ಕೊರೊನಾ ಬಂದ ಮೇಲೆ ಶಬ್ದಮಾಲಿನ್ಯ ಗಣನೀಯವಾಗಿ ಕುಸಿದಿದೆ. ಚಿಕ್ಕ ಪುಟ್ಟ ಅನಾರೋಗ್ಯಕ್ಕೂ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಇರುವುದರಲ್ಲೆ ಮನೆಮಂದಿಯೆಲ್ಲಾ ಹಂಚಿಕೊಂಡು ತಿನ್ನುವ ಮನೋಭಾವ ಬಂದಿದೆ.
ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದಲ್ಲಿ ಕೊರೊನ ಜನ್ಮವೇ ತಾಳಿರಲಿಲ್ಲ. ಅಗ ಇಟಲಿಯಲ್ಲಿ ಸಾಲು ಸಾಲು ಸೇನಾ ವಾಹನಗಳು ಹೆಣವನ್ನು ಸಾಗಿಸುತ್ತಿರುವದನ್ನು ನಾವು ಕಣ್ಣು -ಬಾಯಿ ಬಿಟ್ಟು ನೋಡುತ್ತಿದ್ದೇವು. ನಂತರ ಕೊರೊನ ನಮ್ಮ ದೇಶಕ್ಕೂ ಪಾದಾರ್ಪಣೆ ಮಾಡಿತು. ಅಗ ನಮ್ಮ ಕರ್ನಾಟಕದಲ್ಲಿ ನಾವು ನಿರಾಳ ಎಂದು ಕೊಂಡೆವು . ಈಗ ನಮ್ಮಲ್ಲೇ ಧಾಪುಗಾಲು ಹಾಕಿ ನಾಗಾಲೋಟ ಓಡುತ್ತಿದೆ. ಭವಿಷ್ಯದ ದಿನದಲ್ಲಿ ಭಾರತವೇ ಜಗತ್ತಿಗೆ ಅತ್ಯಂತ ಹೆಚ್ಚು ಕೊರೊನಾ ಪೀಡಿತರ ದೇಶ ಎಂದು ಸೆಡ್ಡು ಹೊಡೆಯುವದೂ ನೋಡ ಬೇಕಾಗಿದೆ ….!!!!???
ಕೊರೊನಾ ಒಂದು ಸಾಂಕ್ರಾಮಿಕ ರೋಗ ಎಂದು ಎಲ್ಲರಿಗೂ ತಿಳಿದ ವಿಚಾರ. ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡರೆ ಭಯ ಪಡುವ ಅಗತ್ಯ ಖಂಡಿತ ಇಲ್ಲ. ಆದರೆ ಇದೇ ಜನರಿಗೆ ಅರಿವಾಗದೆ ಇಂದು ಬಹುದೊಡ್ಡ ಸವಾಲಾಗಿದೆ. ಮಾಸ್ಕ ಧರಿಸುವರು, ಅನಗತ್ಯ ಓಡಾಟ ನಿಲ್ಲಿಸುವದು, ಸಾಮಾಜಿಕವಾಗಿ ಅಂತ ಕಾಯ್ದುಕೊಂಡು ದಿನಸಿ ,ಮತ್ತು ಅಗತ್ಯ ಸಾಮಾನು ಕೊಳ್ಳಲು ಜನ ಮುಂದಾಗುತ್ತಿಲ್ಲ , ಇನ್ನು ಬ್ಯಾಂಕ್, ಸರ್ಕಾರಿ ಕಛೇರಿಗಳಲ್ಲೂ ಸಿಬ್ಬಂದಿಗಳು ಜನಗಳನ್ನು ಪದೆ ಪದೆ ಎಚ್ಚರಿಸುತ್ತಾರೆ .
ಜನರಿಗೆ ಕಾಯಲು ಸಮಯವಿಲ್ಲ ಎನ್ನುವ ಮನೋಭಾವವಿದೆ. ಆದರೆ ಕೊರೊನಾ ಇದನ್ನೆ ನಮಗೆ ಕಲಿಸಲು ಬಂದಿದೆ ಎಂದು ಅನಿಸುತ್ತದೆ. ನೂಕು ನುಗ್ಗಲು, ಮುಗಿ ಬಿದ್ದು ಒದ್ದಾಡುವುದು ನಮ್ಮಗಳಿಗೆ ಸಾಮಾನ್ಯವಾಗಿದೆ. ಸರಳವಾಗಿ ಸರತಿಯಲ್ಲಿ ನಿಲ್ಲಲು ಯಾರಿಗೂ ಬೇಕಿಲ್ಲ. ಇದನ್ನು ಕಣ್ಣಾರೆ ನಾನು ನೋಡಿರುವೆ. ಲಾಕ್ಡೌನ್ ಜಾರಿ ಇದ್ದರೂ ಜನರು ಓಡಾಡುತ್ತಾರೆ. ಹೀಗಿರುವಾಗ ಕೊರೊನಾ ವ್ಯಾಪಕವಾಗಿ ಹರಡದೆ ಇರದು.
ಮುಂಬೈನ ಧಾರವಿ ಕೊಳಗೇರಿಯಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿ ಮಾಡಿ, ಅಲ್ಲಿನ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ತಂದಿದೆ. ಅದನ್ನೆ ಈಗ ನಮ್ಮ ರಾಜ್ಯದಲ್ಲೂ ಜಾರಿ ಮಾಡಿ ರೋಗ ವ್ಯಾಪಕ ವಾಗುವುದನ್ನು ತಡೆಯಬೇಕಾಗಿದೆ. ಇದು ಸರ್ಕಾರ ಮಾತ್ರವಲ್ಲ ನಮ್ಮೆಲ್ಲರ ಜವಾಬ್ದಾರಿಯೂ ಹೌದು.
ಅರಳುವ ಮುನ್ನವೇ ಕಮರುವ ಎಳೆ ಕಂದಮ್ಮಗಳು, ಚಿಕಿತ್ಸೆ ಸಿಗದೆ ಪರದಾಡಿ ಪ್ರಾಣ ಬಿಡುತ್ತಿರುವ ಹಿರಿಜೀವಗಳು, ಮತ್ತೊಂದು ಕಡೆ ಚಿಕಿತ್ಸೆ ಸಿಕ್ಕರೂ ಬದುಕು ಉಳಿಯಲಾಗದೆ ವಿಧಿಯ ಕೈವಶವಾಗುತ್ತರುವ ಜೀವಗಳು. ಇವೇಲ್ಲಾ ನೋಡಿದಾಗ ನಾವು ಲಾಕ್ಡೌನ್ ಅನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕುವುದು ಅನಿವಾರ್ಯ ಮತ್ತು ಆರೋಗ್ಯವು ಹೌದು .
ತನ್ನ ಕೆಲಸಕ್ಕಾಗಿ ನಿತ್ಯ ಬಸ್ಸಿನಲ್ಲಿ ಓಡಾಡುತ್ತಿರುವ ನನ್ನ ಗೆಳತಿ ಹೇಳುತ್ತಾಳೆ “ಈ ಸಾಮಾಜಿಕ ಅಂತರ ಎಂಬ ಮದ್ದು ಕೊರೊನಾ ಹೋದರು ಇರಬೇಕು. ಜನಜಂಗುಳಿ ಹೆಂಗಸರು, ಮಕ್ಕಳು ಎನ್ನದೆ ಮೈಯ ಮೇಲೆ ಬೀಳುವವರಿಂದ, ಕಮಟು ವಾಸನೆ , ಸಿಗರೇಟ್ , ಸರಾಯಿಯ ಕೆಟ್ಟ ಗಾಳಿಯಿಲ್ಲದೆ, ಈಗ ನಿತ್ಯವು ನಾನು ಅರಾಮವಾಗಿ ಓಡಾಡುತ್ತಿದ್ದೇನೆ. ಇದು ನಮ್ಮ ದೇಶವೇ ಎಂಬಷ್ಟು ಬದಲಾವಣೆ ಕೊರೊನಾ ತಂದಿದೆ. ಅದಕ್ಕೆ ನನ್ನ ಧನ್ಯವಾದಗಳು” ಎಂದು. ಇದು ನಿಜವಲ್ಲವೇ? ಒಂದು ಸೂಕ್ಷ್ಮ ಜೀವಿ ನಮ್ಮ ಜೀವನದಲ್ಲಿ ಎಷ್ಟು ಬದಲಾವಣೆ ತಂದಿದೆ. ಪರಿಸರ ಸ್ವಚ್ಚವಾಗಿದೆ. ಶಬ್ದಮಾಲಿನ್ಯ ಗಣನೀಯವಾಗಿ ಕುಸಿದಿದೆ. ಚಿಕ್ಕ ಪುಟ್ಟ ಅನಾರೋಗ್ಯಕ್ಕೂ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಇರುವುದರಲ್ಲೆ ಮನೆಮಂದಿಯಲ್ಲಾ ಹಂಚಿಕೊಂಡು ತಿನ್ನುವ ಮನೋಭಾವ ಬಂದಿದೆ. ಮತ್ತೊಂದೆಡೆ ಯಾವ ರೋಗವಾದರೇನು? ಎಲ್ಲಿ ಲಾಕ್ ಆದರೇನು? ನಾವು ಸಂಚಾರ ಮಾಡುವುದು ಬಿಡುವದಿಲ್ಲ ಎನ್ನುವರ ಸಂಖ್ಯೆಯು ಇದೆ. ಇಂತಹವರಿಗೆ ತಿಳಿಹೇಳಿ ಲಾಕ್ಡೌನ್ ಮಾಡಿಬೇಕಾಗಿದೆ. ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೊನಾವನ್ನು ಹೊಡೆದು ಓಡಿಸಬಹುದು.
- ರೇಶ್ಮಾಗುಳೇದಗುಡ್ಡಾಕರ್