ನಮ್ಮ ಕಥೆ ಕೇಳುವರಿಲ್ಲ ಯಾರು…ಮುಂದೆ ಸಾಗುವುದು ಹೇಗೋ…ಕವಿ ವಿ.ಎಂ.ಎಸ್.ಗೋಪಿ ಅವರ ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…
ಈ ಪ್ರಪಂಚ ಕಣ್ಣು ತೆರೆದು
ನಾ ನೋಡಿದಾಗದಿಂದ ಇವತ್ತಿನವರೆಗೂ ಭಯ
ಈ ಏಕಾಂಗಿ ಜೀವನ
ಭಯವಾಯಿತು ಜೀವನ
ನಾ ಕಣ್ಣು ತೆರೆದು ನೋಡಿದಾಗ
ಈ ಪ್ರಪಂಚ ನೋಡಿ ಭಯವಾಯಿತು
ಹಿಂದೆ ಮುಂದೆ ಯಾರಂತ ತಿಳಿಯದೆ
ಈ ಏಕಾಂಗಿ ಜೀವನ
ನನ್ನವರು ಯಾರು
ನಾನು ಯಾರು
ತಿಳಿಯದೇ ಹೋಯಿತು ಜೀವನ
ಆಶ್ರಮ ಅನಾಥಾಶ್ರಮ ಇದ್ದರು
ರಸ್ತೆ ಬೀದಿಗಳಲ್ಲಿ ನಡೆಯಿತು ಬಾಳು
ನಮ್ಮ ಕಥೆ ಕೇಳುವರಿಲ್ಲ ಯಾರು
ಜೀವನದ ದಾರಿ ನೆನೆದು
ಮುಂದೆ ಸಾಗುವುದು ಹೇಗೋ
ಈ ಏಕಾಂಗಿಯ ಬದುಕಿನಲ್ಲಿ
ಆ ದಿನಗಳು ನೆನೆದರೆ
ಮೈ ರೋಮಂಚನವಾಗುವುದು
ದಿನ ವರ್ಷಗಳು ಹೋಗಿದೇ ಗೊತ್ತಾಗಲಿಲ್ಲ
ಎಲ್ಲರನ್ನೂ ನೋಡಿ ಭಯವಾದೆ
ನನ್ನ ಹಿಂದೆ ಮುಂದೆ ಯಾರಿಲ್ಲವೆಂದು
ದಾರಿ ಉದ್ದಕ್ಕೂ ನನ್ನ ಪ್ರಯಾಣ
ದೇವಸ್ಥಾನಗಳ ಸುತ್ತಮುತ್ತ ನನ್ನ ಬದುಕು
ದೇವರ ಗುಡಿಗೆ ಬರುವರೇ ನನ್ನ ಬಂಧು ಬಳಗ
ತಂಪಾದ ಗಾಳಿ ಬೇವಿನ ಮರದ ಕೆಳಗೆ
ಭಕ್ತಿಗೀತೆಗಳ ಹಾಡಿನ ಸಂಗೀತದಲ್ಲಿ
ಇಂದು ನಾಳೆ ನಾಳೆದೆಂದು ಪ್ರಯಾಣದಲ್ಲಿ
ಹಬ್ಬ ಜಾತ್ರೆ ದಿನಗಳಲ್ಲಿ ನನ್ನಗೂ ಹಬ್ಬ ಇಲ್ಲಿ
ಚಿಲ್ಲರೆ ನಾಣ್ಯಗಳು ಹಾಕುವರು ಇಲ್ಲಿ
ಆ ದೇವರ ಮಗನು ನಾ ಇಲ್ಲಿ.
- ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.
