ಶೋಭನಾ ಮತ್ತು ಚಿರಂಜೀವಿ ಇಬ್ಬರೂ ಸೇರಿ ಹಳ್ಳಿಯನ್ನು ಸ್ವರ್ಗವಾಗಿಸುವ ಕೆಲಸಕ್ಕೆ ಕೈ ಹಾಕಿ ಓದು ಬರಹ ಬರದ ಹಳ್ಳಿ ಮಹಿಳೆಯರಿಗೆ ಶೋಭನಾ ಒಬ್ಬ ಜ್ಞಾನದ ಶಿಕ್ಷಕಿಯಾಗಿ ಅವರನ್ನು ತೀಡುವುದರ ಜೊತೆಗೆ ಅವರಿಗೆ ಬೆಂಗವಲಾಗಿ ನಿಲ್ಲುತ್ತಾಳೆ. ಮುಂದೇನಾಗುತ್ತದೆ ಡಾ. ಕೃಷ್ಣವೇಣಿ. ಆರ್.ಗೌಡ ಅವರು ರುದ್ರವೀಣ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..
ದೈವ ನಮ್ಮನ್ನೆಲ್ಲ ಈ ಭುವಿಗೆ ಕೊಡುಗೆಯಾಗಿ ಕೊಟ್ಟು,, ಇಲ್ಲಿರುವ ಒಳ್ಳೆ ಸವಿನೋಟ ಮತ್ತು ಸವಿ ಊಟ ಸವೆದು ಪ್ರಕೃತಿಯ ಪಾಠ ಕಲಿತು ಬಂದು ಹೋಗುವ ಮಾನವನ ಮುಷ್ಠಿಯನ್ನು ಜಗತ್ತು ವಿವಿಧ ರೀತಿಯಲ್ಲಿ ಕರೆದೊಯುತ್ತದೆ ಅಲ್ಲವೇ?. ಈ ಪೀಠಿಕೆಯಲ್ಲಿ ಒಂದು ಅರ್ಥ ಭಾವನಾತ್ಮಕ ಪ್ರಪಂಚಕ್ಕೆ ಕರೆದುಕೊಂಡು ಹೋಗುವ 80 ರ ದಶಕದ ಕೆ. ಬಾಲಚಂದರ್ ನಿರ್ದೇಶನದ ಚಿತ್ರ ರುದ್ರವೀಣ. ಸಂಗೀತ ಎನ್ನುವುದು ದೇವರು ಕೊಟ್ಟ ವರ.
ಇದಕ್ಕೆ ಯಾವುದೇ ಜಾತಿ, ಭೇದ , ಮೇಲು, ಕೀಳು, ತಾರತಮ್ಯ ಇಲ್ಲಿ ಸಂಗೀತದ ಲಯಕ್ಕೆ, ನಾಟ್ಯದ ನೃತ್ಯ- ತಾಳ. ಊರ ಹೊರಗಡೆ ಗುಡ್ಡದ ಮೇಲೆ ಪ್ರದರ್ಶನ ಮಾಡುತ್ತಾ ಸಂಗೀತದ ಲಯವನ್ನು ಸೆಳೆಯುತ್ತದೆ. ಕಾರಣ ನೃತ್ಯ ಮಾಡುವ ಲಲಿತ ಹರಿ ಜನದ ಜಾತಿಯವಳಾಗಿದ್ದು ಅವಳಿಗೆ ದಸರಾದ ಒಂಭತ್ತು ದಿನಗಳಲ್ಲಿ ದೇವಿಗೆ ತನ್ನ ನಾಟ್ಯ ಪ್ರದರ್ಶನ ಮಾಡುವುದು ತುಂಬಾ ಇಷ್ಟವಿರುತ್ತದೆ. ಅದಕ್ಕೆ ಗುಡಿಯೊಳಗೆ ಪ್ರವೇಶವಿಲ್ಲದ ಕಾರಣ ಊರ ಹೊರಗಡೆ ನೃತ್ಯ ಮಾಡುವ ಪ್ರಸಂಗ ಎದುರಾಗುತ್ತದೆ. ಇನ್ನು ಊರಲ್ಲಿ ಗಣಪತಿ ಶಾಸ್ತ್ರಿ ಎನ್ನುವವರು ದೊಡ್ಡ ಸಂಗೀತ ವಿದ್ವಾಂಸರಾಗಿದ್ದು ಕಟ್ಟು ನಿಟ್ಟಿನ ಸಂಪ್ರದಾಯದೊಂದಿಗೆ ಮನೆ ಮತ್ತು ಮನೆಯವರನ್ನು ಬೆಳೆಸಿರುತ್ತಾರೆ. ಆದರೂ ಮನೆಯ ಕಿರಿಮಗನಿಗೆ ಇದು ಇಷ್ಟವಾಗದೆ ಯಾವುದೇ ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಗುಣ ಹೊಂದಿರುತ್ತಾರೆ. ತಂದೆ ಶಾಸ್ತ್ರಿಯವರಿಗೆ ಪೂರ್ತಿ ಸಲ್ಲದ ಕಾರಣ ಕಡೆಗೆ ಮಗನ ಬದಲು ಚಾರುಕೇಶ ನನ್ನು ದತ್ತು ತೆಗೆದುಕೊಂಡು ಸಂಗೀತ ಪಾಠ ಹೇಳಿ ಕೊಡುತ್ತಾರೆ. ಇದು ಮನೆಯವರಿಗೆ ವಿರೋಧ ಕಂಡರೂ ತಂದೆಯ ಕಟ್ಟು ಪಾಡಿಗೆ ಒಪ್ಪಿ ಮನೆಯ ರೀತಿ ರಿವಾಜು ನಡೆಸುತ್ತ ಇರುತ್ತಾರೆ. ಇದು ಕಿರಿ ಮಗನಾದ ಚಿರಂಜೀವಿಗೆ ಮನ ನೊಂದು ಮನೆ ಬಿಟ್ಟು ಊರಲ್ಲಿರುವ ಊರ ಸಮಸ್ಸೆ ಬಗ್ಗೆ ತನ್ನ ಜೀವನ ಮುಡಿಪಾಗಿಡುವ ಬಗ್ಗೆ ಗ್ರಾಮದತ್ತ ಗಮನ ಹರಿಸಿ ಊರ ಸ್ವಚ್ಛತೆಗೆ ಶ್ರಮಿಸಿ ಸಾರಾಯಿ ಎನ್ನುವ ಪಿಡುಗನ್ನೇ ಹೋಗಲಾಡಿಸಿ ಪ್ರತಿ ಗ್ರಾಮದ ಏಳಗೆಗೆ ನಿಲುವಾಗುತ್ತಾರೆ.

ಜೊತೆಗೆ ಲಲಿತಾಳ ಪರಿಚಯ ಪ್ರೀತಿ ಪ್ರೇಮದ ಸಂಗೀತ ಲಯದ ಜೊತೆಗೆ ಮದುವೆಯ ಸಂಧರ್ಭದಲ್ಲಿ ಗಣಪತಿ ಶಾಸ್ತ್ರಿಯ ಕಿಡಿಯಿಂದ ಕೆಲವರು ಮದುವೆ ನಿಲ್ಲಿಸಲು ಯತ್ನಕ್ಕೆ ಒಳಗದಾಗ ಊರಿಗೆ ಊರೇ ಸಾರಾಯಿ ಕುಡಿಯುವುದನ್ನು ಬಿಡುವುದಾದರೆ ನಾನು ಮದುವೆ ತ್ಯಾಗ ಮಾಡಲೂ ಸಿದ್ಧ ಎಂಬ ಪ್ರತಿಜ್ಞೆ ಇಡೀ ಊರ ಜನರಿಗೆ ಸವಾಲಾಗಿ ಕಂಡು ಕೊಳ್ಳುತ್ತದೆ.
ಶೋಭನಾ ಮತ್ತು ಚಿರಂಜೀವಿ ಇಬ್ಬರೂ ಸೇರಿ ಹಳ್ಳಿಯನ್ನು ಸ್ವರ್ಗವಾಗಿಸುವ ಕೆಲಸಕ್ಕೆ ಕೈ ಹಾಕಿ ಓದು ಬರಹ ಬರದ ಹಳ್ಳಿ ಮಹಿಳೆಯರಿಗೆ ಶೋಭನಾ ಒಬ್ಬ ಜ್ಞಾನದ ಶಿಕ್ಷಕಿಯಾಗಿ ಅವರನ್ನು ತೀಡುವುದರ ಜೊತೆಗೆ ಅವರಿಗೆ ಬೆಂಗವಲಾಗಿ ನಿಲ್ಲುತ್ತಾಳೆ. ಇತ್ತ ಮನೆ ಮತ್ತು ಮದುವೆ ತೊರೆದ ಕಿರಿ ಮಗ ಚಿರಂಜೀವಿ ಊರ ಸುತ್ತ ಮುತ್ತ ಹಳ್ಳಿಗಳಲ್ಲಿ ಸಾರಾಯಿ ಅಂಗಡಿನೇ ಇಲ್ಲದ ಹಾಗೇ ಮಾಡಿ ಜನರನ್ನು ಸ್ವವ್ಯವಸಾಯ ಮಾಡಲು ಪ್ರೆರೇಪಿಸುತ್ತಾರೆ. ಅವರಿಗೆ ಲೋಕದ ಆಗು ಹೋಗುಗಳ ಬಗ್ಗೆ ಎಚ್ಚರಿಸಿ ಮುಂದೆ ತರುವ ಕೆಲಸದಲ್ಲಿ ಇರುವಾಗ ರಾಜಕೀಯದ (MLA) ಆಗಮನದೊಂದಿಗೆ ನಡೆದ ಘಟನೆಯಲ್ಲವನು ಕೇಳಿ ಬೇಜಾರಾಗಿ ಆ ವ್ಯಕ್ತಿ ಕೂಡ ಇನ್ನು ಮುಂದೆ ಕುಡಿಯೋದನ್ನು ನಿಲ್ಲಿಸುತ್ತೇನೆ ಎಂದು ಪ್ರಮಾಣ ಮಾಡಿ ಈ ಹಳ್ಳಿಯ ವಿಚಾರವನು ದಿಲ್ಲಿಯ ಪಾರ್ಲಿಮೆಂಟ್ ವರೆಗೂ ಕೊಂಡೊಯ್ದು, ರಾಮರಾಜ್ಯ ಮಾಡಿದ ಚಿರಂಜೀವಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ರಾಮಾಪುರ ಎಂಬ ಹಳ್ಳಿಗೆ ಪ್ರಧಾನ ಮಂತ್ರಿಯವರಿಂದ ಸನ್ಮಾನದ ಸುದ್ದಿಯನ್ನು ರೇಡಿಯೋ, ಪತ್ರಿಕೆಗಳಲ್ಲಿ ಹರಡುತ್ತದೆ. ತಂದೆಯಾದ ಸಂಗೀತ ವಿದ್ವಾಂಸರಾದ ಗಣಪತಿ ಶಾಸ್ತ್ರಿ ಸನ್ಮಾನ ಮಾಡುವ ಸ್ಥಳಕ್ಕೆ ಹೋಗಿ ತಮ್ಮಲ್ಲಿರುವ ಅಹಂ ಅನ್ನು ತೊರೆದು ಮಗನ ಒಳ್ಳೆತನ ನೆನೆದು ಬೀಗಿ ಅಳುತ್ತಾರೆ. ನಾವು ಮಾನವರು ಇಲ್ಲಿ ಯಾವುದು ಸ್ಥಿರ ಅಲ್ಲ., ಕಲೆ ಯಾರ ಸ್ವತ್ತಲ್ಲ ಕಲೆಗೆ ಯಾವ ಜಾತಿ ಇಲ್ಲ ಇದೆಲ್ಲ ನಾವು ಮಾಡಿಕೊಂಡ ಅಜ್ಞಾನ ಎನ್ನುವ ನುಡಿ ಮುತ್ತುಗಳೊಂದಿಗೆ ಜಾತ್ಯತೀತದ ಲಗ್ನ ಮಾಡಿಸಿ ಸಂಗೀತ, ನೃತ್ಯ ವನು ಒಂದು ಮಾಡುತ್ತಾರೆ.
ಸಂಗೀತ ನೃತ್ಯ ಬೇರೆ ಕಲೆಗಳಾದರೂ ಈ ಸಿನಿಮಾದಲ್ಲಿ ಇವೆರಡು ಜಾತಿಯನು ಮೀರಿ ಮಾನವತೆ ಮೆರೆದು ನಮ್ಮ ನೋಡುಗರನು ಎಚ್ಚರಿಸುವ ಕೆಲಸ ನಿರ್ದೇಶಕರದು ನಿಜಕ್ಕೂ ಕೆ. ಬಾಲಚಂದರ್ ಅವರು ಕೊಡುಗೆಯಾಗಿ ಕೊಟ್ಟ ಈ ಚಿತ್ರಕ್ಕೆ ಚಪ್ಪಾಳೆಯ ಸುರಿಮಳೆ ಈ ಸಿನಿಮಾದ ಕೊನೆಯಲ್ಲಿ ನಾವು ಕಾಣುತ್ತೇವೆ. ರಾಜಕೀಯದ ಗುಂಗಿನೊಳು ಜಾತಿ ಎನ್ನುವ ಪಿಡುಗು ಇಂದಿಗೂ ಪ್ರತಿ ಪತ್ರಿಕೆಯ ಪುಟದಲ್ಲಿ ಕಣ್ಣಾಡಿಸುವಾಗ ಮುಗಿಯದ ಕಥೆಯಾಗಿ ಗೋಚರಿಸಿದರೂ ಈ ಸಿನಿಮಾದಲ್ಲಿ ಮಾನವ ಜಾತಿ ಅಷ್ಟೇ ಎತ್ತುತ್ತೆ.
ಈ ಸಿನಿಮಾದ ತಾರಾಗಣದಲ್ಲಿ ಚಿರಂಜೀವಿ, ಜೆಮಿನಿ ಗಣೇಶನ್, ಸುಮಿತ್ರಾ, ಶೋಭನಾ, ರಮೇಶ್, ಸತ್ಯ ನಾರಾಯಣ, ಭ್ರಮ್ಮಾನಂದ ಮುಖ್ಯ ಭೂಮಿಕೆ ಯಲ್ಲಿದ್ದು ಚಿತ್ರ 80 ರ ದಶಕದಲ್ಲಿ ಅಷ್ಟೇ ಅಲ್ಲ ಇಂದಿನ ಯುಗಕ್ಕೂ ಮನ ಹಿಡಿಸುತ್ತೆ… ನಂಗಂತೂ ಕೊನೆಗೆ ಸಿನಿಮಾ ಭಾವುಕಳನ್ನಾಗಿ ಸ್ವಲ್ಪ ಹೊತ್ತು ಅತ್ಬಿಟ್ಟೆ…. ತುಂಬಾ ಒಳ್ಳೆ ಸಿನಿಮಾ….
- ಡಾ. ಕೃಷ್ಣವೇಣಿ. ಆರ್.ಗೌಡ
