ಕಾಣುವನೇ ಮಹಾನಾಯಕ ಅಂಬೇಡ್ಕರ್

ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ. ಬದುಕಿನ ನಿರಂತರ ಸಂಘರ್ಷ, ದುಃಖ, ಅವಮಾನ, ಅಧ್ಯಯನ, ಹೋರಾಟ, ಹುಡುಕಾಟದಲ್ಲಿ ಹುಟ್ಟಿದ ಅವರ ಶಕ್ತಿ ಭಾರತದ ದಿಕ್ಕನ್ನು ಬದಲಾಯಿಸಿತು. 

ಕಿರುತೆರೆಗೆ ಮಹಾನಾಯಕನ ಅಗಮನವಾಗಿದೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಭರ್ಜರಿಯಾಗಿ ಪ್ರಜ್ವಲಿಸುವ ಸೂರ್ಯನ ಪ್ರಕಾಶದಂತೆ, ಜನರಿಗೆ ತುಸು ಹೆಚ್ಚೆ ಕುತೂಹಲ ಕೆರಳಿಸಿದೆ. ಬರಿ ಅತ್ತೆ- ಸೊಸೆ ಜಗಳ, ಪ್ರೀತಿಗೆ ಶ್ರೀಮಂತಿಕೆಯ ಲೇಪನ ಹೆಣ್ಣು ಎಂದರೆ ಕಣ್ಣಿರಿನ ಸೆಲೆ ಎಂಬಂತೆ ಮತ್ತೊಂದು ಕಡೆ ಹೊಟ್ಟೆಯ ಕಿಚ್ಚಿನ ಅಗರ ಎಂಬ ಪಾತ್ರಗಳು, ಅಗತ್ಯಕ್ಕಿಂತ ಹೆಚ್ಚಾಗಿ ಬಣ್ಣ ಬಳಿದುಕೊಂಡ ಕಳನಾಯಕಿಯರ ಹಾರಟ ಇವುಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಎನ್ನಬಹುದು ಈ ಧಾರಾವಾಹಿಯ ಅಗಮನ.

1
ಫೋಟೋ ಕೃಪೆ : Bollyy

ವಾಸ್ತವವಾಗಿ ಕಿರುತೆರೆಯ ಮುಖಾಂತರ ಸಾಮಾಜಿಕ ಜವಾಬ್ದಾರಿ ಎಂಬ ಹೊಣೆ ಧಾರಾವಾಹಿ ನಿರ್ದೇಶಕರಿಗೆ ಇದೆಯೇ ಎಂಬ ಚಿಂತನೆ ಇತ್ತೀಚಿಗೆ ಕಾಡುತ್ತದೆ. ಏಕೆಂದರೆ ಹೆಣ್ಣು ಆಗರ್ಭ ಶ್ರೀಮಂತನಲ್ಲಿ ಸದ್ಗುಣ ಹುಡುಕುತ್ತಾಳೆ (ಧಾರಾವಾಹಿಯಲ್ಲಿ ). ದುಪ್ಪಟ್ಟು ವಯಸ್ಸಾಗಿದ್ದರೂ ಅವನನ್ನು ಪ್ರೀತಿಸುತ್ತಾಳೆ. ನಾಯಕನಿಗೆ ದೊಡ್ಡ ಬಂಗಲೇ, ಜೊತೆಗೆBMW ಕಾರ್ ಇರಲೇಬೇಕು ಎಂಬ ಅಘೋಶಿತ ನಿಯಮ ಇದೆಯೇನೂ  ಎಂಬಂತೆ ಭಾಸವಾಗುತ್ತದೆ.

ಕಥೆ ಆರಂಭ ಮಧ್ಯಮ ವರ್ಗದ ಕುಟುಂಬದಿಂದ ಆದರೆ ಕಥೆ ಸಾಗುವದು ಹಂತ ಹಂತವಾಗಿ ಕಾಲ್ಪನೆಗೂ ನಿಲುಕದ, ವರ್ತಮಾನಕ್ಕೂ ಹತ್ತಿರವಿರದ ದೃಶ್ಯಗಳು, ಒಬ್ಬ ಕಳ ನಾಯಕನಿಂದ ಇಬ್ಬರು ಕಳನಾಯಕಿಯರು ಬಡ್ತಿಯಾಗಿದ್ದಾರೆ. ಸುಂದರ ಸಂಬಂಧಗಳನ್ನು ಎಷ್ಚು ಅದ್ಬುತವಾಗಿ ದೂರ ಮಾಡಬಹುದು ಎಂಬುದನ್ನು ಈ ಕಳನಾಯಕಿಯರ ಮುಖಾಂತರ ಮಹಾಜನತೆಗೆ ದರ್ಶನ ಮಾಡಿಸುತ್ತಾರೆ. ಪ್ರೀತಿಗೆ ಅಂತಸ್ತು ಇರಲೇ ಬೇಕು. ಒಂದು ಸುಂದರ ಹೆಣ್ಣು ಅದರಲ್ಲೂ ಮಧ್ಯಮವರ್ಗದ ಹೆಣ್ಣು ಮೌಲ್ಯಗಳಿಗಿಂತ ಹಣಕ್ಕೆ ದಾಸಿಯಾಗುತ್ತಾಳೆ ಎಂದು. ಅಲ್ಲದೆ  ಕ್ರೋಧ, ಮತ್ಸರ, ದುರಾಸೆ, ಅಪನಂಬಿಕೆಯೇ, ಕೋಪ ಕ್ರೌರ್ಯ ಇವುಗಳೆ ಪಾತ್ರದ ಜೀವಾಳವಾಗಿವೆ.

ಪ್ರಾಮಾಣಿಕತೆ, ಸಹನೆ, ತ್ಯಾಗ, ಒಲುಮೆ, ಸರಳತೆ, ಬಾಂಧವ್ಯ ಒಂದು ಕಾಲದ ಧಾರಾವಾಹಿಗಳು ‘ಜನಮಾಸ’ ಗೆದ್ದು ಬದುಕಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಿದ್ದವು. ಈಗ ಇವೆಲ್ಲ ದೃಶ್ಯ ಮಾಧ್ಯಮದಲ್ಲಿ  ಮೂಲೆಗುಂಪಾಗಿದೆ.

ದೃಶ್ಯಮಾಧ್ಯಮ ಬಹಳ ಪರಿಣಾಮಕಾರಿ. ಹಿರಿಯರಿಂದ ಎಳೆಯರವರೆಗೂ ಇಲ್ಲಿಯ ವಿಷಯಗಳು ಸಮಾಜದಲ್ಲಿ ವ್ಯಾಪಕವಾಗಿ ಸಂಚಲನ ಉಂಟುಮಾಡುತ್ತದೆ. ಸಂಜೆಯಾದರೆ ಮಕ್ಕಳು- ಹಿರಿಯರು- ಕೆಲಸದಿಂದ ಮರಳಿ ಮನೆಗೆ ಬಂದ ಮಹಿಳೆ, ಪುರುಷರು ಎಲ್ಲರೂ ಒಟ್ಟಾಗಿ ವೀಕ್ಷಣೆ ಮಾಡುತ್ತಾರೆ. ಮನರಂಜನೆ ಬದುಕಿನ ಪಾಠವನ್ನು ತಿಳಿಸಬಹುದು. ಆದರೆ ಇಲ್ಲಿ ಸಹನೆ, ಶಾಂತಿ ದೃಶ್ಯಗಳೆ ಮಾಯವಾಗಿ ಆಕ್ರೋಷ- ದ್ವೇಷ- ವೈಭವೀಕರಿಸುತ್ತವೆ.

2
ಫೋಟೋ ಕೃಪೆ : The Indian Express

ತಣ್ಣನೆಯ ಸಂಯಮದ ಮನಸ್ಥತಿ ಕಾಪಡುವ ಯಾವ ಪ್ರಯತ್ನವು ಇಲ್ಲ. ಇಂತಹ ಸಮಯದಲ್ಲಿ ಬಂದಿರುವ ಮಹಾನಾಯಕ ಸಹಜವಾಗಿ ಎಲ್ಲರ ಕುತೂಹಲ ಕೆರಳಿಸಿದೆ. ಎಳೆಯರಂತೂ ತದೇಕ ಚಿತ್ತದಿಂದ ಕಣ್ತುಂಬಿಕೊಳ್ಳುತ್ತಾರೆ. ಈ ಧಾರಾವಾಹಿಯಲ್ಲಿ ಬರುವ ಅಂಬೇಡ್ಕರ್ ಪಾತ್ರ ನೋಡುಗರ ಮನಸ್ಸಿನಲ್ಲಿ ಆಳವಾಗಿ ಇಳಿಯುತ್ತದೆ. ಅವರ ಜೀವನ ತೆರೆದ ಪುಸ್ತಕ. ಬದುಕಿನ ನಿರಂತರ ಸಂಘರ್ಷ, ದುಃಖ, ಅವಮಾನ, ಅಧ್ಯಯನ, ಹೋರಾಟ, ಹುಡುಕಾಟದಲ್ಲಿ ಹುಟ್ಟಿದ ಅವರ ಶಕ್ತಿ ಭಾರತದ ದಿಕ್ಕನ್ನು ಬದಲಾಯಿಸಿತು. ಈಗ ಇದು ಇತಿಹಾಸವಾದರೂ ಪ್ರಖರವಾದ ಸತ್ಯ. ಅವರ ಸೈಧ್ಯಾತಿಕ ನಿಲುವು, ಅವರ ಆದರ್ಶ, ಸಮಕಾಲಿನ ನಾಯಕರೊಂದಿಗಿನ ಸ್ನೇಹ, ಭಿನ್ನಾಭಿಪ್ರಾಯ ಇದ್ದರು ತೊಡಕಾಗದ ಗೆಳೆತನ ಎಲ್ಲವನ್ನು ಇಂದಿನ ಎಳೆಯರು, ಹಿರಿಯರು ತಿಳಿಯಬೇಕು.

ಹೊಸ ಜೀವನ್ಮುಖಿಯೊಂದು ವಾಹಿನಿಯ ಮುಖಾಂತರ ಹರಿಯುವದೇ ಜನಮಾನಸದಲ್ಲಿ ಕಾದು ನೋಡಬೇಕಿದೆ .


  • ರೇಶ್ಮಾಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW