ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ

ಆಪ್ತಸಮಾಲೋಚಕಿ , ಲೇಖಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣ ಆಕೃತಿಕನ್ನಡಲ್ಲಿ ಸದ್ಯದಲ್ಲಿಯೇ ಓದುಗರ ಮುಂದೆ ಬರಲಿದೆ. ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ನೀಡಲು ಚಂಪಾ ಚಿನಿವಾರ್ ಅವರು ಸಿದ್ಧರಿದ್ದಾರೆ. ಓದಲು ನೀವು ಸಿದ್ಧರಿದ್ದೀರಾ? ಅವರ ಕಿರುಪರಿಚಯ ನಿಮ್ಮ ಮುಂದೆ…

“ಲೇಖಕಿ, ನಿರೂಪಕಿ ಹಾಗು ಆಪ್ತಸಮಾಲೋಚಕಿ ಆಗಿರುವ ಚಂಪಾ ಚಿನಿವಾರ್ ಅವರು ಹುಟ್ಟಿದ್ದು, ಹಾಸನ ಜಿಲ್ಲೆಯ ಹಿರೀಸಾವೆಯಲ್ಲಿ  ಸೆಪ್ಟೆಂಬರ್29, 1970 ಜನಿಸಿದರು.   2002 ರಿಂದ ಕವನ, ಚುಟುಕುಗಳನ್ನು ಬರೆಯಲು ಶುರುಮಾಡಿಕೊಂಡು, 2012 ರಿಂದ ನಿರಂತರ ಬರಹ ಸಾಗಿದೆ.

ನಿಮ್ಹಾನ್ಸ್ ನ ಆಪ್ತ ಸಲಹಾ ಕೇಂದ್ರದಲ್ಲಿ ಕೌನ್ಸಲಿಂಗ್ ಕೋರ್ಸ್ ಮಾಡಿದ್ದೇನೆ. ಮತ್ತೊಂದು ಹೆಸರಾಂತ ಕೌನ್ಸಲಿಂಗ್ ಪಿ ಸಿ ಸಿ ಸಂಸ್ಥೆಯಲ್ಲಿ ಕೌನ್ಸೆಲಿಂಗ್ ಕೋರ್ಸ್ ಮುಗಿಸಿಕೊಂಡು ಈಗ ಆನ್ ಲೈನ್ ನಲ್ಲಿ ಅಥವಾ ಮುಖಾಮುಖಿ ಕೌನ್ಸಲಿಂಗ್ ಮಾಡುತ್ತಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಮಕ್ಕಳಿಗೆ ಕೌನ್ಸಲಿಂಗ್ ಮಾಡಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಅನೇಕ ಬರಹಗಳು ‘ದಿ ಡೈಲಿ ನ್ಯೂಸ್’ ಎಂಬ ದಿನ ಪತ್ರಿಕೆಯಲ್ಲಿ ಪ್ರತಿ ಶುಕ್ರವಾರ ‘ಮನಸ್ವಿನಿ’ ಎಂಬ ಅಂಕಣ ಪ್ರಕಟವಾಗುತ್ತಿದೆ. ಇದಲ್ಲದೆ ಅನೇಕ ಮಾಸ ಪತ್ರಿಕೆ, ದ್ವೈಮಾಸ ಪತ್ರಿಕೆಗಳಲ್ಲಿ, ಇಂದು ಸಂಜೆ ಪತ್ರಿಕೆಯಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿದೆ ಹಾಗು ಆಧ್ಯಾತ್ಮಿಕ ಹಾಗು ಧಾರ್ಮಿಕ ಬರಹಗಳು ಶ್ರೀ ಶೈಲಪ್ರಭ ಎಂಬ ಮಾಸಪತ್ರಿಕೆಯಲ್ಲಿ ಪ್ರತೀ ತಿಂಗಳು ಆಧ್ಯಾತ್ಮಿಕ ಲೇಖನಗಳು ಪ್ರಕಟಗೊಳ್ಳುತ್ತಿದೆ.

ಫೇಸ್ ಬುಕ್ ನಲ್ಲಿ ಕೆಲವು ಸಾಹಿತ್ಯ ಗುಂಪುಗಳಿಗೆ ಅಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮನಗರದಲ್ಲಿ ಇರುವ ನಂದಗೋಕುಲ ಎಂಬ ವೃದ್ಧಾಶ್ರಮದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


  • ಆಕೃತಿಕನ್ನಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading