ಗೋಬಿ ಮಸಾಲಾ ಬದಲು ಡ್ರೈಗೋಬಿ ಟ್ರೈ ಮಾಡಿ …

ಹೊರಗೆ ಪಿರಿ ಪಿರಿ ಮಳೆ ಬರುವಾಗ ಮನೆ ಒಳಗೆ ಬಿಸಿ ಬಿಸಿ ಡ್ರೈ ಗೋಬಿ. ಇದ್ರೆ ಎಷ್ಟು ಚಂದ. ಮಾಡೋದು ಹೇಗೆ ಗೊತ್ತಾ? ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಡ್ರೈ ಗೋಬಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

 ಬೇಕಾಗುವ ಪದಾರ್ಥಗಳು

  • ಕಾಲಿಫ್ಲವರ್ – ಒಂದು
  • ಮೈದಾ ಹಿಟ್ಟು – ಅರ್ಧ ಕಪ್
  • ಕಾರ್ನ್ ಫ್ಲೋರ್ – ಒಂದು ಕಪ್
  • ಉಪ್ಪು – ರುಚಿಗೆ ತಕ್ಕಷ್ಟು
  • ಅಚ್ಚ ಮೆಣಸಿನ ಪುಡಿ
  • ಅರಿಶಿಣ ಪುಡಿ – ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
  • ಕರಿಬೇವಿನ ಸೊಪ್ಪು – ಸ್ವಲ್ಪ

ಮಾಡುವ ವಿಧಾನ 

ಕಾಲಿಫ್ಲವರ್ ಬೇಕಾದ ಆಕಾರಕ್ಕೆ ಕಟ್ ಮಾಡಿ ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ, ಸ್ವಲ್ಪ ಉಪ್ಪು ಕೂಡ ಹಾಕಿ ಒಂದು ಕುದಿ ಬಂದ ಕೂಡಲೇ ನೀರು ಸೊಸಿಕೊಳ್ಳಿ. ಈಗ ಒಂದು ಅಗಲವಾದ ಪಾತ್ರೆಗೆ ಹಾಕಿ ಮೇಲೆ ಹೇಳಿದ ಪದಾರ್ಥಗಳನ್ನು ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಬೇಕಿದ್ದಲ್ಲಿ ಸಿಂಪಡಿಸಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಕೊನೆಗೆ ಕರಿಬೇವಿನ ಸೊಪ್ಪು ಹಾಕಿ, ಈರುಳ್ಳಿಯೊಂದಿಗೆ ಅಲಂಕರಿಸಿ. ಮೇಲೆ ಅರ್ಧ ಲಿಂಬೆ ಹಣ್ಣಿನ ರಸ ಹಿಂಡಿ.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading