ಹಾಸ್ಯದ ಹನಿಗವಿತೆಗಳು – ಎ.ಎನ್.ರಮೇಶ್. ಗುಬ್ಬಿ

“ಹಾಗೆ ಒಂದು ಹಾಸ್ಯದ ಹನಿಗವಿತೆ ಮತ್ತು ನಗುವಿನ ಮಿನಿಗವಿತೆ. ಕೇವಲ ನಿಮ್ಮನ್ನು ನಗಿಸಲಿಕ್ಕಾಗಿ.. ಯಾರನ್ನೂ ನೋಯಿಸಲಿಕ್ಕಾಗಿ ಅಲ್ಲ.. Just for fun.. ಈ ಕವಿತೆಗಳನ್ನು ಅಂತರರಾಷ್ಟ್ರೀಯ ಶೋಷಿತ, ಪೀಡಿತ ಪತಿಯರ ಸಂಘದ ಅಧ್ಯಕ್ಷರಾದ ಶ್ರೀಯುತ ಪರಂಧಾಮಯ್ಯನವರಿಗೆ ಅರ್ಪಿಸಲಾಗಿದೆ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

1. ದಂತಮುದ್ರೆ..!

ಮುಂಗೈ ಮೇಲಿರುವುದು
ಗಾಯದ ಮಚ್ಚೆಯಲ್ಲ
ನನ್ನವಳು ಕೋಪದಲ್ಲಿ
ಹಲ್ಲಿನಿಂದ ಹಾಕಿದ ಹಚ್ಚೆ.!

*******

2. ಕಸಿವಿಸಿ..!

ವೈದ್ಯರು ನನ್ನ ಬಕ್ಕತಲೆಯತ್ತ
ಕಣ್ಣಾಡಿಸುತ್ತಾ ನುಡಿದರು..
“ನೀವು ನಿಮ್ಮ ತಲೆಗೆ ಕೂದಲು
ನಾಟಿಯೇಕೆ ಮಾಡಿಸಬಾರದು.?”

ನಾನು ನಿರ್ಲಿಪ್ತನಾಗಿ ನುಡಿದೆ
“ನಿತ್ಯ ನನ್ನವಳ ಕಾಟದ ಬಿಸಿಗೆ
ದೇವರು ದಟ್ಟವಾಗಿ ನೆಟ್ಟು
ಕಳುಹಿಸಿದ್ದ ಕೂದಲ ಸಸಿಗಳೇ
ಉಳಿಯದಂತೆ ಉದುರಿಹೋದವು
ಇನ್ನು ನೀವು ನಾಟಿ ಮಾಡಿ
ಕಸಿ ಮಾಡಿದ ಕೂದಲುಳಿದೀತೆ.?”


  • ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading