ಚಂದನ್ ಶೆಟ್ಟಿ ನಿಚ್ಚಿತಾರ್ಥದಲ್ಲಿ ಕಾಣೆಯಾದವರು ಯಾರು?

ಅದೃಷ್ಟ ಅನ್ನೋದು ಯಾವಾಗ, ಯಾರನ್ನು, ಹೇಗೆ ಬೆನ್ನಟ್ಟಿ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಾಗೋದೇ ಇಲ್ಲ.ಅದು ತಾನಾಗಿಯೇ ಹುಡಿಕಿಕೊಂಡು ಬಂದರೆ ಹಣ, ಕೀರ್ತಿ ಎರಡನ್ನು ಒಟ್ಟೊಟ್ಟಿಗೆ ದಭಾಯಿಸಿ ಕೊಡುತ್ತದೆ. ಇದಕ್ಕೆ ರಾಪರ್ ಚಂದನ ಶೆಟ್ಟಿ ಅವರೇ ಉತ್ತಮ ಉದಾಹರಣೆ. ಅವರ ಅದೃಷ್ಟದ ದಿನ ಶುರುವಾಗಿದ್ದೇ, ಬಿಗ್ ಬಾಸ್ ರಿಯಾಲಿಟಿ ಶೋನ ಮೂಲಕ.

ಬಿಗ್ ಬಾಸ್ ಮನೆಗೆ ಸಾಕಷ್ಟು ಸೆಲೆಬ್ರೆಟಿಗಳು ಸ್ಪರ್ಧಿಗಳಾಗಿ ಹೋಗಿದುಂಟು, ಬಂದಿದ್ದುಂಟು. ಕೆಲವರಂತು ಟ್ರೋಫಿಯನ್ನು ಗೆದ್ದಿಕೊಂಡೆ ಹೋಗಿದ್ದಾರೆ. ಆದರೆ ಚಂದನ್ ಶೆಟ್ಟಿ ಅವರಿಗೆ ಒಲಿದಷ್ಟು ಅದೃಷ್ಟ ಬೇರೆ ಯಾವ ಸ್ಪರ್ಧಿಗಳಿಗೂ ಒಲಿದಿಲ್ಲ ಎನ್ನುವುದು ಮಾತ್ರ ಸತ್ಯದ ಮಾತು. ಬಿಗ್ ಬಾಸ್ ಮನೆಗೆ ಬರುವ ಮೊದಲು ಚಂದನ್ ಶೆಟ್ಟಿ ಅವರ ಹೆಸರನ್ನು ಬೆರಳಿಕೆ ಜನರಿಗಷ್ಟೇ ತಿಳಿದಿರಬಹುದು. ಯಾವಾಗ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು,ಹೊರಗೆ ಬಂದರೋ ಅವರ ಗ್ರಹಗತಿಗಳೇ ಬದಲಾದವು. ಅನಂತರದ ದಿನಗಳಲ್ಲಿ ಬಿಗ್ ಬಾಸ್ ಸೀಸನ್ ೫ ವಿಜೇತರಾದರು. ಡಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರಾದರು. ಸಿನಿಮಾಗಳಲ್ಲಿ ಹಾಡುವ ಅವಕಾಶಗಳು ಓಡೋಡಿ ಅವರ ಬಳಿ ಬಂದವು. ಇವೆಲ್ಲವೂ ಅಷ್ಟಕ್ಕೇ ಮುಗಿದಿದ್ದರೆ ಜನ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಬಿಗ್ ಬಾಸ್ ಮನೆಯ ಸಹ ಸ್ಪರ್ಧಿ ನಿವೇದಿತಾ ಗೌಡರನ್ನು ಮದುವೆ ಮಾಡಿಕೊಳ್ಳುವುದಾಗಿ ಚಂದನ್ ಅವರು ಖಚಿತ ಪಡಿಸಿದರೋ, ಆಗ ಜನ ಕೂಡ ಹೌದಪ್ಪ ಅದೃಷ್ಟವೆಂದರೆ ಚಂದನ್ ಶೆಟ್ಟಿದೆ ಅನ್ನುವಷ್ಟು ಜನರ ಕಣ್ಣು ಅವರ ಮೇಲೆ ಕುಕ್ಕತೊಡಗಿತು.

ಚಂದನ್ ನಂತಹ ಹುಡುಗ ನಿವೇದಿತಾರಿಗೆ ಸಿಕ್ಕಿದ್ದು ಅದೃಷ್ಟವಲ್ಲವೇ? ಎಂದು ಚಂದನ್ ಅಭಿಮಾನಿಗಳು ಮುನಿಸಿಕೊಳ್ಳಬಹುದು. ಅದು ನಿವೇದಿತಾ ಅವರ ಪಾಲಿಗೂ ಅದೃಷ್ಟವೇ. ಚಂದನ್ ಒಬ್ಬ ಪ್ರತಿಭಾವಂತ ಗಾಯಕ. ಯಾರ ಮೇಲಾದರೂ ಸೊಗಸಾಗಿ ಹಾಡನ್ನು ಕಟ್ಟಿ ಎಲ್ಲರನ್ನು ಸೆಳೆಯ ಬಲ್ಲ ಮಾಂತ್ರಿಕ. ನಿವೇದಿತಾ ಕೂಡ ಮುದ್ದಾದ ಹುಡುಗಿ. ಅವರ ಮೇಲೆ ಯಾರಿಗಾದರೂ ಪ್ರೀತಿ ಹುಟ್ಟೇ ಹುಟ್ಟುತ್ತದೆ.ಇನ್ನು ಚಂದನ್ ಮನಸೋತಿರುವುದು ದೊಡ್ಡದಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಚಂದನ್ ಹಾಗು ನಿವೇದಿತಾ ನಡುವೆ ಯಾವುದೇ ಪ್ರೀತಿ,ಪ್ರೇಮ,ಪ್ರಣಯಗಳೆನ್ನು ಕಾಣಲಿಲ್ಲ. ಜನರ ಕಣ್ಣಿಗೆ ಕಂಡಿದ್ದು ಅವರ ಸ್ನೇಹ ಮಾತ್ರ. ಒಂದು ಆಶ್ಚರ್ಯವೆಂದರೆ ಬಿಗ್ ಬಾಸ್ ಮನೆಯನ್ನು ಎಲ್ಲ ಸ್ಪರ್ಧಿಗಳು ಆಟದ ಮೈದಾನವೆಂದು ಕೊಂಡೆ ಆ ಮನೆಯೊಳಗೆ ಕಾಲಿಡುತ್ತಾರೆ. ಒಬ್ಬರನೊಬ್ಬರು ಸಂಶಯದಿಂದ ನೋಡುವುದು, ಹಲ್ಲು ಕಡೆಯುವುದು,ಜಗಳ-ಕದನ, ಬೈಗುಳಗಳ ಸರಮಾಲೆ ಅವೆಲ್ಲವೂ ಅಲ್ಲಿ ಸಹಜವಾದ ವಾತಾವರಣ. ಹೀಗಿರುವಾಗ ಅಲ್ಲಿ ಸ್ನೇಹ ಬೆಳೆಸುವುದೇ ಕಷ್ಟ. ಇನ್ನು ಪ್ರೀತಿ, ಪ್ರೇಮ ಅನ್ನುವುದು ಅಲ್ಲಿ ಪುಸ್ತಕದ ಬದನೇಕಾಯಿ. ಆದರೆ ಚಂದನ್ ಈ ವಿಚಾರದಲ್ಲಿ ಅದೃಷ್ಟವಂತರು ನಿವೇದಿತಾರ ಪ್ರೀತಿ ಹಾಗು ದಿವಾಕರ ನಂತಹ ಒಳ್ಳೆಯ ಗೆಳೆತನ ಎರಡು ಈ ಮನೆಯಲ್ಲಿ ಸಿಕ್ಕಿತು.

ಹೀಗೆ ಎಲ್ಲವೂ ಸೈ ಎಂದು ಹೊರಟಾಗ ಚಂದನ್ ಶೆಟ್ಟಿಯಿಂದ ಒಂದು ಎಡವಟ್ಟಾಯಿತು. ಅದು ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಮಾಡಿದ ಪ್ರೇಮ ನಿವೇದನೆ ಕೆಲವರ ಕೆಂಗೆಣ್ಣಿಗೆ ಗುರಿಯಾಯಿತು. ಜಾಲತಾಣಗಳಲ್ಲಿ ಅವರ ಪ್ರೇಮ ನಿವೇದನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಆಗ ಎಲ್ಲರ ಬಾಯಿಗೆ ಬಿಗ್ ಜಡಿಯಲು ಅವರಿಬ್ಬರೂ ಹಿರಿಯರ ಸಮ್ಮುಖದಲ್ಲಿ ನಿಚ್ಚಿತಾರ್ಥವನ್ನು ಮಾಡಿಕೊಂಡರು. ಅಲ್ಲಿಗೆ ಕರ್ನಾಟಕ ಜನತೆಯು ಸ್ವಲ್ಪ ಮಟ್ಟಿಗೆ ಶಾಂತವಾದರು. ಇತ್ತಕಡೆ ಚಂದನ,ನಿವೇದಿತಾ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಮದುವೆಗಾಗಿ ಕಾಯುತ್ತಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಹಾಗು ಚಂದನ್ ಮಧ್ಯೆ ಸೇತುವೆಯಂತಿದ್ದ ದಿವಾಕರ, ಗೆಳೆಯನ ನಿಚ್ಚಿತಾರ್ಥದಲ್ಲಿ ಎಲ್ಲೋ ಮಿಸ್ ಹೊಡೆದರು ಎಂದೆನ್ನಿಸಿತು. ಬಿಗ್ ಬಾಸ್ ಮನೆಯಲ್ಲಿದ್ದಾಗ ನಿಂತರು- ಕೂತರು ಚಂದನ್,ನಿವೇದಿತಾ, ದಿವಾಕರ್ ಈ ಮೂವರೇ ಕಾಣುತ್ತಿದ್ದರು. ಮತ್ತು ಮನೆಯಲ್ಲಿರುವಷ್ಟು ದಿನ ಚಂದನ್ ಹಾಗು ದಿವಾಕರ ನಡುವೆ ಒಳ್ಳೆ ಸ್ನೇಹ ಬೆಳೆದಿತ್ತು. ದಿವಾಕರ್ ತಾವು ರನ್ನರ್ ಆಫ್ ಆದರೂ ಬೇಸರಿಸಿಕೊಳ್ಳದೆ ತನ್ನ ಗೆಳೆಯ ಗೆದ್ದ ಸಂತಸದಲ್ಲಿ ಚಂದನನ್ನು ಎತ್ತಿಕೊಂಡು ಕುಣಿದಾಡಿದ್ದರು. ಚಂದನ್ ಕೂಡ ದಿವಾಕರ್ ಅವರ ಮದುವೆ ವಾರ್ಷಿಕೋತ್ಸವಕ್ಕೆ ಇತ್ತೀಚೆಗಷ್ಟೇ ಅವರ ಮನೆಗೆ ಹೋಗಿ ಶುಭ ಕೋರಿದ್ದರು. ಅವರಿಬ್ಬರ ನಡುವಿನ ಸ್ನೇಹವನ್ನು ಇನ್ನು ಕರ್ನಾಟಕದ ಜನ ಮರಿತಿಲ್ಲ. ಹೀಗಿರುವಾಗ ತನ್ನ ಗೆಳೆಯ ಹಾಗು ನಿವೇದಿತಾ ಅವರ ನಿಚ್ಚಿತಾರ್ಥದಲ್ಲಿ ದಿವಾಕರ್ ಎಲ್ಲಿ ಹೋದರು?. ಶಿವ ಪೂಜೆಯಲ್ಲಿ ಕರಡಿ ಯಾಕೆ ಎಂದು ಮಾಧ್ಯಮದವರು ದಿವಾಕರ್ ನನ್ನು ಮರೆತುಬಿಟ್ಟರಾ?. ಇವೆಲ್ಲ ಪ್ರಶ್ನೆ, ಕುತೂಹಲಗಳಿಗೆ ಚಂದನ್ ಅವರೇ ಉತ್ತರಿಸಬೇಕು. ಕೊನೆ ಪಕ್ಷ ಮದುವೆಯಲ್ಲಾದರೂ ಈ ಮೂವರು ಗೆಳೆಯರ ಫೋಟೋ, ಸೆಲ್ಫಿ ಜಾಲತಾಣದಲ್ಲಿ ಹರಿದಾಡುತ್ತದೆಯಾ ಎಂದು ನೋಡಬೇಕು.

ಚಂದನ್ ಶೆಟ್ಟಿ ಹಾಗು ನಿವೇದಿತಾ ಅವರು ಜೀವನದ ಮತ್ತೊಂದು ಮಹತ್ವದ ಘಟ್ಟವನ್ನು ಹತ್ತುತ್ತಿದ್ದಾರೆ. ಈ ಜೋಡಿಗೆ ಶುಭವಾಗಲಿ, ಅವರ ಬಾಳು ಬಂಗಾರವಾಗಲಿ ಎಂದು ನಾವೆಲ್ಲ ಆಶಿಸೋಣ.

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW