ಕಾಲಿಗೆ ಆಗುವ ಆಣೆಯನ್ನು ಆಸ್ಪತ್ರೆಗಳಿಗೆ ಅಲೆದಾಡದೆ ಮನೆಯಲ್ಲಿಯೇ ಸುಲಭವಾಗಿಯೇ ಪರಿಹರಿಸಿಕೊಳ್ಳಬಹುದು, ಅದನ್ನು ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಬೇಕಾಗುವ ಸಾಮಾನು :
ಬೆಳ್ಳುಳ್ಳಿ
ಸುಟ್ಟ ಮಣ್ಣಿನ ಇಟ್ಟಿಗೆ
ಕಾಟನ್ ಬಟ್ಟೆ
ಫೋಟೋ ಕೃಪೆ : google
ಮನೆಕಟ್ಟುವ ಒಂದು ಸುಟ್ಟ ಮಣ್ಣಿನ ಇಟ್ಟಿಗೆ ತಂದು ತವಾದಲ್ಲಿ ಚೆನ್ನಾಗಿ ಬಿಸಿ ಮಾಡಿ. ಕಾಟನ್ ಬಟ್ಟೆಯನ್ನು ಪದರು ಮಾಡಿ ಇಟ್ಟಿಗೆ ಮೇಲೆ ಇಡಿ. ಆಣೆ ಇರುವ ಜಾಗಕ್ಕೆ ಬೆಳ್ಳುಳ್ಳಿ ಪೇಸ್ಟ್ ಮಾಡಿ ಇಟ್ಟು ಎಕ್ಕದ ಎಲೆ ಇಟ್ಟು ತಡೆದು ಕೊಳ್ಳಲು ಆಗುವಷ್ಟು ಹೊತ್ತು ಕಾಟನ್ ಬಟ್ಟೆಯಿಂದ ಹಾದು ಬರುವ ಕಾವು ಕೊಡಿ . ಇಟ್ಟಿಗೆ ಕಾವು ಕಡಿಮೆ ಆದಂತೆ ಬಟ್ಟೆಯ ಪದರು ಕಡಿಮೆ ಮಾಡಿ ಆಣೆಗೆ ಶಾಖ ತಲುಪುವಂತೆ ಮಾಡಿ. ಇದರಿಂದ ಸುಮಾರು ಒಂದು ವಾರದಲ್ಲಿ ಆಣೆ ಸಂಪೂರ್ಣ ಗುಣವಾಗುತ್ತದೆ.
- ಸುಮನಾ ಮಳಲಗದ್ದೆ – ನಾಟಿವೈದ್ಯೆ