‘ಸಿಂಹದ ಹಾದಿ’ ಕನ್ನಡದ ಮೊಟ್ಟಮೊದಲ ಟೆಲಿಚಿತ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಣವಾಗಿದ್ದು ಮತ್ತು ಅಂಡರ್ವಾಟ್ನಲ್ಲಿ ಕೂಡ ಇದರ ಚಿತ್ರೀಕರಣವಾಗಿದೆ. ತಪ್ಪದೆ ನೋಡಿ…
ನಿರ್ದೇಶನ : ಜಿ ಕೆ ಶಶಿ ರಾಜ್ ದೊರೆ
ನಿರ್ಮಾಪಕರು : ವೀರಕಪುತ್ರ ಶ್ರೀನಿವಾಸ್.
ತಾರಾಗಣ : ಸಾಯಿ ಜ್ಯೋತಿ, ಸವಿತಕ್ಕ ,ಪಲ್ಲವಿ ರಾವ್, ಸಂಶಿಕ, ಪ್ರಕೃತಿ .
ಛಾಯಾಗ್ರಹಣ:ಕರಣ್ .
ಸಂಕಲನ : ಗೋವಿಂದ್ ವಿಷ್ಣು
ಸಂಗೀತ : ಸಂದೇಶ್ ಬಾಬಣ್ಣ ಧನಂಜಯ ವರ್ಮ ,ಶಿವ ಪ್ರಸಾದ್.
ಮೊದಲಿಗೆ ಸಿಂಹದ ಹಾದಿ ಯ ಪ್ರತಿಯೋರ್ವ ನಟರಿಗೆಲ್ಲರಿಗೂ ಅಭಿನಂದನೆಗಳು. ಟೆಲಿಚಿತ್ರವನ್ನು ಸಂಪೂರ್ಣವಾಗಿ ಮೊದಲು ನೋಡಿದ್ದು ನಾನು ಇದೆ ಮೊದಲು.ಸಿಂಹದ ಹಾದಿ ಚಿತ್ರಕತೆಯಲ್ಲಿ ಮೂಡುವ ಪ್ರತಿಯೊಂದು ಸಂಭಾಷಣೆ, ಹಿನ್ನಲೆ ಧ್ವನಿ, ನಟನೆ,ಪ್ರಕೃತಿಯ ಮಡಿಲಲ್ಲಿ ಕೆಲವೊಂದನ್ನು ಚಿತ್ರೀಕರಣ ಮಾಡಿದ್ದು ಇಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ.
ನಮ್ಮ ಕರುನಾಡಿನ ಹೆಮ್ಮೆಯ ನಟರಾದ ಡಾ. ವಿಷ್ಣುವರ್ಧನ್ ಸರ್ ರವರ ಬಗ್ಗೆ ನೋಡಿ ಹಾಗೂ ಅವರ ಅಭಿಮಾನ ಮತ್ತು ವ್ಯಕ್ತಿ ಅಭಿಮಾನಿಯ ಅಭಿಮಾನ ಇವೆರೆಡರ ಸಮ್ಮಿಶ್ರಣವಾಗಿದೆ.
ಇತ್ತೀಚಿಗೆ ಸಿನಿಮಾ ರಂಗದವರ ಮೇಲಿನ ಅತೀ ಅಭಿಮಾನದಿಂದ ಅಂಧದಬಿಮಾನಕೂಡಿ ಜೀವ ತೆತ್ತವರನ್ನು ಕಂಡಿದ್ದು ಇದೆ. ಒಮ್ಮೊಮ್ಮೆ ಈ ಅಭಿಮಾನ ಅನ್ನುವುದು ಮನದಲ್ಲಿ ಸದಾ ಹಸಿರಾಗಿ ಚಿಗುರೆಲೆ ಮೂಡುವ ತರ ಆಗಿರಬೇಕು ಹೊರತು ಮನೆ ಮಠ ಬಿಟ್ಟು ಜೀವ ಕೊಡುವಷ್ಟು ಹುಚ್ಚುತನ ಇರಬಾರದು ಏಕೆಂದರೆ ಈ ವಿಷಯವನ್ನು ನಾನು ಇಲ್ಲಿ ಯಾಕೆ ಪ್ರಸ್ತಾಪ ಮಾಡಿದ್ದೇನೆ ಅಂದರೆ ಸಿಂಹದ ಹಾದಿ ಟೆಲಿ ಚಿತ್ರವೂ ಕೂಡ ಒಬ್ಬ ನಟನ ಎಲ್ಲಾ ಅಭಿಮಾನಿಗಳು ಸೇರಿ ಮಾಡಿರುವ ಚಿತ್ರ ಜೊತೆಗೆ ಒಬ್ಬ ಅಭಿಮಾನಿಯಾಗಿ ನಟನ ಜೀವನದಲ್ಲಿ ಮಾಡಿದ ಸಾಧನೆ ಹಾಗೂ ಜೀವನದ ತೆರೆ ಹಿಂದೆ ಮಾಡಿದ ಸಾಮಾನ್ಯ ಜನರಿಗೆ ಜೀವನದ ಸಹಾಯವನ್ನು ಮತ್ತು ಒಬ್ಬ ನಟನು ಕಣ್ಮರೆಯಾಗಿ ಸುಮಾರು ವರ್ಷಗಳು ಕಳೆದರೂ ಕೂಡ ಅವರ ನಟನೆ ಮತ್ತು ಅವರ ಸಹಾಯ ಜೀವಂತವಾಗಿ ಮನದಲ್ಲಿ ಇರೋದು ಮುಖ್ಯ, ಇಂತಹ ವ್ಯಕ್ತಿಯ ಅಭಿಮಾನದಿಂದಲೇ ಹುಟ್ಟಿದ ಚಿತ್ರವೇ ಈ “ಸಿಂಹದ ಹಾದಿ” ಟೆಲಿ ಚಿತ್ರ, ಇದರ ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ನಟ ವಿಷ್ಣುವರ್ಧನ್ ರವರ ಅಭಿಮಾನಿಗಳು.

ವಿಷ್ಣು ಸೇನಾ ಸಮಿತಿಯ ಸಂಸ್ಥಾಪಕರಾದಂತ ವೀರಕಪುತ್ರರವರು ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಈ ಟೆಲಿ ಚಿತ್ರವನ್ನು ನಿರ್ದೇಶನ ಮಾಡಿದವರು ಜಿ ಕೆ ಶಶಿ ರಾಜ್ ದೊರೆ
ಅವ್ರು ಮೂಲತಃ ಬೆಂಗಳೂರಿನವರು ಇವರು ಇಂಜಿನಿಯರ್ ಪದವೀಧರರು ಕೂಡ.ಇದಕ್ಕೂ ಮುಂಚೆ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದಕ್ಕೆ ಇಂಟರ್ನ್ಯಾಷನಲ್ ಲೆವೆಲ್ ಪ್ರಶಸ್ತಿಗಳು ಕೂಡ ಲಭಿಸಿವೆ.
ನಂತರ ಇವರನ್ನು ವಿಷ್ಣುವರ್ಧನ್ sir ಅಭಿಮಾನದ ಸಲುವಾಗಿ ಮೂಡಿದ ಚಿತ್ರ ಈ “ಸಿಂಹದ ಹಾದಿ” ಎಂಬುವ ಟೆಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಿಂಹದ ಹಾದಿಯಲ್ಲಿ ಪ್ರಮುಖವಾಗಿ ತಾರಾಗಣದಲ್ಲಿ ಸಾಯಿ ಜ್ಯೋತಿ ,ಸವಿತಕ್ಕ ,ಪಲ್ಲವಿ ರಾವ್, ಸಂಶಿಕ, ಪ್ರಕೃತಿಯವರು ಅಮೋಘವಾಗಿ ನಟಿಸಿದ್ದರೆ. ಈ ಚಿತ್ರಕತೆಯಲ್ಲಿ ಒಬ್ಬ ನಿಸ್ವಾರ್ಥ ಮಹಿಳೆಯ ಯಶೋಗಾತೆ ಈ ಟೆಲಿ ಚಿತ್ರಕತೆಯಲ್ಲಿ ಕಾಣಬಹುದು.ಒಬ್ಬ ಮಹಿಳೆ ಮಗನನ್ನು ಸ್ವಾತಂತ್ರ್ಯ ಯೋಧನಾಗಿ ನೋಡುವ ಸೌಭಾಗ್ಯದ ಜೊತೆಗೆ ಕಣ್ಮರೆಯಾದ ನಂತರ ಪಡುವ ಒಡಲ ಸಂಕಟ, ತಾಯ್ತನದ ನೋವು, ಜೀವನದ ಹತಾಷೆ ಕಾಣಬಹುದು.
ಹಾಗೆ ಪ್ರಮುಖ ಪಾತ್ರದಲ್ಲಿ ಬರುವ ಪ್ರಾರ್ಥನಳ ಬದುಕು ಕೂಡ ಅಷ್ಟೇ ಕಷ್ಟದಿಂದ ಕೂಡಿದ್ದು ಆಕೆ ಹೇಗೆ ತನ್ನ ಜೀವನವನ್ನು ಸಾಗಿಸಿ ಸಾಧನೆ ಮಾಡಿದಳು ಅನ್ನುವ ಜೊತೆಗೆ ಆಕೆಯ ಜೊತೆಗೆ ಬರುವ ಮಂಗಳಮುಖಿಯ ಪಾತ್ರದ ಬಗ್ಗೆಯು ನೀವು ನೋಡಬೇಕೆಂದರೆ ಎಲ್ಲರೂ ಮರೆಯದೆ ಈ ಟೆಲಿ ಚಿತ್ರವನ್ನು ತಪ್ಪದೇ ನೋಡಬೇಕು.
ನೋಡುವ ಕಂಗಳಿಗೆ ಕ್ಷಣವು ಎಲ್ಲಿಯೂ ಬೇಸರವಾಗದೆ ಅಷ್ಟೇ ಮಾತುಗಳ ಮೂಲಕ ಕಥೆಯಲ್ಲಿ ಕಥೆ ಹೇಳುವ ಮೂಲಕ ಪ್ರೇಕ್ಷಕರನ್ನು ಕೇಳುವ ಜೊತೆಗೆ ನೋಡುವ ಚಿತ್ರ. ಒಬ್ಬರ ಸಾಧನೆಯನ್ನು ಇನ್ನೊಬ್ಬ ಸಾಧಕರು ಒಂದು ಪುಸ್ತಕ ಮಾಡಿ ಖುಷಿ ಪಡುವುದು ಮತ್ತು ಮಹಿಳೆಯರ ಬದುಕಿನ ಚಿತ್ರಣಗಳನ್ನು ತುಂಬಾ ಸೊಗಸಾಗಿ ಬಿಂಬಿಸುವ ಮೂಲಕ ಈ ಚಿತ್ರ ಚೆನ್ನಾಗಿ ಬಂದಿದೆ.

ಕನ್ನಡದ ಪ್ರತಿಯೊಬ್ಬ ವಿಷ್ಣುವರ್ಧನ್ ರವರ ಕಟ್ಟ ಅಭಿಮಾನಿಗಳು, ಕನ್ನಡದ ಪ್ರೇಕ್ಷಕರೆಲ್ಲರು ಈ ಟೆಲಿ ಚಿತ್ರವನ್ನು ತಪ್ಪದೇ ಕುಟುಂಬ ಸಮೇತರಾಗಿ ನೋಡಬೇಕು ಅನ್ನುವುದರ ಜೊತೆಗೆ ಕನ್ನಡ ಉಳಿಸಿ ಮತ್ತು ಕನ್ನಡ ಬೆಳಿಸಿ ಅನ್ನುವ ಉದ್ದೇಶ ಕೂಡ ಅಷ್ಟೇ ಮುಖ್ಯ. ಇಲ್ಲಿ ನಿರ್ದೇಶಕರು ಕೂಡ ತಮ್ಮ ಛಾಪನ್ನು ಮೂಡಿಸಿ ಚಿತ್ರವನ್ನು ಮಾಡಿದ್ದಾರೆ ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಜೊತೆಗೆ ಈ ಸಿಂಹದ ಹಾದಿ ಟೆಲಿ ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಲೆಂದು ಹಾರೈಸುವೆ.
ನಾನು ಕೂಡ ಒಬ್ಬ ಡಾ.ವಿಷ್ಣುವರ್ಧನ ಸರ್ ರವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಈ ಪುಟ್ಟ ಬರಹ ಅವರಿಗೆ ಸಮರ್ಪಿತವಾಗಲಿ ಹಾಗೂ ಇಲ್ಲರಿಗೂ ಶುಭವಾಗಲಿ.
“ಜೈ ಕರ್ನಾಟಕ ಮಾತೆ
ಜೈ ಸಿಂಹದ ಹಾದಿಗೆ “
- ಸವಿತಾ ಮುದ್ಗಲ್ – ಲೇಖಕಿ, ಗಂಗಾವತಿ
