ಕವಿ ನಿಜಗುಣಿ ಎಸ್ ಕೆಂಗನಾಳ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಹಸಿವು ಎಂದವರಿಗೆ
ಆ ದೇವರು ಅನ್ನವ ಕೊಡಲಿಲ್ಲ.
ಸಾಕು ಎಂದವರಿಗೆ
ಆ ದೇವರು ಕೊಡುವುದ ಬಿಡಲಿಲ್ಲ.
ದುಡಿದು ತಿನ್ನುವವರಿಗೆ ದುಡಿಮೆಗೆ
ತಕ್ಕಂತ ಪ್ರತಿಫಲ ಸಿಗಲಿಲ್ಲ.
ತಲೆ ಹೊಡೆದು ತಿನ್ನುವವರಿಗೆ
ಕಳ್ಳತನದ ದಾರಿ ಬಿಡಲಿಲ್ಲ.
ನ್ಯಾಯವಾಗಿ ಬದುಕುವವನಿಗೆ
ಸರಿಯಾದ ದಾರಿ ಕಾಣಲಿಲ್ಲ.
ಜೇಬಿಗೆ ಕತ್ತರಿಹಾಕಿ ಬದುಕುವವರಿಗೆ
ಹಣದ ಹುಚ್ಚು ಕಡಿಮೆ ಆಗಲಿಲ್ಲ.
ಇಲ್ಲಿ ಪರರ ಬದುಕಿಗೆ ಕತ್ತರಿಹಾಕಿ
ಬದುಕಿದವನಿಗೆ ಸನ್ಮಾನ ಇಟ್ಟನಲ್ಲ.
ನ್ಯಾಯವಾಗಿ ಬದುಕುವವನಿಗೆ
ಅವನಿಂದಲೇ ಬದುಕಿನ
ನೀತಿಪಾಠದ ಬಹುಮಾನ ಕೊಟ್ಟನಲ್ಲ.
- ನಿಜಗುಣಿ ಎಸ್ ಕೆಂಗನಾಳ – ಸಾಹಿತಿಗಳು, ರಂಗಭೂಮಿ,ಕಲಾವಿದರು, ಕಲಬುರಗಿ.