ಕವನ : ರೇಶ್ಮಾಗುಳೇದಗುಡ್ಡಾಕರ್
ಪರಿಚಯ : ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಗೃಹಿಣಿಯಾಗಿದ್ದು, ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅವರು ರಚಿಸಿದ ‘ಗಾಂಧಿ ಕವನ’ ವು ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕದಲ್ಲಿ ಪ್ರಕಟಗೊಂಡಿದೆ.
ಎಲ್ಲ ಕಳೆದುಕೊಂಡೆ ಎಂದು
ಗೀಳಿಟ್ಟವು ಸುತ್ತಲಿನ ಜನಮನಗಳು
ಮನದಲ್ಲೆ ನಕ್ಕು ಮಾತಿಗಾಗಿ
ಅನುಕಂಪ ತೂರಿದವರೆಷ್ಟೊ…
ನನ್ನದಲ್ಲದ ವಸ್ತುಗಳಿಗೆ
ಬೆಲೆಕಟ್ಟಿ ಮುನಿದವರೆಷ್ಟೋ..!!
ಇವುಗಳ ಮಧ್ಯೆ ನನ್ನಲ್ಲಿ
ಎನೀಲ್ಲ ಎಂದರೊ ಮಡುಗಟ್ಟಿ
ಎದೆಯಾಳದಲಿ ಹುದುಗಿ
ಸಣ್ಣ ಸದ್ದು ಮಾಡುತ್ತಿತ್ತು “ನನ್ನತನ ”
ದೇಹ ಮಾಗಿ , ಬದುಕು ಬೆಂದರೂ
ಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ
ಒಳಗಣ್ಣ ತೆರಸುತ ಭರವಸೆಯ
ಲೋಕಕ್ಕೆ ಲಗ್ಗೆ ಇಟ್ಟು
ಭಾವನೆಗಳ ಸಂಘರ್ಷಕೆ ಉದ್ವೇಗ ಗಳ
ಅರ್ತನಾದಕೆ ಮೌನ ಸವಿ ಸಾಗರವ
ಉಡುಗೂರೆ ನೀಡಿ ಜೀವನದ ಪ್ರೀತಿಯ
ಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತು
ಕಳೆದುಕೊಂಡಷ್ಟು ಬದುಕಿನಲ್ಲಿ
ಪಡೆಯುವದು ಅಗಾಧ ಬದ್ದತೆ
ಭರವಸೆಯ ಕಿರಣ ದೇದೀಪ್ಯಮಾನವಾಯಿತು ….
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aaakrutikannada@gmail.com ಮಾಡಬಹುದು.ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ರೇಶ್ಮಾಗುಳೇದಗುಡ್ಡಾಕರ್ ಅವರ ಹಿಂದಿನ ಬರಹಗಳು :