ದೇವನೊಬ್ಬ ನಾಮ ಹಲವು, ಇಮ್ತಿಯಾಜ್ ಖಾನ್ ಅವರ ಭಾವೈಕ್ಯತೆಯ ಕುರಿತಾದ ಒಂದು ಪುಟ್ಟ ಬರಹ ತಪ್ಪದೆ ಮುಂದೆ ಓದಿ…
ಸೂಫಿ ಕವಿ ಗಜಾಲಿಯವರ ಮರಣದ ನಂತರ, ಒಂದು ರಾತ್ರಿ ಅವರು ಒಬ್ಬನ ಕನಸಿನಲ್ಲಿ ಕಾಣಿಸಿಕೊಂಡರು, ಅವನು ಗುರುಗಳೇ ದೇವರು ನಿಮ್ಮೊಂದಿಗೆ ಏನು ಮಾಡಿದನು? ನಿಮ್ಮ ಯಾವ ಕೃತಿಗಳು ನಿಮಗೆ ಸ್ವರ್ಗವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟವು?” ಎಂದು ಕೇಳಿದನು.
ಅಲ್-ಗಜಾಲಿ ಉತ್ತರಿಸಿದರು, “ಯಾವುದೂ ಅಲ್ಲ. ಅದಕ್ಕಿಂತ ಹೆಚ್ಚಾಗಿ, ನಾನು ಒಂದು ರಾತ್ರಿ ಬರೆಯುತ್ತಿದ್ದಾಗ ನನ್ನ ಲೇಖನಿಯ ಮೇಲೆ ನೊಣವೊಂದು ಬಂದು ಕುಳಿತಿತ್ತು. ಲೇಖನಿ (ಗರಿ) ತುದಿಯಲ್ಲಿ ತೇವಾಂಶವಿದ್ದುದರಿಂದ ಅದು ಬಾಯಾರಿ ಬಂದಿರಬೇಕೆಂದು ಬಗೆದು ಅದಕ್ಕೆ ತೊಂದರೆ ಕೊಡದೇ ಬರವಣಿಗೆ ನಿಲ್ಲಿಸಿ ತೇವ ಹಿರಲು ಬಿಟ್ಟೆ. ನನ್ನ ಈ ಕರ್ಮ ದೇವನು ಮೆಚ್ಚಿಕೊಂಡನು ಮತ್ತು ಆ ಮೂಲಕ ನನ್ನನ್ನು ಕ್ಷಮಿಸಿದನು, ಸ್ವರ್ಗಕ್ಕೆ ಪ್ರವೇಶಗೊಳಿಸಿದನು.!!”
ಇದು ನಮ್ಮ ಪೂರ್ವಜರು ಬದುಕಿದ ಬಗೆ. ಅವರು ಒಂದು ನೊಣವನ್ನೂ ನೋಯಿಸಿದವರಲ್ಲ. ಅಂತಹ ಶ್ರೇಷ್ಠ ಜನ ಸಾತ್ವಿಕ ಬದುಕು. ಇಂದು ನಾವೂ ಬದುಕುತ್ತಿದ್ದೇವೆ. ಮಾತಿಗೊಂದು ಸುಳ್ಳು, ಕಪಟ, ಮೋಸ, ದಗಾಬಾಜಿ. ಮನುಷ್ಯನ ರಕ್ತ ಹರಿಸುವುದು ನೀರು ಹರಿಸುವುದಕ್ಕಿಂತಲೂ ಸುಲಭವಾಗಿದೆ. ಪರಸ್ಪರ ದ್ವೇಷ ಮಾನವೀಯತೆಯೇ ತಲೆ ತಗ್ಗಿಸುವಂತೆ ಮಾಡಿದೆ.
ದೇವರ ವಿಚಾರದಲ್ಲಿಯೇ ನಾವು ಹೆಚ್ಚು ಎಡಹುತ್ತಿದ್ದೇವೆ.
ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಜಗದೀಶನನ್ನು ಬೇರೆ ಬೇರೆ ಹೆಸರುಗಳಿಂದ ಸಂಬೋಧಿಸಿದೆ. ನೀರು ಒಂದು ಮೂಲ ವಸ್ತು ಹಲವು ಭಾಷೆಗಳಲ್ಲಿ ಹಲವು ಹೆಸರುಗಳಿಂದ (ಪಾನಿ, ವಾಟರ್ etc) ಕರೆಸಿಕೊಂಡರೆ ಅದು ತನ್ನ ಸ್ವಭಾವ, ಸ್ವರೂಪ ಕಳೆದುಕೊಂಡು ಬೇರೆ ಏನೋ ಆಗುವುದಿಲ್ಲ. ನೀರು ನಿರಾಗಿಯೇ ಉಳಿಯುತ್ತದೆ. ಹಾಗೆಯೇ ಅರೇಬಿಕ್ ಭಾಷೆಯ ಅಲ್ಲಾಹು, ಸಂಸ್ಕೃತ ಭಾಷೆಯ ಬ್ರಹ್ಮ ಮತ್ತು english ಭಾಷೆಯ creator ಬೇರೆ ಬೇರೆಯಲ್ಲ. ಒಂದೇ ಸೃಷ್ಟಿ ಶಕ್ತಿಯಾಗಿದೆ. ನಾವು ಅರಿತು ನಡೆಯಬೇಕಿದೆ ಅಷ್ಟೆ.
- ಇಮ್ತಿಯಾಜ್ ಖಾನ್
