ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಾಸ್ತ್ರಿಯವರಿಗೆ ಒಬ್ಬ ಯುವಕ ಬಂದು ಸಮಯ ಎಷ್ಟಾಯಿತು ಎಂದು ಕೇಳುತ್ತಾನೆ. ಶಾಸ್ತ್ರಿಯವರಿಗೆ ಸಿಟ್ಟು ಬರುತ್ತದೆ. ಶಾಸ್ತ್ರಿಯವರಿಗೂ ಮತ್ತು ಸಮಯಕ್ಕೂ ಏನು ನಂಟು? ಶಾಸ್ತ್ರಿಯವರು ಏಕೆ ಸಿಟ್ಟಾಗುತ್ತಾರೆ? ತಪ್ಪದೆ ಮುಂದೆ ಓದಿ…
ಶಾಸ್ತ್ರಿ ಮತ್ತು ಶರ್ಮಾ (ಇಬ್ಬರೂ 60 ರ ಹರೆಯದವರು) ಬಸ್ ನಿಲ್ದಾಣದ ಬಳಿ ಬರುವ ಬಸ್‌ಗಾಗಿ ಕಾಯುತ್ತಿದ್ದರು. ಒಬ್ಬ ಯುವಕ ಅವರ ಹತ್ತಿರ ಬಂದು ಶಾಸ್ತ್ರಿಯನ್ನು ಸಮಯ ಎಷ್ಟು ಎಂದು ಕೇಳುತ್ತಾನೆ.
ಶಾಸ್ತ್ರಿಗಳು ಸಿಟ್ಟಿನಿಂದ,
ಇಲ್ಲಿ ನಾವು ಟೈಮ್ ಹೇಳಲು ನಿಂತಿರುವೆವಾ ಎಂದು ಗದರಿಸಿ ಕಳಿಸಿದರು. ಯುವಕ ಅವಮಾನವಾದಂತಾಗಿ ಮುಖ ತಿರುಗಿಸಿ ಹೊರಟು ಹೋದನು.
ಆಗ ಅವರೊಡನಿದ್ದ ಶರ್ಮ,
‘ಏನು ಶಾಸ್ತ್ರಿ ಸಮಯ ಕೇಳಿದರೆ ಹಾಗೆ ಗದರಿಸಿ ಕಳಿಸಿದಿರಿ’ ಎಂದರು.
ಶಾಸ್ತ್ರಿ: ನೋಡು ಶರ್ಮಾ ನಾನು ಟೈಮ್ ಹೇಳುವೆನು, ನಂತರ ಅವನು ಮಾತು- ಮಾತು ಕಲೆಸುತ್ತಾನೆ, ನಮ್ಮಬಗ್ಗೆ ಎಲ್ಲಾ ವಿವರ ತಿಳಿದು ಕೊಳ್ಳುತ್ತಾನೆ. ನಂತರ ಮನೆಗೆ ಬರುತ್ತಾನೆ. ಹಾಗೆ ಬರುತ್ತಾ – ಹೋಗುತ್ತಲಿರುತ್ತಾನೆ. ಹಾಗೆ ಬರುತ್ತಿರುವಾಗ ಅವನು ನಮ್ಮ ಮನೆಯಲ್ಲಿರುವ ಅವಿವಾಹಿತ ಹುಡುಗಿಯನ್ನು ನೋಡುತ್ತಾನೆ. ನೋಟಗಳು ಕಲೆಯುತ್ತವೆ. ನಿಧಾನವಾಗಿ ಇಬ್ಬರಿಗೂ ಪ್ರೀತಿ ಮೂಡುತ್ತದೆ. ನನ್ನ ಮಗಳನ್ನು ಮದುವೆಯಾಗುವೆನು ಎಂದು ಕೇಳುತ್ತಾನೆ.
ಶರ್ಮಾ: ಹಾಗಾದರೆ ಇನ್ನೂ ಒಳ್ಳೆಯದಲ್ಲವೇ!? ನಿನಗೆ ಗಂಡು ಹುಡುಕುವ ಶ್ರಮ ತಪ್ಪುವುದಲ್ಲಾ!?
ಶಾಸ್ತ್ರಿ: ಏನು ಒಳ್ಳೆಯದು ಶರ್ಮಾ… ಒಂದು ಕೈ ಗಡಿಯಾರವನ್ನು(watch) ತೆಗೆದುಕೊಳ್ಳಲು ಸಾಧ್ಯವಾಗದವನಿಗೆ ನನ್ನ ಮಗಳನ್ನು ಕೊಡುವುದಾ?
ಕೊನೆ ಹನಿ: ಇದು ದೂರಾಲೋಚನೆಯೇ??? ಅಥವಾ ಇನ್ನೇನೋ??
- ಸಂಪಿಗೆ ವಾಸು
