ಏಕೀಕರಣದ ಪೂರ್ವದಲ್ಲಿ ಕರ್ನಾಟಕ ಹೇಗಿತ್ತು? ಕರ್ನಾಟಕ ಎನ್ನುವ ಹೆಸರು ಹೇಗೆ ಬಂತು ಎನ್ನುವುದರ ಬಗ್ಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಏನು ಹೇಳಿದ್ದಾರೆ. ಮುಂದೆ ಓದಿ
ಭಾರತಕ್ಕೆ ಸ್ವಾತಂತ್ರ್ಯ ಅನ್ನುವುದು ಎಷ್ಟು ಮುಖ್ಯವೋ ಹಾಗೆ ಹರಿದು ಹಂಚಿ ಹೋಗಿದ್ದ ಕರ್ನಾಟಕ ಅಖಂಡ ಕರ್ನಾಟಕವಾಗುವುದು ಅಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಕರ್ನಾಟಕ ಏಕೀಕರಣದ ಚಳವಳಿ ಅನ್ನುವುದು ಕೂಡಾ ಪ್ರಾರಂಭವಾಯಿತು.
ವಸಾಹತು ಶಾಹಿ ಸಂದರ್ಭದಲ್ಲಿ ಹಾಗೂ ಬ್ರಿಟಿಷ್ ಪ್ರಭುತ್ವದ ಸಂದರ್ಭದಲ್ಲಿ ಅವರ ಆಡಳಿತಕ್ಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ೨೦ ಚೂರಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿಹೋಯಿತು. ಹೀಗೆ ಹರಿದು ಚೂರು ಚೂರಾಗಿ ಹೋದ ಕರ್ನಾಟಕ ಒಂದಾಗಬೇಕು ಅನ್ನುವ ಮಾತು ಹುಟ್ಟಿದ್ದು ಸ್ವಾತಂತ್ರ್ಯ ಚಳವಳಿಯ ಜೊತೆಗೆ. ಭಾರತಕ್ಕೆ ಸ್ವಾತಂತ್ರ್ಯ ಅನ್ನುವುದು ಎಷ್ಟು ಮುಖ್ಯವೋ ಹಾಗೆ ಹರಿದು ಹಂಚಿ ಹೋಗಿದ್ದ ಕರ್ನಾಟಕ ಅಖಂಡ ಕರ್ನಾಟಕವಾಗುವುದು ಅಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಕರ್ನಾಟಕ ಏಕೀಕರಣದ ಚಳವಳಿ ಅನ್ನುವುದು ಕೂಡಾ ಪ್ರಾರಂಭವಾಯಿತು.
ಒಂದು ಭಾಷೆಯನ್ನಾಡುವ ಜನ ಒಂದು ಆಡಳಿತದ ಕಕ್ಷೆಗೆ ಬರಬೇಕು ಅನ್ನುವ ಆಲೋಚನೆ ಆಮೇಲೆ ಬಂತು. ಮೊದಲಿಗೆ ವಿಶಾಲವಾದ ಮೈಸೂರು ರಾಜ್ಯ ಅಂತ ಗುರುತಿಸಿಕೊಂಡಿತು. ನಂತರ ಬರಬರುತ್ತಾ ಅನೇಕ ಕನ್ನಡ ಸಂಸ್ಥೆಗಳು ಒತ್ತಾಯ ಮಾಡಿದ ಪರಿಣಾಮ ೧೯೫೬ ರಲ್ಲಿ ಕರ್ನಾಟಕ ಎಂಬ ರೂಪ ತಾಳಿತು. ಆದರೆ ಆಗ ಕರ್ನಾಟಕ ತನ್ನ ಅನೇಕ ಭಾಗಗಳನ್ನು ಕಡೆದುಕೊಂಡಿತು. ಕರ್ನಾಟಕ ಅನ್ನುವುದು ಸಂಸ್ಕೃತಿ ಕರ್ನಾಟಕವಾಯಿತು.
ವಿದ್ಯಾವರ್ಧಕ ಸಂಘ, ಮತ್ತು ಸಾಹಿತ್ಯ ಪರಿಷತ್ತು ಕರ್ನಾಟಕದ ಏಕೀಕರಣಕ್ಕೆ ಬಹಳಷ್ಟು ಕೆಲಸ ಮಾಡಿವೆ.ಆಗಾಗ ಚಳವಳಿಗಳನ್ನು ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿ ಜನರಲ್ಲಿ ಕರ್ನಾಟಕದ ಬಗೆಗಿನ ಮತ್ತು ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುತ್ತಿದ್ದವು. ಬ್ರಿಟಿಷರು ಕೂಡಾ ಕರ್ನಾಟಕದ ಏಕೀಕರಣಕ್ಕೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದಾರೆ.
ಬಿ.ಎಂ. ಶ್ರೀಕಂಠಯ್ಯನವರು ನವೋದಯ ಸಾಹಿತ್ಯ ಚಳವಳಿಯನ್ನು ಕನ್ನಡಕ್ಕೆ ನೀಡಿದರು. ಕುವೆಂಪು ಅವರ ವಿಚಾರ ಧಾರೆಗಳು ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ದಾರಿದೀಪವಾಯಿತು.
(ಮಾಹಿತಿ ಸಂಗ್ರಹ : ಪುನರಾವಲೋಕನ ಪುಸ್ತಕ)
- ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ