‘ಮನದ ಮಾತು’ ಕವನ

ಅಶೋಕ ಕುಮಾರ್ ವೈ ಜಿ ಅವರ ಲೇಖನಿಯಲ್ಲಿ ಅರಳಿದ ನೆನಪಿನ ಪಯಣ. ತಪ್ಪದೆ ಮುಂದೆ ಓದಿ…

ಏಕವಾಗಿರು
ಮನಸೇ
ಸಂಗೀತದ
ಶೃತಿಯಂತೆ
ಏಕಾಂತದಲಿ ಏರುಧ್ವನಿಯಾಗದಿರು

ಹೇಗೆ ಅರಿಯಲಿ ನಿನ್ನ
ಸ್ವರಗಳ ಆರೋಹಣ ಅವರೋಹಣಗಳ
ಏರಿಳಿತ

ಗೀತೆಗೆ
ಸಂಗಾತಿಗಳಾಗುತ್ತಿಲ್ಲ
ಯಾವ ಸಂಗ್ತಿಗಳು
ನಿಲ್ಲುತ್ತಿಲ್ಲ
ಸ್ವಸ್ಥಾನದಲಿ
ತಿಳಿಯದಾಗಿದೆ
ಅದರ ಗತಿ

ಭಾವಗೀತೆಯನ್ನೇಕೆ
ಚಿಮ್ಮಿಸುವೆ
ಸಂಭಾವನೆಯಿಲ್ಲದ ಸಮಯದಲಿ

ಇದೇ ರಾಗವನೆ
ಹೊಮ್ಮಿಸುತಿರು
ಮಧ್ಯಮದಲೆ
ಸ್ವಲ್ಪ ಕಾಲ
ಮೇಲಕ್ಕೇರದಿರು
ಹೊಸ ರಾಗವ ನುಡಿಸಲು
ಅಪಸ್ವರವಾದೀತು


  • ಅಶೋಕ ಕುಮಾರ್ ವೈ ಜಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW