ನಾನು ಎಲ್ಲಾ ಬಗೆಯ ಎಕ್ಸಸೈಜ್ ಮಾಡ್ತೀನಿ, ಊಟದಲ್ಲೂ ಅಷ್ಟೇ. ಡಯಟ್ ನ ತುಂಬಾ ಕಟ್ಟುನಿಟ್ಟಾಗಿ ಫಾಲೋ ಮಾಡ್ತೀನಿ, ಆದರೂ ಕೂಡ ನನ್ನ ಸೊಂಟದ ಸುತ್ತಲಿನ ಬೊಜ್ಜು ಕಡಿಮೆಯಾಗುತ್ತಿಲ್ಲ. ಏನು ಮಾಡೋದು ಅಂತ ತೋಚೋದಿಲ್ಲ ಎಂದು ಹೇಳುವ ನೂರಾರು ಜನರನ್ನು ನಾವು ಪ್ರತಿದಿನ ನೋಡುತ್ತೇವೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಬೆಲ್ಲಿ ಫ್ಯಾಟ್ ಎಂಬ ಬೊಜ್ಜು ಹಾಗೂ ಅದರ ಮೂಲ ’ ತಪ್ಪದೆ ಮುಂದೆ ಓದಿ…
ನಿಜ… ಡೊಳ್ಳು ಹೊಟ್ಟೆಯ ಗಣಪನನ್ನು ಪೂಜಿಸುವ ನಾವು ನಮ್ಮ ಹೊಟ್ಟೆ ದೊಡ್ಡದಾದರೆ ಇನ್ನಿಲ್ಲದ ಬೇಸರ, ಮುಜುಗರ ಪಟ್ಟುಕೊಳ್ಳುತ್ತೇವೆ ಹಾಗೂ ಅದನ್ನು ನಿವಾರಿಸಲು ಪ್ರಯತ್ನಗಳನ್ನು ಕೂಡ ಮಾಡುತ್ತೇವೆ.ಎಷ್ಟೋ ಬಾರಿ ನಾವು ರೋಗದ ಲಕ್ಷಣಗಳಿಗೆ ಚಿಕಿತ್ಸೆ ಮಾಡುತ್ತೇವೆಯೇ ಹೊರತು ರೋಗದ ಮೂಲವನ್ನಲ್ಲ. ಸೊಂಟದ ಸುತ್ತಲಿನ ಬೊಜ್ಜು ಕೂಡ ಅಷ್ಟೇ, ಕೇವಲ ಅತಿಯಾಗಿ ತಿನ್ನುವುದರಿಂದ, ವ್ಯಾಯಾಮರಹಿತ ಜೀವನ ಶೈಲಿಯಿಂದ ಮಾತ್ರ ಬೊಜ್ಜು ಬರುವುದಿಲ್ಲ. ಬೊಜ್ಜು ಬರಲು ಹತ್ತು ಹಲವಾರು ಕಾರಣಗಳಿವೆ . ಒಂದೊಂದಾಗಿ ಅವುಗಳನ್ನು ಅರಿತುಕೊಂಡರೆ ನಮಗೆ ತೊಂದರೆಯ ಮೂಲದ ಅರಿವಾಗುತ್ತದೆ.
ಬೆಲ್ಲಿ ಫ್ಯಾಟ್ ಎಂದು ಇಂಗ್ಲೀಷಿನಲ್ಲಿ ಕರೆಯಲ್ಪಡುವ ಈ ಹೊಟ್ಟೆಯ ಬೊಜ್ಜು ಪುರುಷರಲ್ಲೂ ಹೆಚ್ಚು ಇದಕ್ಕೆ ಕೇವಲ ವಂಶವಾಹಿಗಳು ಮಾತ್ರ ಕಾರಣವಲ್ಲ ಬದಲಾಗಿ
- ಅತಿಯಾದ ಧೂಮ್ರಪಾನ: ದೇಹದಲ್ಲಿ ಕಾರ್ಟಿಸೋಲ್ಗಳ ಪ್ರಮಾಣವನ್ನು ಹೆಚ್ಚಿಸಿ ಕೊಬ್ಬು ಶೇಖರವಾಗಲು ಅದರಲ್ಲೂ ಹೊಟ್ಟೆಯ ಸುತ್ತಲೂ ಹೆಚ್ಚು ಶೇಖರವಾಗಲು ಅವಕಾಶ ಮಾಡಿಕೊಡುತ್ತದೆ.
- ಕುಡಿತ : ಆಲ್ಕೋಹಾಲ್ ನಲ್ಲಿರುವ ಹೆಚ್ಚಿನ ಕ್ಯಾಲೊರಿಗಳು ಹೊಟ್ಟೆಯ ಹಾಗೂ ಸೊಂಟದ ಸುತ್ತಣ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.
- ವ್ಯಾಯಾಮರಹಿತ ಜೀವನಶೈಲಿ: ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಹೊಂದಿರದ ಕಾರಣ ಶೇಖರವಾದ ಕೊಬ್ಬಿನಿಂದ ತೂಕ ಹೆಚ್ಚಳ ಹಾಗೂ ಸೊಂಟದ ಸುತ್ತಲ ಬೊಜ್ಜಿಗೆ ಕಾರಣವಾಗುತ್ತದೆ.
- ಆಹಾರ ಸೇವನೆ : ಅಸಮತೋಲಿತ ಆಹಾರ ಸೇವನೆ ಹಾಗೂ ಅತಿಯಾದ ಸಂಸ್ಕರಿತ ಆಹಾರ ಸೇವನೆಯ ಪರಿಣಾಮವಾಗಿ ತೂಕ ಹೆಚ್ಚಾಗುವ ಸಾಧ್ಯತೆ ಬಹಳ ಒತ್ತಡ. ದೈನಂದಿನ ಬದುಕಿನಲ್ಲಿ ವಿಪರೀತ ಒತ್ತಡವನ್ನು ಅನುಭವಿಸುವವರ ಕಾರ್ಟಿಸೋಲ್ ಮಟ್ಟ ಹೆಚ್ಚಾಗುವ ಕಾರಣ ಅವರು ಹೆಚ್ಚು ಹೆಚ್ಚು ತಿನ್ನುತ್ತಾರೆ ಇದು ಕೂಡ ಅವರ ಬೊಜ್ಜಿಗೆ ಕಾರಣವಾಗುತ್ತದೆ.
- ನಿದ್ರಾರಾಹಿತ್ಯತೆ: ನೆಮ್ಮದಿಯ ನಿದ್ರೆಗೆ ಅವಕಾಶವಿಲ್ಲದ ರೀತಿಯ ಒತ್ತಡ ಹಾಗೂ ಅತಿಯಾದ ಸ್ಕ್ರೀನ್ ಟೈಮ್ ನಿಂದಾಗಿ ನಿದ್ರೆಯಿಂದ ವಂಚಿತರಾಗುತ್ತಾರೆ. ಅಪೂರ್ಣವಾದ ನಿದ್ರೆಯ ತೊಂದರೆಯನ್ನು ಅನುಭವಿಸುವವರು ಕೂಡ ಬೊಜ್ಜಿನಿಂದ ಬಳಲುತ್ತಾರೆ. ಅತಿಯಾದ ಹೊಟ್ಟೆಯ ಸುತ್ತಣ ಬೊಜ್ಜು ಕೇವಲ ನೋಡಲು ಮುಜುಗರ ಇಲ್ಲವೇ ಅಸಹ್ಯವನ್ನು ಉಂಟು ಮಾಡುವುದಿಲ್ಲ ಬದಲಾಗಿ ಅನೇಕ ದೈಹಿಕ ತೊಂದರೆಗಳಿಗೆ ಕಾರಣವಾಗುತ್ತದೆ.
ಹೊಟ್ಟೆಯ ಸುತ್ತಲೂ ಹೆಚ್ಚಿದ ಬೊಜ್ಜು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಫ್ಯಾಟಿ ಲಿವರ್ ನ ತೊಂದರೆಯಿಂದಾಗಿ ಪಿತ್ತಕೋಶದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ.
ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲನ್ನು ಕುಂಠಿತಗೊಳಿಸಿ ಕೆಟ್ಟ ಕೊಲೆಸ್ಟ್ರಾಲನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾರ್ಮೋನುಗಳ ಅಸಮತೋಲನಕ್ಕೆ ಹಾಗೂ ಪಿ ಸಿ ಓ ಎಸ್ ತೊಂದರೆಗೆ ಕಾರಣವಾಗುತ್ತದೆ. ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸಿ ಟೈಪ್ ಟು ಡಯಾಬಿಟಿಸ್ ಗೆ ಕಾರಣವಾಗುತ್ತದೆ. ರಕ್ತದ ಒತ್ತಡವನ್ನು ಹೆಚ್ಚಿಸಿ ಹೃದಯದ ಕಾರ್ಯಕ್ಷಮತೆಗೆ ಕಂಟಕವಾಗುತ್ತದೆ, ಹೃದಯಕ್ಕೆ ಹೆಚ್ಚು ಒತ್ತಡ ಹೇರುತ್ತದೆ.
ನಿಮಗೆ ಇನ್ನೊಂದು ಆಸಕ್ತಿಕರ ವಿಷಯ ಗೊತ್ತಿರಬಹುದು ಬಹಳಷ್ಟು ಚಲನಚಿತ್ರ ತಾರೆಯರು ತಾವು ಅತಿಯಾದ ಒತ್ತಡಕ್ಕೆ ಒಳಗಾದಾಗ ಹೆಚ್ಚು ತಿನ್ನುತ್ತೇವೆ ಎಂಬುದನ್ನು ಸಂದರ್ಶನಗಳಲ್ಲಿ ಒಪ್ಪಿಕೊಂಡಿರುತ್ತಾರೆ. ಇದು ನಿಜವೂ ಹೌದು. ವಿಪರೀತ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಎಂಬ ಕೆಟ್ಟ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
ನಮ್ಮ ದೇಹದ ಅಡ್ರಿನಲ್ ಗ್ರಂಥಿಗಳಿಂದ ಬಿಡುಗಡೆಯಾಗುವ ಈ ಕೆಟ್ಟ ಹಾರ್ಮೋನ್ ಗಳು ಶೀಘ್ರ ದೊರೆಯುವ ಶಕ್ತಿ ಮತ್ತು ತಕ್ಷಣದ ಸಂತೃಪ್ತಿಗಾಗಿ ಅತಿಯಾದ ಸಿಹಿ ಪದಾರ್ಥಗಳನ್ನು ಹಾಗೂ ಕೊಬ್ಬಿನ ಪದಾರ್ಥಗಳನ್ನು ತಿನ್ನುವ ಆಸೆಯನ್ನು ಹೆಚ್ಚಿಸುತ್ತವೆ. ಹೆಚ್ಚಾದ ಕಾರ್ಟಿಸೋಲ್ ನ ಬಿಡುಗಡೆಯು ದೇಹದ ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಕೊಬ್ಬನ್ನು ಶೇಖರಿಸಲು ಆವಕಾಶ ಮಾಡಿಕೊಡುತ್ತದೆ. ಇನ್ನು ಹದಿಹರೆಯದ ಯುವಕರಲ್ಲಿ ಮತ್ತು ಯುವತಿಯರಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿ ಹೆಚ್ಚು ಈಸ್ಟ್ರೋಜನ್ ಗಳನ್ನು ಹಾಗೂ ಕಡಿಮೆ ಪ್ರೊಜೆಸ್ಟಿರಾನ್ಗಳನ್ನು ಬಿಡುಗಡೆ ಮಾಡುತ್ತದೆ ಇದು ಸಂತಾನ ಹೀನತೆಗೆ ಕಾರಣವಾಗುತ್ತದೆ ಕೂಡ…. ಇದೊಂದು ನಿರಂತರ ತಿರುಗಣೆಯಂತೆ ತಿರುಗುತ್ತಲೇ ಹೋಗುತ್ತದೆ.
ನೋಡಿದಿರಾ ಸ್ನೇಹಿತರೆ ?
ಸಮಸ್ಯೆಯ ಬೇರು ಇಷ್ಟು ಆಳವಾಗಿ ಹರಡಿರುವಾಗ ನಾವು ಅದರ ಕಾಂಡದ ಭಾಗಕ್ಕೆ ಅಂದರೆ ನಮ್ಮ ಕಣ್ಣಿಗೆ ಕಾಣುವ ಹೊಟ್ಟೆಯ ಸುತ್ತಲ ಭಾಗಕ್ಕೆ ಚಿಕಿತ್ಸೆ ನೀಡಿದರೆ ಸಾಲದು… ಅಲ್ವೇ ? ಪರಿಹಾರಗಳು ಖಂಡಿತವಾಗಿಯೂ ಇವೆ ನಾವೇ ಸೃಷ್ಟಿಸಿದ ನಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಒದ್ದಾಡುವ ಬದಲು ಒಂದೊಂದಾಗಿ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು.
*ಸಾಧ್ಯವಾದಷ್ಟು ಧೂಮ್ರಪಾನ ಹಾಗೂ ಮಧ್ಯಪಾನವನ್ನು ಕಡಿತಗೊಳಿಸುತ್ತಾ ನಂತರ ನಿಧಾನವಾಗಿ ನಿಲ್ಲಿಸಬೇಕು ಯಾವಾಗಲೋ ಒಮ್ಮೆ ಆದರೆ ಪರವಾಗಿಲ್ಲ…. ಆದರೆ ಆ ಯಾವಾಗಲೋ ಒಮ್ಮೆ ಎನ್ನುವುದು ಪ್ರತಿದಿನ ಆಗಬಾರದು.
*ನಾವು ಈ ಭೂಮಿಯಲ್ಲಿ ನಿಮಿತ್ತ ಮಾತ್ರರು, ನಾವು ಇದ್ದರೂ ಇರದಿದ್ದರೂ ಈ ಭೂಮಿಯಲ್ಲಿ ನಮ್ಮ ನಂತರದ ಕೆಲಸಗಳು ನಡೆದೇ ನಡೆಯುತ್ತವೆ ಎಂಬ ಮನಸ್ತತ್ವವನ್ನು ಹೊಂದಿದಾಗ ಒತ್ತಡದಿಂದ ಮುಕ್ತರಾಗಿ ತುಸು ನೆಮ್ಮದಿ ಅನುಭವಿಸಲು ಸಾಧ್ಯ. ಒತ್ತಡದಿಂದ ಮುಕ್ತರಾಗಲು ಯೋಗ, ವ್ಯಾಯಾಮ,ನಡಿಗೆಯಂತಹ ಮನೋದೈಹಿಕ ಆರೋಗ್ಯವನ್ನು ನೀಡುವ ಚಟುವಟಿಕೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಒತ್ತಡ ಮುಕ್ತರಾದಾಗ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಾಗ ಬಾಯಿ ಚಪಲಕ್ಕೆ ಕಡಿವಾಣ ತಂತಾನೆ ಬೀಳುತ್ತದೆ. ನಿಯಮಿತವಾದ ವ್ಯಾಯಾಮ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ… ಸಮಯ ಇಲ್ಲ ಎಂಬ ನೆವವನ್ನು ಹೊರತುಪಡಿಸಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಯಾಗಿಸುವ ಪ್ರಯತ್ನವನ್ನು ಮಾಡಲೇಬೇಕು ಎಲ್ಲವನ್ನು ಅದರ ತೀವ್ರತೆಯ ಮಟ್ಟಕ್ಕೆ ಹೋಗುವವರೆಗೆ ಬಿಟ್ಟುಬಿಡುವ ನಮ್ಮ ಮನಸ್ಥಿತಿ ಇಂದು ನಿನ್ನೆಯದಲ್ಲ.ಸಮಸ್ಯೆಯ ಪರಿಹಾರಗಳು ಕೂಡ ಗೊತ್ತಿಲ್ಲದ್ದೇನಲ್ಲ….. ತುಸು ಮಾನಸಿಕ ದೃಢತೆ, ನಿರಂತರತೆ, ಕೊಂಚಮಟ್ಟಿನ ಕಾಠಿಣ್ಯತೆಯನ್ನು ನಮ್ಮದಾಗಿಸಿಕೊಂಡು ತೊಂದರೆಯಿಂದ ಮುಕ್ತರಾಗುವತ್ತ ಚಿತ್ತಹರಿಸಬೇಕಷ್ಟೆ.
ಏನಂತೀರಾ ?
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ಬದುಕಿಗೊಂದು ಸೆಲೆ ‘ನಿಮ್ಮ ಮನವ ಸಂತೈಸಿಕೊಳ್ಳಿ’ (ಭಾಗ- ೬೮)
- ಬದುಕಿಗೊಂದು ಸೆಲೆ ‘ಸುಡುವ ಸೂರ್ಯನಿಗೊಂದು ಪತ್ರ’ (ಭಾಗ- ೬೯)
- ಬದುಕಿಗೊಂದು ಸೆಲೆ ‘ವೈದ್ಯೆ ಮತ್ತು ಯೋಧ ಮಹಿಳೆ’ (ಭಾಗ- ೭೦)
- ಬದುಕಿಗೊಂದು ಸೆಲೆ ‘ನಿಜವಾದ ಸೌಂದರ್ಯ’ (ಭಾಗ- ೭೧)
- ಬದುಕಿಗೊಂದು ಸೆಲೆ ‘ಒಂದು ಸಹಾನುಭೂತಿಯ ಕಥೆ’ (ಭಾಗ- ೭೨)
- ಬದುಕಿಗೊಂದು ಸೆಲೆ ‘ಜೀವನೋತ್ಸಾಹಕ್ಕೆ ಮಾದರಿ ಉಷಾ ರೈ’ (ಭಾಗ- ೭೩)
- ಬದುಕಿಗೊಂದು ಸೆಲೆ ‘ಡಾ.ಬಿಂದು ಮೆನನ್’ (ಭಾಗ- ೭೪)
- ಬದುಕಿಗೊಂದು ಸೆಲೆ ‘ಹಿರಿಯ ಮಗುವಿಗೆ ಹೊರೆಯಾಗದಿರಲಿ ಭ್ರಾತೃತ್ವ’ (ಭಾಗ- ೭೫)
- ಬದುಕಿಗೊಂದು ಸೆಲೆ ‘ಗೌರಿಶಂಕರ ಪರ್ವತ ಹಾಗೂ ರಾಧಾನಾಥ ಸಿಕದರ್ ಎಂಬ ಅಪ್ರತಿಮ ಗಣಿತಜ್ಞ’ (ಭಾಗ- ೭೬)
- ಬದುಕಿಗೊಂದು ಸೆಲೆ ‘ಜೀವನದ ಏಳು ಹಂತಗಳು… ಶೇಕ್ಸ ಪಿಯರ್’ (ಭಾಗ- ೭೭)
- ಬದುಕಿಗೊಂದು ಸೆಲೆ ‘ಬ್ರಾಹ್ಮಿ ಮುಹೂರ್ತ ಎಂಬ ಶುಭ ಸಮಯ’ (ಭಾಗ- ೭೮)
- ಬದುಕಿಗೊಂದು ಸೆಲೆ ‘ಹೀಗೊಂದು ವ್ಯಾಪಾರ, ಬದುಕಿನ ವ್ಯವಹಾರ ’(ಭಾಗ- ೭೯)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
