‘ಇಲ್ಲದವಳ ಬಗೆಗಿನ ಕವಿತೆ’…ಕವಿ ಅನಾಮಿಕ 💯 ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಓದಿ….
ಅವಳ ಪಡೆದೇ ತೀರುವೆನೆಂಬ ಬಯಕೆ
ಆಗಾಗ ಪುಷ್ಠಿಯ ನೀಡುವುದು ಮನಕೆ
ಬದುಕು ಅಪೂರ್ಣವೆನಿಸಿಹುದು ಈ ಒಂಟಿತನಕೆ
ಕಷ್ಟನಷ್ಟಗಳ ಸಹಿಸಿ ದಿನಗಳ ದೂಡುತ್ತಿರುವೆ
ಅವಳ ಆಗಮನಕೆ
ಇಲ್ಲದವಳ ಬಗೆಗಿನ ಕವಿತೆ
ಆಗಾಗ ಮನವ ಕಾಡುವುದು ಬೇಸರಿಕೆ,
ಹೋಲಿಸಿ ನೆನೆದದ್ದಾಯಿತು
ಅವಳ ಚೆಲುವ ಹುಣ್ಣಿಮೆಯ ಚಂದ್ರನಿಗೆ
ಅವಳ ಬಣ್ಣವ ಕಾಮನಬಿಲ್ಲಿಗೆ
ಅವಳ ನಡಿಗೆಯ ನವಿಲಿನ ನಾಟ್ಯಕೆ
ಅವಳ ದನಿಯ ಕೋಗಿಲೆ ಕಂಠಕೆ
ಅವಳ ಮನವ ತಿಳಿನೀಲಿ ಆಗಸಕೆ
ಇಲ್ಲದವಳ ಬಗೆಗಿನ ಕವಿತೆ
ಅವಳಾಗುವಳೇ ಬರೀ ನನ್ನ ಕನವರಿಕೆ,
ಗಂಡಿಗೊಂದು ಹೆಣ್ಣೆಂದು ಸೃಷ್ಟಿಸಿದಾತನಿಂದ ಮೋಸವಾಗುವುದೆಂಬ ಭಯ
ತಡವಾದರೂ ಕೊಡುವನೆಂಬದು ಅರ್ಧ ನಿಶ್ಚಯ,
ಇನ್ನರ್ಧ ಸಂಶಯ
ಇಲ್ಲದವಳ ಬಗೆಗಿನ ಕವಿತೆ
ರಾತ್ರಿಹಗಲೆನದೆ ಬೆಂಬಿಡದೆ ಕಾಡುತಿದೆ ಅವಳ ಚಿಂತೆ.
- ಅನಾಮಿಕ 💯