ಸಂಗಮೇಶ್ ಉಪಾಸೆ ಅವರು ಬರೆದ ‘ದೇವರುಗಳಿವೆ ಎಚ್ಚರಿಕೆ’ ನಾಟಕ ಎಡಿಎ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ನವೆಂಬರ್ ೨೫, ೨೦೨೧ ರಂದು ಸಾಯಂಕಾಲ ೬ ಗಂಟೆಗೆ ರೊಂದಿಗೆ ಲೇಖಕರಾದ ಸಂಗಮೇಶ್ ಉಪಾಸೆ ಅವರು ಭಾಗವಹಿಸಲಿದ್ದು, ರಂಗಾಸಕ್ತರಿಗೆ ಸ್ವಾಗತವಿದೆ.
ರಂಗಸಾರಂಗ ಸಿಂದಗಿ ಮತ್ತು ಆಪ್ತರಂಗ ಬೆಂಗಳೂರು ಸಂಯೋಗದಲ್ಲಿ ಈ ನಾಟಕ ಮೂಡಿ ಬರುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡ್ರಾಮಾ ಜೂನಿಯರ್ ನಿರ್ದೇಶಕ ಶರಣಯ್ಯ ಅವರು, ವಿಶೇಷ ಅತಿಥಿಗಳಾಗಿ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ರಾಜ್ ಕುಮಾರ್, ಹಿರಿಯ ನಾಟಕಕಾರ- ಚಿತ್ರ ಸಂಭಾಷಣಾಕಾರರು ಹೂಲಿಶೇಖರ್, ಚಲನಚಿತ್ರ ನಿರ್ದೇಶಕರಾದ ನಾಗರಾಜ್ ಕೋಟೆ ಅವರು ಭಾಗವಹಿಸಲಿದ್ದಾರೆ.

