ಹಸ್ತಾಲಂಬ ಚಿಕಿತ್ಸೆ ಮತ್ತು ರೋಗಿಯ ಅನುಭವ

“ಹಸ್ತಾಲಂಬ” ಚಿಕಿತ್ಸೆ ಬಗ್ಗೆ ಹೆಚ್ಚು ತಿಳಿಯಲು ಮತ್ತು ರೋಗಿಯ ಅನುಭವವನ್ನು ಡಾ ಪ್ರಕಾಶ ಬಾರ್ಕಿಯವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ರೋಗಿಯ ಹೆಸರು:____________
ವಯಸ್ಸು: 46 ವರ್ಷ
ಊರು: ಬೆಂಗಳೂರು.

ಭೇದಿ (diarrhoea), ಉಬ್ಬಳಿಕೆ, ಧಾರಾಕಾರ ಸುಸ್ತು, ಮೈ ನೋವು, ಹಸಿವೆ ಇಂಗಿಹೋದ ಅನುಭವ, ಕಹಿ ರುಚಿ, ಎದೆ ಉರಿ, ನಿದ್ರೆಯಲ್ಲಿ ವಿಪರೀತ ವ್ಯತ್ಯಾಸವಾದಾಗ.. ತೀವ್ರ ಬಳಲಿಕೆ ಬಂದು ವೈದ್ಯರನ್ನ ಎಡತಾಕಿ ಅಲೋಪಥಿ, ಆಯುರ್ವೇದ ಔಷಧಿಯನ್ನು ವಾರಾನುಗಟ್ಟಲೆ ಸೇವಿಸಿದರೂ..ತೊಂದರೆ ಗಹನವಾಗಿ ವೈಪರಿತ್ಯಕ್ಕೆ ಹೋಯಿತೆ ವಿನಃ.. ತಹಬದಿಗೆ ಬರಲಿಲ್ಲಾ.
ಕೊನೆಗೆ ಕಾಯಿಲೆ ಪೀಡಿತ ವ್ಯಕ್ತಿ… “ಹಸ್ತಾಲಂಬ”(Hastaalamba) ಕ್ಕೆ ರಿಜಿಸ್ಟರ್ ಮಾಡಿಕೊಂಡಿದ್ದಾರೆ.. ರೋಗಿಯ ರಕ್ತಪರೀಕ್ಷೆ, ರೋಗಿ ಲಕ್ಷಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಕೇವಲ ಕಟ್ಟುನಿಟ್ಟಿನ ಪಥ್ಯಾಹಾರ(SNS), ಕಷಾಯ ಮತ್ತು ಔಷಧಿಯುಕ್ತ ನೀರನ್ನು (medicated water) ಸೇವಿಸಲು ಡಾ. ಪ್ರಕಾಶ ಗುಂಜಾಳ Prakash Gunjal
ಸಲಹೆ ನೀಡಿದರು. ಅವರ ಜೊತೆ volunteer ಆಗಿ ನಾನು ಸಹ ರೋಗಿಯ ದೈನಂದಿನ ಲಕ್ಷಣಗಳನ್ನು ದಾಖಲಿಸಿತೊಡಗಿದೆ ಮತ್ತು ರೋಗಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದೆ.
ರಕ್ತ ಪರೀಕ್ಷೆಯಲ್ಲಿ ಹಿಮೋಗ್ಲೋಬಿನ್ ಪ್ರಮಾಣ ತುಂಬಾ ಕಡಿಮೆ ಇದ್ದುದಲ್ಲದೆ ಇನ್ಫೆಕ್ಷನ್, ರಕ್ತಹೀನತೆ ಕಂಡುಬಂದಿತು.

ಚಿಕಿತ್ಸೆ ಪ್ರಾರಂಭಿಸಿದ ಕೇವಲ 24 ಗಂಟೆಯಲ್ಲಿ ರೋಗಿಯ ಸುಸ್ತು, ಎದೆ ಉರಿ ಸಂಪೂರ್ಣ ಇಲ್ಲದಂತಾಗಿ ಬಳಲಿಕೆ ತಹಬದಿಗೆ ಬಂದು, ರೋಗಿ ನಮ್ಮಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತೊಡಗಿದರು.
ನಿರಂತರ 4 ದಿನದ ಚಿಕಿತ್ಸೆಯಲ್ಲಿ ಎಲ್ಲಾ ರೋಗಲಕ್ಷಣಗಳು ಇಲ್ಲವಾಗಿ ಸಂಪೂರ್ಣ ಜೀರ್ಣಶಕ್ತಿ,ಹಸಿವು, ರುಚಿ, ಮೈಯಲ್ಲಿ ಚೈತನ್ಯ ಮರುಕಳಿಸಿತು.
6ನೇಯ ದಿನದ ರಕ್ತ ಪರೀಕ್ಷೆಯಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸಹ ಹೆಚ್ಚಾಗಿದ್ದು.. ರೋಗಿ ಸಂಪೂರ್ಣ ಆರೋಗ್ಯವಂತರಾಗಿ, ಯಾವುದೇ ರೀತಿಯ ಅಡ್ಡಪರಿಣಾಮ, ಔಷಧಿವಿಲ್ಲದೇ, ಹಣದ ಭಾರಿ ಖರ್ಚಿಲ್ಲದೆ ತಮ್ಮ ಸಹಜ ಜೀವನಕ್ಕೆ ಮರಳಿದರು. ರೋಗಿಯ ಅನುಭವದ ಬರಹ, ರಕ್ತಪರೀಕ್ಷೆಗಳನ್ನು ಈ ಕೆಳಗೆ ಲಗತ್ತಿಸಿದೆ…. ನೋಡಬಹುದು.

ಇತರೆ ಚಿಕಿತ್ಸೆಗಳಿಗೆ ಮಣಿಯದ ವೈರಲ್ ಜ್ವರ, ಭೇದಿ, ಕೆಮ್ಮು, ಕಫ.. ಮುಂತಾದ infections ಕೇವಲ ಔಷಧವಿಲ್ಲದ “ಹಸ್ತಾಲಂಬ” ಚಿಕಿತ್ಸೆಯಲ್ಲಿ.. ನಿಪುಣ ವೈದ್ಯರ ಸಹಾಯದಿಂದ ಹತೋಟಿಗೆ ಬಂದು ಸಂಪೂರ್ಣ ವಾಸಿಯಾಗುತ್ತವೆ.
ರೋಗಿ “ಹಸ್ತಾಲಂಬ” ಚಿಕಿತ್ಸೆಯಲ್ಲಿರುವಾಗ ದಿನಕ್ಕೆ 2 ಬಾರಿಯಂತೆ ನಿರಂತರ ಸಂಪರ್ಕಿಸಿ ರೋಗಿಯ ಆರೋಗ್ಯದ ಏರುಪೇರು, ರೋಗಲಕ್ಷಣಗಳು, ಬಿ.ಪಿ ಯನ್ನ ಅತೀವ ಕಾಳಜಿಯಿಂದ ಗಮನಿಸಿ ದಾಖಲಿಸಲಾಗುತ್ತೆ.. ಇದನ್ನು ಹೊರತುಪಡಿಸಿ ಬೇರೆ ತೊಂದರೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿರತ್ತೆ. ಔಷಧಿ ರಹಿತ ವೈರಲ್ ಜ್ವರದ ಪ್ರಥಮ ಚಿಕಿತ್ಸೆ (VFFA) “ಹಸ್ತಾಲಂಬ” ಹಲವು ತೊಂದರೆಗಳಲ್ಲಿ ಪರಮಾಶ್ಚರ್ಯ ರೀತಿಯಲ್ಲಿ ಕಾಯಿಲೆ ವಾಸಿ ಮಾಡುತ್ತೆ. ನೀವು ಈ ಉಚಿತ ಚಿಕಿತ್ಸೆ ಪಡೆಯಲು… https://sites.google.com/view/sbeba-vffa/home ಭೇಟಿ ನೀಡಿ.. ರಿಜಿಸ್ಟರ್ ಮಾಡಿಕೊಳ್ಳಿ..

“ಹಸ್ತಾಲಂಬ” ಚಿಕಿತ್ಸೆ ಬಗ್ಗೆ ಹೆಚ್ಚು ತಿಳಿಯಲು :

ಈ ಮೂಲಕ “ಹಸ್ತಾಲಂಬ” ಚಿಕಿತ್ಸೆಯನ್ನು ರೂಪಿಸಿ, ಪ್ರಚಾರಕ್ಕೆ ತಂದಿರುವ ಡಾ. ರಾಜಕುಮಾರ್ Raj Kumar ಮತ್ತು ಡಾ. ರಮ್ಯಾ ಕೃಷ್ಣನ್ Remya Krishnan ವೈದ್ಯ ದಂಪತಿಗೆ ಧನ್ಯವಾದಗಳು

 

  • ಪ್ರಕಾಶ ಬಾರ್ಕಿ – ಆಯುರ್ವೇದ ವೈದ್ಯರು, ವೈದಕೀಯ ಬರಹಗಾರರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW