‘ದಕ್ಷಿಣಾಪಥೇಶ್ವರ’ ನನ್ನು ಮರೆತ ಕನ್ನಡದ ಜನ…!!!!ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಎಂದೂ ಸೋತಿರಲಿಲ್ಲ,ಆದರೆ ಇವತ್ತಿಗೆ ಆತ ಸೋಲುತ್ತಿದ್ದಾನೆ,ಕರ್ನಾಟಕ ರಾಜ್ಯದವರಾದ ನಾವುಗಳೇ ಅವನನ್ನು ಮರೆಯುತ್ತಿದ್ದೇವೆ. ‘ದಕ್ಷಿಣಾಪಥೇಶ್ವರ’ ನನ್ನು ಕುರಿತು ಲೇಖಕ ಪ್ರಶಾಂತ ಹೊಸಮನಿ ಅವರು ಬರೆದ ಲೇಖನವಿದು, ಮುಂದೆ ಓದಿ…

‌‌‌‌‌ಭವ್ಯಭಾರತದ ಇತಿಹಾಸವನ್ನೋಮ್ಮೆ ಕೆದಕಿದಾಗಿ ಭಾರತವನ್ನು ಪ್ರತಿನಿಧಿಸಿದ ಹಲವು ರಾಜ ಮನೆತನಗಳು ಕಣ್ಮುಂದೆ ಹಾದು ಹೋಗುತ್ತವೆ.ಕನ್ನಡದ ರಾಜ ಮನೆತನ ಬಾದಾಮಿ ಚಾಲುಕ್ಯರಲ್ಲಿ ಪ್ರಸಿದ್ಧಿ ಪಡೆದ ಇಮ್ಮಡಿ ಪುಲಕೇಶಿಯ ಐತಿಹಾಸಿಕ ಕೊಡುಗೆ ಇತಿಹಾಸದಲ್ಲಿ ಮರೆಮಾಚಿದೆ.ಈತನ ಹೆಸರು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಇತನ ಕುರಿತಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಮನ್ನಣೆ ಪಡೆಯುತ್ತಿದೆ,ಅಳಿದು ಹೋದ ಚಾಲುಕ್ಯ ದೊರೆಯ ಈ ಮಹಾನಾಯಕನ ಕುರಿತಾದ ಅಭಿಮಾನ ಈಗ ವ್ಯಕ್ತವಾಗುತ್ತಿದೆ.ಇತಿಹಾಸದೊಂದಿಗೆ ಮರೆಮಾಚಿದ ಈ ಅದ್ಭುತ ನಾಯಕನ ಸಾಧನೆಯ ವಿವರಗಳನ್ನು ಬೆಳಕಿಗೆ ತರುವ ಮಹತ್ ಕಾರ್ಯವನ್ನು ಪ್ರಸ್ತುತ ಯುವಕರು ಹಾಗೂ ಇತಿಹಾಸಕಾರರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಅಷ್ಟಕ್ಕೂ ಈ ಕನ್ನಡದ ದೊರೆಯ ಸಂಕ್ಷಿಪ್ತ ಮಾಹಿತಿಯನ್ನು ಅರಿಯೋಣ.

ಫೋಟೋ ಕೃಪೆ : alchetron

ಬಾದಾಮಿ ಚಾಲುಕ್ಯರ ಹೆಸರು ಕೇಳಿದಾಕ್ಷಣ ಥಟ್ಟನೇ ನೆನಪಿಗೆ ಬರೋದು,ಇಮ್ಮಡಿ ಪುಲಕೇಶಿ,ಈತನ ಸಾಧನೆಯನೊಮ್ಮೆ ನೆನಪಿಸಿಕೊಂಡರೆ ‘ ಬಾಹುಬಲಿ’ ಚಿತ್ರಕ್ಕಿಂತಲೂ ಮಿಗಿಲಾದ ಚಿತ್ರ ನಮ್ಮ ಮುಂದೆ ಹಾದು ಹೋಗುತ್ತದೆ. ಚಾಲುಕ್ಯರ ಮನೆತನದಲ್ಲಿ ಬೆಳೆದ ಪುಲಕೇಶಿ ಬಾಲ್ಯದಲ್ಲಿ ‘ಎರೆಯ’ ಎಂಬ ಹೆಸರಿನೊಂದಿಗೆ ತನ್ನ ಬಾಲ್ಯ ಜೀವನ ಪ್ರಾರಂಭಿಸಿದ, ಹುಟ್ಟು ಅದ್ಭುತ ಚಾಕ ಚಾತುರ್ಯ ಹೊಂದಿದ್ದ ವ್ಯಕ್ತಿ, ಸಕಲ ವಿದ್ಯೆಗಳಲ್ಲೂ ಪಾರಂಗತನಾಗಿದ್ದ ಇತ, ವಯಸ್ಕನಾಗಿರದ ಕಾರಣ ತನ್ನ ಸಾಮ್ರಾಜ್ಯದ ಪಟ್ಟವೇರಲಾಗಲಿಲ್ಲ, ಇವನ ಚಿಕ್ಕಪ್ಪ ಮಂಗಳೇಶ ಚಾಲುಕ್ಯ ಸಾಮ್ರಜ್ಯದ ಪಟ್ಟವೇರಿ,ಅಧಿಕಾರದ ಮದವೇರಿ, ಪುಲಕೇಶಿ ವಯಸ್ಕನಾದನಂತರವೂ ಸಾಮ್ರಾಜ್ಯ ಧಾರೆ ಎರಯುವ ಮನಸ್ಸಾಗಲಿಲ್ಲ,ಇವನ ಪರವಾಗಿ ತನ್ನ ಮಗನನ್ನೇ ಸಾಮ್ರಾಟನನ್ನಾಗಿ ಮಾಡಬೇಕೆಂದು ,ಪುಲಕೇಶಿಗೆ ಸಾಮ್ರಾಟ ಸ್ಥಾನ ನೀಡಲಿಲ್ಲ,ಇದರಿಂದ ನೊಂದ ಪುಲಕೇಶಿ ಆಂದ್ರಪ್ರದೇಶಕ್ಕೆ ತೆರಳಿ, ಅಲ್ಲಿನ ವಿವಿಧ ಸಾಮಂತರು ಹಾಗೂ ರಾಜವಂಶರನ್ನೂ ಒಗ್ಗೂಡಿಸಿ ,ಚಿಕ್ಕಪ್ಪ ಮಂಗಳೇಶನ ಮೇಲೆ ಆಕ್ರಮಣ ಮಾಡಿ ತನ್ನ ಸಾಮ್ರಾಜ್ಯವನ್ನು ಒಗ್ಗೂಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.ಉತ್ತಮ ಆಡಳಿತಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಲಕೇಶಿ ಸಾಮ್ರಾಜ್ಯದ ಜನರ ಪ್ರೀತಿ ಪಾತ್ರನಾಗಿದ್ದ, ಕನ್ನಡ ಭಾಷೆಯನ್ನು ಮಾತೃ ಭಾಷೆಯನ್ನಾಗಿರಿಸಿಕೊಂಡು,ಇಂದಿನ ಬಾದಾಮಿಯನ್ನು ರಾಜಧಾನಿಯನ್ನಾಗಿಸಿ,’ಕರ್ನಾಟಕ ಬಲ’ ಎಂಬ ಸೈನ್ಯ ಪಡೆಯನ್ನು ಹೊಂದಿದ್ದ ,ಇತನ ಸಾಮ್ರಾಜ್ಯ ಮೂರುಬದಿಗಳಲ್ಲಿ ಸಾಗರಗಳಿಂದ ಸುತ್ತುವರೆದಿತ್ತು ಎಂದು ಇಂದಿನ ಮೇಗುತಿ ದೇವಾಲಯದಲ್ಲಿರುವ’ಐಹೊಳೆ ಶಾಸನ’ದಲ್ಲಿ ಉಲ್ಲೇಖಗೊಂಡಿದೆ , ಉತ್ತರಭಾರತವಲ್ಲದೇ ಅರಬ್‌ ದೇಶದ ರಾಜಾ ಓಮರ್ ನನ್ನು ಸೋಲಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದ , ಎಂದು ವಿವಿಧ ಶಾಸನಗಳು ತಿಳಿಸುತ್ತವೆ.

ಫೋಟೋ ಕೃಪೆ : pickpackg

ಕ್ರಿ.ಶ.619 ರಲ್ಲಿ ಉತ್ತರಭಾರತದಿಂದ ದಂಡೆತ್ತಿ ಬಂದಿದ್ದ , ಜೀವನದಲ್ಲಿ ಸೋಲನ್ನರಿಯದ ಹರ್ಷವರ್ಧನನನ್ನು ,ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಇದನ್ನು ಸುಳ್ಳಾಗಿಸಿದ, ಲಕ್ಷೋಪ ಸಂಖ್ಯೆಯಲ್ಲಿ ಸೈನಿಕರು,ಸಾವಿರಾರು ಆನೆಗಳು,ಸಾವಿರಾರು ಹಡಗು ಹೊಂದಿರುವ ನೌಕಾದಳವನ್ನೇ ಹೊಂದಿದ್ದ ವಿಶಿಷ್ಟ ಸಾಮ್ರಾಜ್ಯ ಇದಾಗಿತ್ತು, ಹರ್ಷವರ್ಧನೊಂದಿಗಿನ ಯುದ್ಧದ ಸನ್ನಿವೇಶವನ್ನು ಚೀನಾದ ಪ್ರಸಿದ್ಧ ಯಾತ್ರಿಕ ಹ್ಯೂಯನ್ತ್ಸಾಂಗ್ ಕಣ್ಕಟ್ಟುವಂತೆ ವಿವರಿಸುತ್ತಾನೆ. ನರ್ಮದಾ ನದಿಯ ತೀರದಲ್ಲಿ ನಡೆದ 21 ದಿನಗಳ ಯುದ್ಧದಲ್ಲಿ ಸೈನಿಕರ ರುಂಡಗಳು ಚೆಂಡಿನಂತೆ ಉರುಳುತ್ತಿದ್ದವು, ಇತನ ಯುದ್ಧ ನೈಪುಣ್ಯತೆ ಕಂಡು ಸ್ವತಃ ಹರ್ಷವರ್ಧನನೇ ಹೌಹಾರಿದ್ದ,ಎಂದು ಹೂಯನ್ಸೆತ್ಯಾಂಗೆ್ ಹೇಳುತ್ತಾನೆ. ಇತನ ಶೌರ್ಯಕ್ಕೆ ಮಣಿದ ಹರ್ಷವರ್ಧನ, ಸಂಧಾನಕ್ಕಾಗಿ ಬಂದಾಗ ಸ್ವತಃ ಇಮ್ಮಡಿ ಪುಲಕೇಶಿ, ವಿರೋಧಿ ಹರ್ಷವರ್ಧನಿಗೂ ರಾಜ ಮರ್ಯಾದೆ ನೀಡಿ ಗೌರವವನ್ನು ನೀಡುತ್ತಾನೆ. ಇತನ ಹೃದಯ ವೈಶಾಲ್ಯತೆಯನ್ನು ಕಂಡ ಸ್ವತಃ ಹರ್ಷವರ್ಧನ ‘ ದಕ್ಷಿಣಾಪಥೇಶ್ವರ’ ಎಂಬ ಬಿರುದು ನೀಡಿದ.ಇಂತಹ ಮಹಾಶೂರನಿಗೆ,ಸತ್ಯಾಶ್ರಯ,ಪರಮೇಶ್ವರ,ಪರಮಭಾಗವತ,ದಕ್ಷಿಣಾಪಥೇಶ್ವರ,ಪೃಥ್ವಿವಲ್ಲಭ,ಮಹಾರಾಜಾಧಿರಾಜ,ವಲ್ಲಭೇಂದ್ರ,ಭಟ್ಟಾರಕ, ಹೀಗೆ ಹಲವು ಬಿರುದಿಗಳಿಂದ ಪ್ರಸಿದ್ಧಿಯನ್ನು ಪಡೆದಿದ್ದ.

(ರಾಣಾಪ್ರತಾಪಸಿಂಗ್) ಫೋಟೋ ಕೃಪೆ : thenewsmen

ಇಂತಹ ನಮ್ಮ ಹೆಮ್ಮೆಯ ಕನ್ನಡದ ರಾಜನೋರ್ವ ,ಕನ್ನಡದ ಕಂಪನ್ನು ದೂರದ ಅಪಘನ್ನ,ಇರಾಕ್ ಹಾಗೂ ಅರಬ್ ಒಳಗೊಂಡಂತೆ ಹಲವು ದೇಶಗಳಲ್ಲಿ ಕನ್ನಡದ ಸಾಮ್ರಾಜ್ಯ ವಿಸ್ತರಿಸಿದ್ದ ಎಂಬುದನ್ನು ಕೇಳಿದಾಕ್ಷಣ ನಾವುಗಳು,ಇದನ್ನು ಇತಿಹಾಸಕ್ಕೆ ಸೀಮಿತವಾಗಿ ಓದಿ ಮರೆತು ಬಿಡುವ ಪರಿಸ್ಥಿತಿ ಉಂಟಾಗಿದೆ,ಉತ್ತರ ಭಾರತದಲ್ಲಿ ರಾಣಾಪ್ರತಾಪಸಿಂಗ್ ರಂತಹ ಇತರೆ ಹಲವು ಪ್ರಸಿದ್ಧ ರಾಜರು ಬರುವ ಪೂರ್ವದಲ್ಲಿ ನಮ್ಮ ಇಮ್ಮಡಿ ಪುಲಕೇಶಿ ಇಡೀ ಭಾರತವಲ್ಲದೇ ವಿದೇಶಗಳಲ್ಲೂ ತಮ್ಮ ವ್ಯಾಪ್ತಿ ಹೊಂದಿದ್ದರೂ,ಇವರ ಅದ್ಭುತ ಸಾಧನೆ ಪ್ರಚಾರಕ್ಕೆ ಬಾರದೆ ಮೂಲೆಗೂಂಪಾಗುತ್ತಿದೆ ಎಂಬ ಸಂದೇಹ ಮೂಡುತ್ತದೆ, ಇಮ್ಮಡಿ ಪುಲಕೇಶಿಗೆ ದೊರೆಯುತ್ತಿರುವ ಮನ್ನಣೆಯಲ್ಲಿ ಹಿಂದೇಟನ್ನು ನಾವುಗಳು ಕಾಣುತ್ತಿದ್ದೇವೆ. ಕಲ್ಪಿತ ಐತಿಹಾಸಿಕ ಸಿನಿಮಾಗಳಲ್ಲಿನ ನಾಯಕರನ್ನು ವೈಭವೀಕರಿಸುತ್ತಿರುವಾಗ ,ಆಗಿ ಹೋದ ಸ್ವತಃ ಇತಿಹಾಸವೇ ತಿಳಿಸುವ ಇಮ್ಮಡಿ ಪುಲಕೇಶಿಯ ಕುರಿತಾದ ಇತಿಹಾಸ ಬೆಳಕಿಗೆ ತರುವ ಕಾರ್ಯ ಜರಗುತ್ತಿಲ್ಲವೆಂಬುದು ಬೇಸರದ ಸಂಗತಿ.‘ಕರ್ನಾಟ ಬಲ’ ಎಂಬ ಅದ್ಭುತ ಸೈನ್ಯಹೊಂದಿದ್ದ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಎಂದೂ ಸೋತಿರಲಿಲ್ಲ, ಆದರೆ ಇವತ್ತಿಗೆ ಆತ ಸೋಲುತ್ತಿದ್ದಾನೆ, ಸ್ವತಃ ಕರ್ನಾಟಕ ರಾಜ್ಯದವರಾದ ನಾವುಗಳೇ ಅವನನ್ನು ಮರೆಯುತ್ತಿದ್ದೇವೆ, ಇಮ್ಮಡಿ ಪುಲಕೇಶಿಯನ್ನು ನೆನಪಿಸಿ ಆತನ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಬೇಕಾಗಿದ್ದು ,ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ.


  • ಪ್ರಶಾಂತ ಹೊಸಮನಿ ‌‌‌‌‌‌ ನಾಗಠಾಣ ತಾ.ಜಿ.ವಿಜಯಪುರ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW