ಸಿಕ್ಕೀತೇ ಹರುಷ ?

ಜೀವನದ ಹಲವು ಆಯಾಮಗಳನ್ನುಕವನದ ಮೂಲಕ ಜನರಿಗೆ ಅರ್ಥಯಿಸುವ ಪ್ರಭಾಕರ ತಾಮ್ರಗೌರಿ ಅವರ ಬರವಣಿಗೆ ಎಲ್ಲರಿಗೂ ಆಪ್ತವಾಗುತ್ತದೆ. ಅವರು ಬಳಸುವ ಪದಗಳ ಗುಚ್ಛ ಮತ್ತೆ ಮತ್ತೆ ಓದಬೇಕೆನ್ನಿಸುವುದಂತೂ ನಿಜ. ನೀವು ಓದಿ,ತಪ್ಪದೆ ಶೇರ್ ಮಾಡಿ…

ಹೊಸ್ತಿನಲಿ ಕುಳಿತು
ಬಾಳ ಪುಟಗಳನ್ನು
ಒಮ್ಮೆ ತಿರುಗಿಸಿ ನೋಡಿ
ಎಲ್ಲಿ ಸಿಕ್ಕಿದೆ
ಹರುಷ ಎಲ್ಲರಿಗೂ
ಬುದ್ಧ ಹುಡುಕಲಿಲ್ಲವೇ …?
ದಟ್ಟ ಕಾನನ ಹೊಕ್ಕು
ಸಾಧು ಸಂತರು ಅರಸಲಿಲ್ಲವೇ
ಮಂಜು ಮುಸುಕಿದ
ಶುಭ್ರ ಹಿಮಾಲಯದಲ್ಲಿ ಸಿಕ್ಕು!
ಕಾಣ ಬಯಸಲಿಲ್ಲವೇ
ಕದಳೀ ವನದಲ್ಲಿ
ವಿಷದ ಬಟ್ಟಲಲ್ಲಿ
ಇದೆಯಾ ಎಂದು ನೋಡಲಿಲ್ಲವೇ …?
 
ಹೌದು,
ಹರುಷವೊಂದು ಮರೀಚಿಕೆಯಂತೆ
ಬೆನ್ನು ಹತ್ತುವವರೇ
ನಾವೆಲ್ಲಾ ಓಡಿದಷ್ಟು ಮುಂದೆ
ಹಿಡಿಯಲು ಹಿಂದೆ
ಕಾಣದಿರುವುದನ್ನು ಕೈಚಾಚಿ
ಇರುವುದೆಲ್ಲವ ಬಿಟ್ಟು
ನಮ್ಮ ತನ ಸುಟ್ಟು
ಅರಸುತ್ತಿಲ್ಲವೇ ಸಾಯುವ ತನಕ
ಒಮ್ಮೆಯಾದರೂ ನೆನೆಯಬಾರದೇ
ಆ ಭಗವಂತನಲ್ಲಿ ಮನವಿಟ್ಟು
ಈ ಬಂಧನವ ಬಿಟ್ಟು ……!  

  • ಪ್ರಭಾಕರ ತಾಮ್ರಗೌರಿ , ಗೋಕರ್ಣ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW