ನಾಟಿವೈದ್ಯೆ ಸುಮನಾ ಮಳಲಗದ್ದೆ ಅವರು ಗುಲಗುಂಜಿ ಗಿಡದ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆಅದರ ವಿಶೇಷತೆ ಏನು ಎನ್ನುವುದನ್ನು ತಪ್ಪದೆ ಓದಿ ತಿಳಿಯಿರಿ…
ಗುಲಗುಂಜಿ ಐದು ಬಣ್ಣದಲ್ಲಿ ಲಭ್ಯ. ಬಿಳಿ, ಹಸಿರು, ಕೆಂಪು, ಕಪ್ಪು ಮತ್ತು ಹಳದಿ. ಕೆಂಪು ಬಣ್ಣದ ಗುಲಗುಂಜಿ ನೋಡಲು ಆಕರ್ಷಕ. ಕಪ್ಪು ಗುಲಗುಂಜಿ ಮಾಟ ಮಂತ್ರಗಳಿಗೆ ಹೆಚ್ಚು ಉಪಯೋಗ. ಬಂಗಾರ ತೂಗುವ ಕಾಯಿ. ಆಯುರ್ವೇದದಲ್ಲಿ ಗುಲಗುಂಜಿ ಗಾತ್ರ ಎಂದು ಅಳತೆ ಇದೆ ಕಾಲು ಗ್ರಾಂ ಸಾಧಾರಣವಾಗಿ ತೂಗುತ್ತದೆ. ಇದರ ಸೊಪ್ಪು ಬೇರು ಕಾಂಡ ಎಲೆ ಗಳು ಔಷಧೀಯ ಪರಿಕರಗಳು. ಸಿದ್ದ ಔಷಧಿಗಳಲ್ಲಿ ಇದರ ಬಳಕೆ ಹೆಚ್ಚು.
1) ಗುಲಗುಂಜಿಯ ಕಾಂಡವನ್ನು ಅತಿ ಮಧುರದ ಬೇರು ಎಂದು ಮೋಸ ಮಾಡಿ ಮಾರಾಟ ಮಾಡಲಾಗುತ್ತದೆ.
2) ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕೆಮ್ಮು ಕಫ ನಿವಾರಣೆ ಆಗುತ್ತದೆ.
3) ಬೇರನ್ನು ಹಾಲು ತುಪ್ಪ ಮೊಸರು ಮುಂತಾದವುಗಳಿಂದ ಶುದ್ಧೀಕರಣ ಮಾಡಿ ಔಷಧಿ ತಯಾರಿಸಿ ಉಪಯೋಗಿಸುವುದರಿಂದ ಕಾಮೋತೇಜಕವಾಗಿ ಕೆಲಸ ಮಾಡುತ್ತದೆ.
4) ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಸ್ವರ ಶುದ್ಧಿಯಾಗುತ್ತದೆ.
5) ಇದರ ಎಲೆ ಕೂದಲಿನ ಬೆಳವಣಿಗೆಯಲ್ಲಿ ಉತ್ತೇಜಕವಾಗಿ ಕೆಲಸ ಮಾಡುತ್ತದೆ ನಾನು ತಯಾರಿಸುವ ಕೂದಲಿನ ಎಣ್ಣೆಯಲ್ಲಿ ಇದು ಒಳಗೊಂಡಿದೆ.
6) ಬೇರು ಕಾಂಡ ಎಲೆಗಿಂತ ಬೀಜದಲ್ಲಿ ವಿಷ ಹೆಚ್ಚು. ನನ್ನ ಅಜ್ಜ ಹೇಳಿದಂತೆ ಹಾವಿನ ವಿಷಕ್ಕಿಂತ ಹೆಚ್ಚು ಮಿಗಿಲು.
7) ಸರಿಯಾದ ಅನುಭವ ಇಲ್ಲದೆ ಗುಲಗುಂಜಿಯನ್ನು ಹೊಟ್ಟೆಗೆ ತೆಗೆದುಕೊಳ್ಳುವುದು ಅಷ್ಟು ಸೂಕ್ತ ಅಲ್ಲ.
- ಸುಮನಾ ಮಳಲಗದ್ದೆ -ನಾಟಿವೈದ್ಯರು 9980182883.