ವೃತ್ತಿ ರಂಗಭೂಮಿ ರಂಗಾಯಣಕ್ಕೆ ಕಲಾವಿದರ ಆಯ್ಕೆ

ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ತನ್ನ ರಂಗಚಟುವಟಿಕೆಗಳನ್ನು ತೀವ್ರಗೊಳಿಸಲು 12 ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾಡಳಿತ ಭವನದಲ್ಲಿರುವ ರಂಗಾಯಣವು ನಾಟಕ ಸಿದ್ಧತೆ, ರಂಗತರಬೇತಿ, ರಂಗಪ್ರದರ್ಶನ ಮತ್ತು ರಂಗಶಿಬಿರಗಳಂತಹ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿದೆ.

ಆಯ್ಕೆಯ ನಿಬಂಧನೆಗಳು:
1. ಅರ್ಹತೆ: 20 ರಿಂದ 35 ವರ್ಷ ವಯಸ್ಸಿನ ಮಹಿಳೆಯರು ಸೇರಿದಂತೆ 12 ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
2. ರಂಗ ಪರಿಣತಿ : ರಂಗಭೂಮಿ ಪರಿಣತಿಯೇ ಪ್ರಮುಖ ಅರ್ಹತೆ. ರಂಗಶಿಕ್ಷಣದ ಡಿಪ್ಲೋಮಾ/ಪ್ರಮಾಣಪತ್ರ ಅಪೇಕ್ಷಣೀಯವಾದರೂ ಕಡ್ಡಾಯವಲ್ಲ. ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆ.
3. ಪಾರಂಪರಿಕ ಕಲೆ: ಪಾರಂಪರಿಕ ಕಲೆಯ ಕುಟುಂಬದಿಂದ ಬಂದವರಿಗೆ ಆದ್ಯತೆ.
4. ಸಂಭಾವನೆ : ಆಯ್ಕೆಯಾದ ಕಲಾವಿದರಿಗೆ ತಿಂಗಳಿಗೆ 15,000 ರೂ. ಗೌರವ ಸಂಭಾವನೆ.
5. ತಾತ್ಕಾಲಿಕ ಆಯ್ಕೆ : ಈ ಆಯ್ಕೆ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಖಾಯಂ ಹುದ್ದೆಗಳಲ್ಲ.
6. ನಡವಳಿಕೆ : ತರಬೇತಿ ಅವಧಿಯಲ್ಲಿ ಅನಪೇಕ್ಷಿತ ನಡವಳಿಕೆ ಕಂಡುಬಂದರೆ ಕಲಾವಿದರನ್ನು ತೆಗೆದುಹಾಕುವ ಅಧಿಕಾರ ರಂಗಾಯಣ ಹಾಗೂ ರಂಗಸಮಾಜಕ್ಕೆ ಇದೆ.
7. ನಿಯಮಗಳಿಗೆ ಬದ್ಧತೆ : ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮಗಳಿಗೆ ಬದ್ಧರಾಗಿರಬೇಕು.
8. ಪಾರದರ್ಶಕ ಆಯ್ಕೆ : ರಂಗಾಯಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಂಗಸಮಾಜದ ಉಪಸಮಿತಿಯು ಪಾರದರ್ಶಕವಾಗಿ ಆಯ್ಕೆ ನಡೆಸಲಿದೆ.
9. ನಿರ್ದೇಶಕರ ನಿಯಂತ್ರಣ : ಆಯ್ಕೆಯಾದ ಕಲಾವಿದರು ರಂಗಾಯಣ ನಿರ್ದೇಶಕರ ಮತ್ತು ವಿಶೇಷಾಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿರುತ್ತಾರೆ.
10. ತೀರ್ಮಾನ : ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಅರ್ಜಿ ಸಲ್ಲಿಕೆ:
ಆಸಕ್ತ ಕಲಾವಿದರು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 19.09.2025, ಸಂಜೆ 5:30 ಗಂಟೆಯೊಳಗೆ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು

Read also : ಬಸವ ಸಂಸ್ಕøತಿ ಅಭಿಯಾನ : ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರ

ವಿಳಾಸ : ವಿಶೇಷಾಧಿಕಾರಿಗಳು, ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಜಿಲ್ಲಾಡಳಿತ ಭವನ, ದಾವಣಗೆರೆ-577006
ಇ-ಮೇಲ್ : dvgrangayana@gmail.com

ಸಂದರ್ಶನ:
ಸಂದರ್ಶನವು ದಿನಾಂಕ 20.09.2025 ರಂದು ಬೆಳಗ್ಗೆ 10:30 ಗಂಟೆಗೆ ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ ನಡೆಯಲಿದೆ.

ಸಂದರ್ಶನಕ್ಕೆ ತರಬೇಕಾದ ದಾಖಲೆಗಳು:
1. ಜನ್ಮ ದಿನಾಂಕ ದೃಢೀಕರಣ ಪತ್ರ
2. ಎನ್.ಎಸ್.ಡಿ/ಡಿಪ್ಲೋಮಾ ಪ್ರಮಾಣಪತ್ರ (ತರಬೇತಿ ಹೊಂದಿದವರು)
3. ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣಪತ್ರ (ತರಬೇತಿ ಹೊಂದಿದ್ದರೆ)
4. ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ

ರಂಗಾಯಣದ ಕರೆ:
ರಂಗಾಯಣದ ನಿಯಮಗಳಿಗೆ ಬದ್ಧರಾಗಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ವಿನಂತಿಸಿದ್ದಾರೆ.

ಸಂಪರ್ಕಕ್ಕಾಗಿ :
ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ
ಇ-ಮೇಲ್: dvgrangayana@gmail.com
Mob : 9341010712


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading