆ ಆತನ ಕುಟುಂಬ, ನೆರೆಹೊರೆ ಹಾಗೂ ಸಾಮಾಜಿಕವಾಗಿ ಮನ್ನಣೆ ದೊರೆಯದ ಕಾರಣ ಆ ಹಿರಿಯರು ಎಲ್ಲರೊಡನಿದ್ದು ಕೂಡ ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಸಾಮಾಜಿಕವಾಗಿ ತಾವು ದೂರಿಕರಿಸಲ್ಪಟ್ಟವರು ಎಂಬ ಭಾವ ಅವರನ್ನು ಕಾಡುತ್ತಿದೆ. ಇದು ಅವರನ್ನು ಮತ್ತಷ್ಟು ದುಃಖಕ್ಕೆ ತಳ್ಳುತ್ತದೆ.
ಒಂದು ಸುಂದರವಾಗಿ ನಳನಳಿಸುವ ಮರದ ಆರೋಗ್ಯ ಇರುವುದು ಅದರ ಬೇರಿನಲ್ಲಿ ಹಾಗೂ ಆ ಬೇರಿಗೆ ನಾವು ಸಮಯೋಚಿತವಾಗಿ ಕೊಡುವ ನೀರು, ಗೊಬ್ಬರ ಮತ್ತು ಇತರ ಪೋಷಕಾಂಶಗಳು ಆ ಗಿಡವನ್ನು ಮತ್ತಷ್ಟು ಹೆಚ್ಚು ಕಾಲ ಗಟ್ಟಿಯಾಗಿ ನಿಲ್ಲುವಂತೆ ಮಾಡುವಲ್ಲಿ ಸಹಕಾರಿ ಆಗುತ್ತದೆ… ಅಂತೆಯೇ ಸಮಾಜ ಎಂಬ ಕೌಟುಂಬಿಕ ವ್ಯವಸ್ಥೆಯ ಬೇರು ಆಗಿರುವ ವೃದ್ಧರ ಬದುಕನ್ನು ಸಹನೀಯವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ತಮ್ಮ ಸಚಿವಾಲಯದ ಮೂಲಕ ಅಹರ್ನಿಶಿ ಪ್ರಯತ್ನವನ್ನು ನಡೆಸುತ್ತಿದ್ದು ವೃದ್ಧರಿಗೆ, ಅಸಹಾಯಕರಿಗೆ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಸೂಕ್ತ ಸಮಯದಲ್ಲಿ ವೃದ್ಧರ ಸಮಸ್ಯೆಗಳಿಗೆ ಸ್ಪಂದಿಸುವ ಅವುಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಮರ್ಪಿತ ಪ್ರಯತ್ನಗಳನ್ನು ಮಾಡುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಮಾಹಿತಿಗಳ ಜ್ಞಾನದ ಕೊರತೆ, ಅವಜ್ಞೆ ಸೂಕ್ತ ಸಮಯದಲ್ಲಿ ಸಹಾಯವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಹೋಗುತ್ತದೆ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೃದ್ಧರ ಪರವಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ಆ ಯೋಜನೆಗಳ ಪ್ರಕಾರ ಸರಿಯಾದ ಮಾಹಿತಿ, ಸಕಾಲಿಕ ಹಸ್ತಕ್ಷೇಪ ಹಾಗೂ ಸಮರ್ಪಿತ ಪ್ರಯತ್ನಗಳ ಮೂಲಕ ಸಹಾಯವಾಣಿಯನ್ನು ಸ್ಥಾಪಿಸಿ ಒಂದು ಕರೆಯ ಮೂಲಕ ಅವರ ಮನೆ ಬಾಗಿಲಿಗೆ ಹಿರಿಯ ನಾಗರಿಕರಿಗಾಗಿ ಸರ್ಕಾರ ಕೊಡುತ್ತಿರುವ ಎಲ್ಲಾ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ವೃದ್ಧರ ಪರವಾಗಿ ಸರ್ಕಾರದ ಯೋಜನೆಗಳು, ಆರೋಗ್ಯ ಸೇವೆಗಳು ಹಾಗೂ ಕಾನೂನಿನ ನೆರವುಗಳನ್ನು ನೀಡುವುದರ ಜೊತೆಗೆ ಅವರ ಪರಿಸ್ಥಿತಿ, ಬುದ್ಧಿವಂತಿಕೆ,ಅವರ ಅನುಭವಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುವ ಮೂಲಕ ಅವರಿಗೆ ಆಸರೆಯಾಗಬೇಕು. ಬೇರೆ ಏನನ್ನು ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ ಮಾಹಿತಿ ನೀಡುವ ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡಿ ಅವರ ಸಮಸ್ಯೆಗಳನ್ನು ಸಂಬಂಧಿತ ಇಲಾಖೆಗಳಿಗೆ ತಲುಪಿಸುವ ಕೆಲಸವನ್ನಾದರೂ ಮಾಡಬೇಕು.
ಆ ಮೂಲಕ ಅಸಹನೀಯವಾದ ಅವರ ವೃದ್ಧಾಪ್ಯ ಜೀವನಕ್ಕೆ ನೆಮ್ಮದಿಯನ್ನು ತೃಪ್ತಿಯನ್ನು ನೀಡಬಹುದು ಏನಂತೀರಾ ಸ್ನೇಹಿತರೆ?
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
