‘ದೇವತೆ’ ಕವನ – ನಿಜಗುಣಿ ಎಸ್ ಕೆಂಗನಾಳ

‘ನಾ ಕಂಡಿರುವ ಎಲ್ಲಾ ಕನಸುಗಳಿಗೆ…ನೀನೇ ಇಂದಿಗೂ ಆಸರೆಯಾಗಿರುವೆ’….ಕವಿ ನಿಜಗುಣಿ ಎಸ್ ಕೆಂಗನಾಳ ಅವರ ಲೇಖನಿಯಲ್ಲಿ ಅರಳಿದ ‘ದೇವತೆ’, ತಪ್ಪದೆ ಮುಂದೆ ಓದಿ…

ಎಲ್ಲಿರುವೇ ಓ ನನ್ನ ಒಲವೇ
ನಾನಿಲ್ಲಿ ನಿನಗಾಗಿ ಕಾದಿರುವೆ.
ಹೇಗಿರುವೇ ಓ ನನ್ನ ಚಲುವೇ
ನಾನಿಲ್ಲಿ ನಿನಗಾಗಿ ಒದ್ದಾಡುತ್ತಿರುವೆ.

ಈ ನನ್ನ ಮನಸೆಂಬ ತೋಟದಲ್ಲಿ
ಅರಳಿರುವ ಸುಂದರವಾದ ಕನಸುಗಳು
ಈ ನನ್ನ ಬದುಕೆಂಬ ಪ್ರಯಾಣದಲ್ಲಿ
ನೀ ತಂದ ಮಧುರವಾದ ಕಾಣಿಕೆಗಳು
ಇದೆಲ್ಲವೂ ನೀ ನನಗೆ ಕೊಟ್ಟ ಒಂದು
ಸುಂದರವಾದ ಉಡುಗೊರೆಯಾಗಿದೆ.

ನಾ ಕಂಡಿರುವ ಎಲ್ಲಾ ಕನಸುಗಳಿಗೆ
ನೀನೇ ಇಂದಿಗೂ ಆಸರೆಯಾಗಿರುವೆ.
ಈ ನನ್ನ ಬದುಕಿನ ಎಲ್ಲಾ ಪುಟಗಳಲ್ಲಿ
ಎಂದೆಂದಿಗೂ ನನಗೆ ಆಸರೆಯಾಗಿ
ನಿಂತಿರುವೆ.

ಎಲ್ಲವನು ನಾ ತೋರೆದು ನಿಂತಿರುವಾಗ
ಈ ಹೃದಯಕ್ಕೆ ಆಸರೆಯಾಗಿ ನೀ ಬಂದಿರಲು
ಓ ಒಲವೇ ನೀ ನನ್ನ ಬಾಳಿಗೆ ಬೆಳಕಾಗಿ,
ನೀ ನನ್ನ ಬದುಕಿಗೆ ದೇವತೆಯಾಗಿ ಬಂದಿರುವೆ.


  • ನಿಜಗುಣಿ ಎಸ್ ಕೆಂಗನಾಳ- ಸಾಹಿತಿಗಳು ರಂಗಭೂಮಿ, ಕಲಾವಿದರು, ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW