“ಹಾಗೆ ಎರಡು ಹನಿಗವಿತೆಗಳು. ಬದುಕಿನ ಹಾದಿಗೆ ಬೆಳಕಾಗುವ ಭಾವಪ್ರಣತೆಗಳು. ಈ ಎರಡರಲ್ಲೂ ಬದುಕು-ಬಂಧಗಳ ಕಹಿ ಸತ್ಯದ ರಿಂಗಣವಿದೆ. ಕಠೋರ ವಾಸ್ತವದ ಅನಾವರಣವಿದೆ. ಇದರ ಅನುಭವ ನಿಮಗೂ ಆಗಿರಬಹುದು. ಏನಂತೀರಾ..?” – ಪ್ರೀತಿಯಿಂದ ಎ.ಎನ್. ರಮೇಶ್. ಗುಬ್ಬಿ.
1.ಸೂಕ್ತ..!
ಬೆಲೆ ಕೊಡದವರೊಡನೆ
ಏಗುವುದಕಿಂತ
ಸಲೆ ಇರುವವರೊಡನೆ
ಸಾಗುವುದು ಲೇಸು.!
ಅಸಡ್ಡೆ ಮಾಡುವರೊಡನೆ
ನಡೆಯುವುದಕಿಂತ
ಆದರ ನೀಡುವವರೊಡನೆ
ನರ್ತಿಸುವುದು ಸಲೀಸು.!
********
2.ಎಚ್ಚರಿಕೆ..!
ಗುಂಡಿಗೆಗೆ ಖೋವಿಯಿಟ್ಟು
ಎದುರು ನಿಂತ ಶತೃವನ್ನು
ನಿರ್ಲಕ್ಷಿಸಿದರೂ ಒಮ್ಮೊಮ್ಮೆ
ಆಗಬಹುದೇನೊ ಬಚಾವು.!
ಪರರ ಹೆಗಲಲಿ ಬಂದೂಕಿಟ್ಟು
ನಮ್ಮೆಡೆಗೆ ಗುರಿಯಿಟ್ಟು ಕುಳಿತ
ಹುಸಿನಗೆ ಮಿತ್ರನನ್ನೇನಾದರು
ಅಲಕ್ಷಿಸಿದರೆ ಮಾತ್ರ ನಮಗೆ
ನಾವೆ ತಂದುಕೊಂಡಂತೆ ಸಾವು.!
- ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ
