ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ ಮತ್ತೆ ಹುಟ್ಟಿ ಬರಲಿ…
೨೦೨೦ ಮರೆಯಲಾಗದ ವರ್ಷವಾಗಿ ಹೋಯಿತು. ಒಂದೂ ಕಡೆ ಕರೋನ ಇನ್ನೊಂದೆಡೆ ದಿಗ್ಗಜರ ಸಾವು. ಎಸ್ ಪಿ ಬಿ ಅವರ ಸಾವಿನ ಬೆನ್ನಲ್ಲೇ ರವಿ ಬೆಳೆಗೆರೆಯವರ ಸಾವು, ಒಂದೊಂದ ಮೇಲೊಂದರಂತೆ ಹಿರಿಯ ಚೇತನಗಳ ಸಾವು ಮನಸ್ಸಿಗೆ ತುಂಬಾ ನೋವುಕೊಟ್ಟಿದೆ ೨೦೨೦.
ರವಿ ಬೆಳೆಗೆರೆ ಅವರಂತೆ ಬರೆಯುವ ಅದಮ್ಯ ಶಕ್ತಿ ಆ ಭಗವಂತ ನನಗೆ ಕೊಡಲಿ ಎಂದು ನಾನು ದೇವರಲ್ಲಿ ಎಷ್ಟೋ ಬಾರಿ ಪ್ರಾರ್ಥಿಸಿದ್ದು ಇದೆ. ಅವರನೊಮ್ಮೆ ಭೇಟಿ ಮಾಡಿ ಅವರ ಖಡಕ್ ಮಾತುಗಳನ್ನು ಕೇಳಬೇಕೆನ್ನುವ ಹಂಬಲ ಈಡೇರಲಿಲ್ಲ ಎನ್ನುವ ನೋವು ಈಗ ಕಾಡುತ್ತಿದೆ.
ಬಹುಶಃ ಈ ನೋವು ನನಗಷ್ಟೇ ಅಲ್ಲ ನನ್ನಂತೆ ಯುವ ಬರಹಗಾರರಿಗೆ ರವಿ ಬೆಳೆಗೆರೆ ಸ್ಪೂರ್ತಿಯಾಗಿದ್ದರು. ನಮ್ಮ ತಂದೆ ಹೂಲಿಶೇಖರ್ ಅವರು ರವಿ ಬೆಳೆಗೆರೆ ಬೆಳೆಯುವ ಹಂತದಲ್ಲಿದ್ದಾಗ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಯಾವಾಗಲೂ ನೆನೆಸಿಕೊಳ್ಳುತ್ತಾ, ರವಿ ಬೆಳೆಗೆರೆ ಎಂದರೆ ‘ಅಕ್ಷರದ ರಾಕ್ಷಸ’ನೇ ಎನ್ನುತ್ತಿದ್ದರು. ೪೦೦ ರೂಪಾಯಿಯನ್ನು ಹಿಡಿದು ಬೆಂಗಳೂರಿಗೆ ಬಂದು ಮುಂದೆ ಕೋಟಿ ಕೋಟಿಯ ಆಸ್ತಿಯ ಒಡೆಯನಾದ ರವಿ ಬೆಳೆಗೆರೆ ಬಗ್ಗೆ ಪತ್ರಿಕಾ ಮಿತ್ರರು ಸಾಕಷ್ಟು ಬರೆದಿದ್ದಾರೆ. ಅವುಗಳಲ್ಲಿ ಒಳ್ಳೆಯದು ಇವೆ, ಕೆಟ್ಟದ್ದು ಇವೆ. ಆದರೆ ಅವುಗಳಲ್ಲಿ ಒಳ್ಳೆಯದನಷ್ಟೆ ತಗೆದುಕೊಂಡು ರವಿ ಬೆಳೆಗೆರೆ ಎಂದರೆ ‘ಅಕ್ಷರ ಮಾಂತ್ರಿಕ’ ಎನ್ನುವುದು ಎಲ್ಲರೂ ಒಪ್ಪಲೇ ಬೇಕು.
ನನ್ನ ಸಹಪಾಠಿಗಳಾಗಿದ್ದ ಭಾವನಾ ಬೆಳೆಗೆರೆ ಹಾಗು ಚೇತನ ಬೆಳೆಗೆರೆಯಲ್ಲಿಯೂ ಅಪ್ಪನಂತೆ ನೇರ ನುಡಿ,ಸ್ನೇಹ ಜೀವಿ, ಸರಳ ವ್ಯಕ್ತಿತ್ವ ಬಳವಳಿಯಾಗಿ ಬಂದಿವೆ. ಈ ಇಬ್ಬರಲ್ಲೂ ಅಪ್ಪನಂತೆ ಬರೆಯುವ ಶಕ್ತಿ ಕೊಡಲಿ, ‘ಹಾಯ್ ಬೆಂಗಳೂರು’ ಪತ್ರಿಕೆ ಮತ್ತೆ ಬರಲಿ. ರವಿ ಬೆಳೆಗೆರೆ ಅವರು ಮತ್ತೆ ಹುಟ್ಟಿ ಬರಲಿ ಎನ್ನುವುದೇ ನನ್ನ ಆಶಯ.
ಅಕ್ಷರ ಮಾಂತ್ರಿಕ ರವಿ ಬೆಳೆಗೆರೆಗೆ ಅವರಿಗೆ ಅಂತಿಮ ನಮನ….
- ಶಾಲಿನಿ ಹೂಲಿ ಪ್ರದೀಪ್