ಬಾಳೆ ದಿಂಡಿನಲ್ಲಿ ಮನುಷ್ಯನಿಗೆ ಎದುರಾಗುವ ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯಿದೆ ಎಂದು ಆಯುರ್ವೇದ ಹೇಳುತ್ತದೆ. ಇದರ ಮಹತ್ವದ ಕುರಿತು ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಯಾವುದೇ ಬಾಳೆ ಮರದಲ್ಲಿ ಬಾಳೆ ಗೊನೆ ಕಟಾವು ಮಾಡಿದ ನಂತರ ಕಡಿದು ಹಾಕುತ್ತೇವೆ ಕೃಷಿಗೆ ಗೊಬ್ಬರ ಆಗುತ್ತದೆ. ಬಾಳೆ ದಿಂಡಿನಿಂದ ಪಲ್ಯ ಇತ್ಯಾದಿ ಮಾಡಿ ಸೇವಿಸುವುದು, ಬಾಳೆದಿಂಡಿನ ನೀರು ಕುಡಿಯುವ ಪದ್ಧತಿ ಕೂಡ ಇದೆ. ಬಾಳೆ ಮರದ ಒಳಗಿನ ತಿರಳನ್ನ ಬಾಳೆ ದಿಂಡು ಅನ್ನುತ್ತಾರೆ ಈ ದಿಂಡಿನಲ್ಲಿ ಅನೇಕ ಔಷದಿ ಅಂಶಗಳಿದೆ. ಇದು ಮೂತ್ರನಾಳದ ಸೋಂಕು ನಿವಾರಿಸುತ್ತದೆ ಎಂದು ಆಯುರ್ವೇದದಲ್ಲಿದೆ.
ಇದರಲ್ಲಿ ವಿಟಮಿನ್ B6, ಪೊಟ್ಯಾಶಿಯಂ ಅಂಶದ ಜೊತೆಗೆ ಡೈ-ಯುರೇಟಿಕ್ ಗುಣ ಲಕ್ಷಣ ಒಟ್ಟಿಗೆ ಸೇರಿ ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಸೋಂಕು ನಿಯಂತ್ರಿಸುತ್ತದೆ.
ಬಾಳೆದಿಂಡಿನ ನೀರು ತಯಾರಿಸಿಕೊಳ್ಳುವ ವಿಧಾನ :
ಬಾಳೆ ಮರದ ದಿಂಡಿನ ಮೇಲಿನ ಪದರ ಪದರವಾದ ಹೊದಿಕೆ ತೆಗೆಯಿರಿ. ಅದರ ಒಳಗಿನ ತಿರುಳಿನ ದಿಂಡು ತೆಗೆದು ತೊಳೆದು, ಸಣ್ಣ ತುಂಡರಿಸಿ, ಮಿಕ್ಸಿ ಮಾಡಿ, ನಂತರ ಸೋಯಿಸಿ. ಇದಕ್ಕೆ ಚಿಟಿಕೆ ಉಪ್ಪು, ಕಾಳುಮೆಣಸು ಪುಡಿ ಸೇರಿಸಿಯೂ ಕುಡಿಯುತ್ತಾರೆ, ಕೆಲವು ಕಡೆ ನಿಂಬೆರಸ ಬೆಲ್ಲ ಅಥವ ಸಕ್ಕರೆ ಸೇರಿಸಿ ಪಾನಕದಂತೆ ಸೇವಿಸುತ್ತಾರೆ.
- ಅರುಣ್ ಪ್ರಸಾದ್
