ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ಇಣುಕುತಿಹುದು ಹರೆಯವೆದ್ದು
ಹದಿನಾರರ ವಯಸಲಿ
ಕೆಣಕುತಿಹುದು ಮನಸಿನಾಳ
ಹದಿಹರೆಯದ ಸೆರಗಲಿ
ಭಾವವೀಣೆ ಎದೆಯೊಳಗಡೆ
ಮಿಡಿಯುತಿಹುದು ಬಾಲೆಗೆ
ಹೂವಿನೊಳಗೆ ಕಂಪು ಬಿರಿದು
ತುಡಿಯುತಿಹುದು ಸಂಪಿಗೆ
ಒಳಗೆ ಮೊರೆವ ಕಡಲಿನಲೆಯು
ಭೋರ್ಗರೆಯುತ ಕಡೆವುದು
ಗಳಿಗೆಗೊಮ್ಮೆ ನೂರು ಕನಸು
ದೀರ್ಘವಾಗಿ ಸುಳಿವವು
ರೆಕ್ಕೆಬಿಚ್ಚಿ ಬಾನಿಗೇರಿ
ಕುಣಿ ಕುಣಿಯುವ ವಯಸಿದು
ಉಕ್ಕಿ ಹರಿವ ಹರೆಯ ಕೋಡಿ
ತಣಿಸದಂಥ ಬಿಸಿಯದು.
- ಚನ್ನಕೇಶವ ಜಿ ಲಾಳನಕಟ್ಟೆ