ಹಬ್ಬಹರಿ ದಿನಗಳಲ್ಲಿ ಬಾಳೆ ಗಿಡ, ಬಾಳೆ ಎಲೆಗಳು ಮತ್ತು ಬಾಳೆ ಹಣ್ಣು ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಬಾಳೆ ಸಸಿಯಿಂದ ಹಿಡಿದು ಅದು ದೊಡ್ಡದಾಗಿ ಬಿದ್ದರೂ ಕೂಡ ಅದರಲ್ಲಿನ ಪ್ರತಿಯೊಂದು ಭಾಗವು ಉಪಯೋಗಕಾರಿಯಾಗಿದೆ. ಆದರೆ ಕೆಲವರಿಗಷ್ಟೇ ಅದರ ಉಪಯುಕ್ತತೆ ತಿಳಿದಿದೆ.
ಮೊದಲು ಹೂವಿನ ಪಕಳೆಗಳಿಂದ ಮಾಡುವ ಅಡುಗೆಯನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು :
- ಉದ್ದಿನ ಬೆಳೆ ೨ಚಮಚ
- ಕಡಲೆ ಬೆಳೆ ೨ ಚಮಚ
- ಒಣ ಮೆಣಸಿನಕಾಯಿ ನಿಮ್ಮ ರುಚಿಗೆ ತಕ್ಕಸ್ಟು
- ಹುಣಸೆ ಹಣ್ಣು
- ಹಸಿ ಕೊಬ್ಬರಿ ೧/೨ ಕಪ್
- ಎಳೆ ಹೂವಿನ ಪಕಳೆಗಳು ೪
- ಬೆಳ್ಳುಳ್ಳಿ , ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ : ಸಾಸಿವೆ, ಇಂಗು, ಕರಿಬೇವು ( ಹಲ್ಲು ಗಟ್ಟಿಯಾಗಿದ್ದರೆ ಕಡಲೆಬೇಳೆ, ಉದ್ದಿನಬೇಳೆ ಹಾಕಿಕೊಳ್ಳಬಹುದು. )
ಮೊದಲು ಬಾಳೆ ಹೂವಿನ ಪಕಳೆಯನ್ನು ಐದು ನಿಮಿಷ ನೀರಿನಲ್ಲಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಬೇಕು.
ಇನ್ನೊಂದೆಡೆ ಬಾಣಲೆಯಲ್ಲಿ ಎಣ್ಣೆಹಾಕಿ, ಅದರಲ್ಲಿ ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನಕಾಯಿಯನ್ನು ಹಾಕಿ ಕೆಂಪಗೆ ಹುರಿಯಿರಿ.
ಅದಾದ ನಂತರ ಬೇಯಿಸಿಕೊಂಡ ಬಾಳೆ ಹೂವಿನ ಪಕಳೆ ಮತ್ತು ಹುರಿದಿಟ್ಟುಕೊಂಡ ಸಾಮಗ್ರಿಗಳನ್ನು ಒಟ್ಟಿಗೆ ಹಾಕಿ ರುಬ್ಬಿಕೊಳ್ಳಿ.
ರುಬ್ಬಿದಾದ ನಂತರ ಅದಕ್ಕೆ ಮೇಲೆ ಹೇಳಿದ ಸಾಮಗ್ರಿಯನ್ನು ಹಾಕಿ ಒಗ್ಗರಣೆ ಕೊಡಿ. ಇದು ಅನ್ನದ ಜೊತೆ, ಚಪಾತಿಯ ಜೊತೆ ತಿನ್ನಲು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಉತ್ತಮವಾದ ಆಹಾರ.
ಬಾಳೆ ಹೂವಿನ ಪಕೋಡ :
ಬಾಳೆ ಹೂವು ನೋಡಲು ಎಷ್ಟು ಸುಂದರವೋ ಅದರ ಆಹಾರವೂ ಅಷ್ಟೇ ರುಚಿಕರ. ಕಣ್ಣಿಗೆ ಮನಸ್ಸಿಗೆ ಖುಷಿ ನೀಡುವ ಬಾಳೆ ಪಕೋಡ.
ಬೇಕಾಗುವ ಸಾಮಗ್ರಿಗಳು :
- ಮೈದಾ ಹಿಟ್ಟು ಸ್ವಲ್ಪ
- ಅಕ್ಕಿ ಹಿಟ್ಟು ಸ್ವಲ್ಪ
- ಖಾರದ ಪುಡಿ ಸ್ವಲ್ಪ
- ಶುಂಠಿ,ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ
- ಗರಂ ಮಸಾಲಾ ಪುಡಿ ಸ್ವಲ್ಪ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಹೂವನ್ನು ಬಿಡಿಸುವಾಗ ಅದರಲ್ಲಿ ಒಂದು ಉದ್ದದ ಕಡ್ಡಿಯಂತೆ ಇರುತ್ತದೆ. ಅದನ್ನು ಒಂದೊಂದೇ ತಗೆಯುತ್ತ ಹೋಗಬೇಕು. ಅದನ್ನು ಬಿಡಿಸಿಕೊಳ್ಳಲಿಲ್ಲವೆಂದರೆ ಅದು ಗಂಟಲೊಳಗೆ ಸಿಕ್ಕಿಕೊಳ್ಳಬಹುದು. ಇದನ್ನು ತಗೆಯುವುದು ಮುಖ್ಯ. ಹೂವಿನಲ್ಲಿರುವುದೆಲ್ಲ ಕಡ್ಡಿಯನ್ನು ಸ್ವಚ್ಛ ಮಾಡಿಕೊಂಡ ನಂತರ ಮೇಲೆ ಹೇಳಿದ ಸಾಮಗ್ರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಎಲ್ಲವನ್ನು ಪಕೋಡ ಹದಕ್ಕೆ ಮಾಡಿಕೊಳ್ಳಬೇಕು. ಜೊತೆಗೆ ಈ ಹೂವನ್ನು ಕೂಡ ಸೇರಿಸಬೇಕು. ಎಲ್ಲವು ಸಿದ್ದವಾದ ನಂತರ ಸ್ಟೋವ್ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಅದು ಚನ್ನಾಗಿ ಕಾದ ನಂತರ ಸಿದ್ಧವಾಗಿಸಿಕೊಂಡ ಈ ಮಸಾಲೆಯನ್ನು ಒಂದೊಂದಾಗಿ ಅದರಲ್ಲಿ ಹಾಕಿ ಕರೆದುಕೊಳ್ಳಬೇಕು.
ಬಾಳೆ ಹೂವಿನ ರುಚಿಯಾದ ಕುರುಕಲು ಪಕೋಡ ರೆಡಿ. ಅದನ್ನು ಗ್ರೀನ್ ಪುದಿನ ಚಟ್ನಿಯೊಂದಿಗೆ ತಿಂದರೆ ಬಲು ರುಚಿ. ನೀವು ಮನೆಯಲ್ಲಿ ಮಾಡಿ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
-
-
- ಶ್ರೀಶಿಲ್ಪಾ ಮಲ್ಲಿಕಾರ್ಜುನ್
- ಶ್ರೀಶಿಲ್ಪಾ ಮಲ್ಲಿಕಾರ್ಜುನ್
-