‘ಗುರುರಾಘವೇಂದ್ರರು’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ರಾಯರ ದಿನ ಗುರುವಾರದಂದು ರಾಯರನ್ನು ನೆನೆದು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಒಂದು ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನಡೆ ನಡೆ ನಡೆವೆಡೆ ರಾಯರನು
ನುಡಿನುಡಿ ನುಡಿಯಲು ರಾಯರನು
ಗುಡಿಗುಡಿ ಗುಡಿಯಲು ರಾಯರನು
ಬಿಡೆಬಿಡೆ ರಾಯರ ಪಾದವನು

ಕರೆದರೆ ಬಿರಬಿರ ಬರುವವರು
ತರತರ ದುರಿತವ ಕಳೆಯುವರು
ಹರಿಹರರಿಗು ಗುರು ಮಿಗಿಲಿವರು
ಗುರುತರ ಬಾಳಿಗೆ ನಾವಿಕರು

ನೆನೆ ನೆನೆ ನೆನೆದರೆ ಬಳಸುವರು
ಮುನಿ ಮುನಿ ಮುನಿವರ ಗುರುವರರು
ಮಿನುಗಿಸೆ ಬಾಳನು ಹರಸುವರು
ಕ್ಷಣ ಕ್ಷಣ ಬಕುತರ ಪೊರೆವವರು

ಕಳೆಯುತ ಪೂರ್ವದ ಕರ್ಮವನು
ಬಳಸುತ ಕರಗಿಸಿ ಪಾಪವನು
ಹೊಳಪಿಸಿ ನಡೆಯುವ ದಾರಿಯನು
ಬೆಳಗಿಸುವವ ನಿಜ ಗುರುವರನು.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading