ಚಳಿ ಇರಲಿ, ಮಳೆ ಇರಲಿ, ಸ್ವೀಟ್ ಮಾತ್ರ ಎಲ್ಲ ಕಾಲಕ್ಕೂ ಸೂಕ್ತ, ರುಚಿ ಕೊಡುವ ಆಹಾರ. ನಳಪಾಕ ಪ್ರವೀಣೆ ಪರಿಮಳ ಶಂಕರ್ ಅವರು ಗೋಧಿಯಲ್ಲಿ ಮಾಡಿದ ಹಲ್ವಾವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಬೇಕಾಗುವ ಸಾಮಗ್ರಿಗಳು :
ಗೋಧಿ : ಎರಡು ಲೋಟ
ತುಪ್ಪ : ಒಂದು ಲೋಟ
ಸಕ್ಕರೆ : ಒಂದು ಕಪ್
ಉಪ್ಪು : ಸ್ವಲ್ಪ
ಏಲಕ್ಕಿ ಪುಡಿ : ಸ್ವಲ್ಪ
ಬೇಕಾಗುವ ಸಾಮಗ್ರಿಗಳು : ಒಂದು ಬಾಣಲೆಯಲ್ಲಿ ಒಂದು ಲೋಟ ತುಪ್ಪವನ್ನು ಹಾಕಿ, ಅದು ಕರಗಿದ ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸ್ಟೋವ್ ನ್ನು ಸಣ್ಣ ಉರಿಯಲ್ಲಿ ಕೈ ಬಿಡದೆ ಹುರಿಯಬೇಕು. ಹದಿನೈದು ನಿಮಿಷ ಹುರಿದ ಮೇಲೆ ಅದರ ಬಣ್ಣ ಬದಲಾಗುತ್ತದೆ. ಘಮ್ಮನೆ ಪರಿಮಳ ಬಂದ ನಂತರ ಅದನ್ನು ಸ್ಟೋವ್ ನಿಂದ ಕೆಳಗಿಳಿಸಿ ಒಂದೆಡೆ ತಗೆದಿಡಬೇಕು, ಅದಾದ ನಂತರ ಸಕ್ಕರೆ, ಚಿಟಿಕೆ ಉಪ್ಪು, ಏಲಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಸಣ್ಣಗೆ ಮಿಕ್ಸಿ ಮಾಡಿಕೊಳ್ಳಬೇಕು.
ತಣ್ಣಗೆ ಆದ ಗೋಧಿ ಹಿಟ್ಟಿಗೆ ಮಿಕ್ಸಿ ಮಾಡಿಕೊಂಡ ಸಾಮಗ್ರಿಗಳನ್ನು ಚನ್ನಾಗಿ ಸೇರಿಸಿಕೊಳ್ಳಿ. ಕೊನೆಯಲ್ಲಿ ಅದನ್ನು ತುಪ್ಪ ಸವರಿದ ತಟ್ಟೆಗೆ ಸುರಿದುಕೊಂಡು ಬೇಕಾದ ಆಕಾರಕ್ಕೆ ಕಟ್ ಮಾಡಿಕೊಳ್ಳಿ.
ತಿನ್ಬೇಕಾದ್ರೆ ಮಸ್ತ್ ಮಸ್ತ್ ಮೆತ್ತಗೆಯ ಗೋಧಿ ಹಲ್ವಾ ಖುಷಿ ಕೊಡುತ್ತೆ, ನೀವು ಮಾಡಿ ನೋಡಿ…
- ಕೈ ರುಚಿ : ಪರಿಮಳ ಶಂಕರ್