ಕೂದಲ ಆರೈಕೆ, ಅದರ ರಕ್ಷಣೆ ಕುರಿತು ವಾಣಿ ಮೈಸೂರು ಅವರು ಓದುಗರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸೌಂದರ್ಯದ ಮೆರುಗಿಗೆ ಸೋಪಾನವೇ ಕೂದುಲು. ಸುಂದರ ಹೊಳೆಯುವ ನೀಳಾ , ದಪ್ಪ ಮತ್ತು ಸಮೃದ್ಧಿ ಬರಿತ ಕೂದಲು ಎಲ್ಲರಿಗೂ ಇಷ್ಟವೇ ಮತ್ತು ಅತಿ ಪ್ರಿಯವೇ ? ಆದರೆ ಇಂದಿನ ದಿನಗಳಲ್ಲಿ ಅಧಿಕ ಒತ್ತಡ ಮತ್ತು ಯಾಂತ್ರಿಕತೆಯಿಂದ ಕೂಡಿದ ಜೀವನ ಶೈಲಿ ಕೂದುಲು ಅತಿಯಾಗಿ ಉದುರುವುದೇ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಸುಳಲ್ಲ.
ಕೂದುಲು ಉದುರುವುದೇ ಮಾನಸಿಕ ಹಿಂಸೆ ಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆ ಆಗಿದೆ. ಕೂದಲಿನ ತ್ವಚೆಯ ಜತೆಗೆ ಆರೋಗ್ಯಬರಿತ ಮತ್ತು ಸತ್ವಯುಕ್ತ ಆಹಾರವು ಕೂದುಲು ಉದುರುವುದನ್ನು ಕಾಪಾಡಿಕೊಳ್ಳಲು ಕಾರಣವಾಗುವ ಮುಖ್ಯ ಅಂಶವಾಗಿದೆ.
ಇದಕ್ಕೆ ಇರುವ ಪರಿಹಾರವನ್ನು ಕಂಡು ಕೊಳ್ಳಲೇಬೇಕು.

ಫೋಟೋ ಕೃಪೆ :google
ಕೂದುಲು “ಕೆರಾಟಿನ್” ಎಂಬ ಪ್ರೋಟೀನ್ ನಿಂದ ರಚಿಸಲ್ಪಡುತ್ತದೆ. ಬಯೋಟಿನ್ ಕೊರತೆಯಿಂದ ಕೂದಲು ಉದುರುವುದು, ತೀರಾ ತೆಳುವಾಗುವುದು, ಉಗುರು ಮುರಿದು ಹೋಗುವುದು, ಮುಖದಲ್ಲಿ ದದ್ದು ಕಾಣಿಸಿಕೊಳ್ಳುವ ಸಮಸ್ಯೆಗಳು ಸಹ ಕಾಡುತ್ತದೆ. ಬಯೋಟಿನ್ ಆಹಾರಗಳಲ್ಲಿ ಸಿಗುವ ನೈಸರ್ಗಿಕವಾಗಿ ವಿಟಮಿನ್ ಆಗಿದೆ.
* ಮೊಟ್ಟೆ, ಹಾಲು ಮತ್ತು ಬಾಳೆಹಣ್ಣಿನಲ್ಲಿ ಹೆಚ್ಚಾಗಿ ಬಯೋಟಿನ್ ಅಂಶವಿದ್ದು ಕೂದುಲನ್ನು ಸಂರಕ್ಷಿಸುವಲ್ಲಿ ಸಹಕಾರಿಯಾಗಿದೆ.
* ‘ಬಿ ‘ ಜೀವ ಸತ್ವ, ಪ್ರೋಟೀನ್, ರಂಜಕ ಮತ್ತು ಕಬ್ಬಿಣ ಅಂಶಗಳುಳ್ಳ ಆಹಾರ ಪದ್ಧತಿಯ ಸೇವನಾ ಕ್ರಮಗಳು ಬಯೋಟಿನ್ ಕೊರತೆಯನ್ನು ದೂರಮಾಡುತ್ತದೆ.
* ಮೊಟ್ಟೆಯ ಹಳದಿ ಲೋಳೆಯ ಭಾಗವನ್ನು ಸೇವಿಸುವುದರಿಂದ ಬಯೋಟಿನ್ ಕೊರತೆಯನ್ನು ನಿವಾರಿಸಬಹುದು.
* ಅವರೆಕಾಳು ಬೀನ್ಸ್ ಮತ್ತು ಬೇಳೆ ಕಾಳುಗಳು ದ್ವಿದಳ ಧಾನ್ಯಗಳು ಫೈಬರ್ ಅಂಶವನ್ನು ಒಳಗೊಂಡ ತರಕಾರಿಗಳು, ಹಣ್ಣುಗಳು ಮತ್ತು ಆಹಾರ ಸೇವೆನೆಯು ಸಹಕಾರಿಯಾಗಿದೆ.
ಕಡ್ಲೆಕಾಯಿ, ಸೋಯಾಬಿನ್, ಸಿಹಿ ಆಲೂಗೆಡ್ಡೆ ಸೇವನೆಯಿಂದ ಕ್ಯಾರೊಟಿ ನಾಯ್ಡ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದೆ.ಆವಕಾಡೋ ಹಣ್ಣು (ಬೆಣ್ಣೆ ಹಣ್ಣು ) ಸಹ ಸಹಕಾರಿಯಾಗಿದೆ.
- ವಾಣಿ ಮೈಸೂರು
