‘ಬಣ್ಣದ ಹನಿಗಳು’ ಕವನ – ಹೆಚ್. ಪಿ. ಕೃಷ್ಣಮೂರ್ತಿ

ಬಣ್ಣ ನನ್ನ ಒಲವಿನ ಬಣ್ಣ…ಹೋಳಿ ಹಬ್ಬಕ್ಕೆ ಹೆಚ್.ಪಿ.ಕೃಷ್ಣಮೂರ್ತಿ ಅವರ ನಾಲ್ಕು ಹನಿಗವನಗಳನ್ನು ತಪ್ಪದೆ ಮುಂದೆ ಓದಿ…

ನನ್ನ ಬದುಕನೇ
ರಂಗು ರಂಗಿನ
ಬಣ್ಣವಾಗಿಸಿದವಳ
ಮಧುರ ಸ್ಮೃತಿಯಲಿ
ಅನುಕ್ಷಣವೂ ಮೀಯುತಿಹ
ನನಗೆ
ದಿನವೂ ಹೋಳಿಯೇ!

***

ದಿನವೂ ಅವಳೊಲವ
ಬಣ್ಣದ ಭಾವಗಳಲೇ
ನನ್ನ ಅಭ್ಯಂಜನ
ನನಗೇತಕೆ ಕೃತಕ
ರಂಗಿನ ಸ್ನಾನ!

***

ಅವಳ ಹೂ ನಗೆಯಲ್ಲಡಗಿದೆ
ನೂರೊಂದು ಬಣ್ಣ
ಅವಳು ನಗುವ
ದಿನಗಳೆಲ್ಲಾ ನನಗೆ
ಹೋಳಿಯೇ ಅಣ್ಣ!

***

ನಿನ್ನ ಬದುಕ ಚಿತ್ತಾರಕೆ
ನೀನೇ ಕುಂಚಗಾರ
ತುಂಬಿಸಿಕೊಂಡು ಬಿಡು ಬಣ್ಣ
ಬಾಳಾಗುವುದು ನಯಾಗಾರ!


  • ಹೆಚ್. ಪಿ. ಕೃಷ್ಣಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading