ವೈರಲ್ ಜ್ವರಕ್ಕೆ ಔಷಧಿ ರಹಿತ ಆಯುರ್ವೇದ ಪ್ರಥಮ ಚಿಕಿತ್ಸೆ

ಆಯುರ್ವೇದಕ್ಷೇತ್ರದಮೊದಲವಿಶಿಷ್ಟಪ್ರಯೋಗ ಹಸ್ತಾಲಂಬ ಚಿಕಿತ್ಸೆ. ಸಂಸ್ಕೃತದಲ್ಲಿ “ಹಸ್ತಾಲಂಬ” ಎಂದರೆ “ಕೈ ಚಾಚು” ಎಂದರ್ಥ. ” ಅವಶ್ಯಕತೆ ಇರುವ ರೋಗಿಗೆ ವೈದ್ಯ ಸಹಾಯ ಹಸ್ತ ಚಾಚಬೇಕು(ಹಸ್ತಾಲಂಬ)” ಎಂಬುವ ತಾತ್ಪರ್ಯವನ್ನು ಸಂಸ್ಕೃತ ಶ್ಲೋಕದ ಮೂಲಕ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಡಾ ಪ್ರಕಾಶ ಬಾರ್ಕಿ ಲೇಖನದಲ್ಲಿ ಹಸ್ತಾಲಂಬ ಚಿಕಿತ್ಸೆ ಕುರಿತು ತಿಳಿಯೋಣ…

ಕೇರಳದ ಪ್ರಸಿದ್ಧ ವೈದ್ಯರಾದ ಡಾ.ರಾಜಕುಮಾರ [Dr.Rajkumar KC. MD, PhD (Ayurveda) ] ಮತ್ತು ಡಾ. ರಮ್ಯಾ ಕೃಷ್ಣನ್ [Dr. Remya Krishnan . MD, PhD (Ayurveda)] ದಂಪತಿಗಳು ತಮ್ಮ 20 ವರ್ಷಗಳ ಆಯುರ್ವೇದ ಚಿಕಿತ್ಸಾ ಅನುಭವ, ಸಂಶೋಧನೆ ಮೂಲಕ “ವೈರಲ್ ಜ್ವರ”ಗಳಿಗೆ “ಔಷಧಿ ರಹಿತ” ಆಯುರ್ವೇದ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿ, ಆ ಚಿಕಿತ್ಸಾ ಕ್ರಮಕ್ಕೆ “ಹಸ್ತಾಲಂಬ” ಎಂದು ನಾಮಕರಣ ಮಾಡಿದ್ದಾರೆ.

ಸುಮಾರು ಒಂದೂವರೆ ವರ್ಷಗಳ ಹಿಂದೆಯೇ.. ಕೋವಿಡ್ ಸಮಯದಲ್ಲಿ “ವೈರಲ್ ಜ್ವರ”ದ ಪ್ರಥಮ ಚಿಕಿತ್ಸೆಯಾಗಿ (viral fever first aid {vffa}) ಪ್ರಚುರಪಡಿಸಿದ ಯೋಜನೆ “ಹಸ್ತಾಲಂಬ”. ಹಲವು ಆಯುರ್ವೇದ ವೈದ್ಯರಿಗೆ ತಮ್ಮ ಚಿಕಿತ್ಸಾ ಅನುಭವವನ್ನು ವೈಜ್ಞಾನಿಕವಾಗಿ ವಿವರಿಸಿ, ವೈಜ್ಞಾನಿಕ ಸಂಶೋಧನೆಗಳ ತಳಹದಿಯ ಮೇಲೆ ತರಬೇತಿ ನೀಡಿ, ಆಯುರ್ವೇದ ವೈದ್ಯರ ತಂಡವನ್ನೆ ಸಿದ್ದಗೊಳಿಸಿದ್ದಾರೆ.

ಭಾರತಾದ್ಯಂತ “ವೈರಲ್ ಜ್ವರದ” ಪ್ರಥಮ ಚಿಕಿತ್ಸೆಯನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡಲು ಹೀಗೊಂದು ಆಯುರ್ವೇದ ವೈದ್ಯ ಗಣ ಟೊಂಕ ಕಟ್ಟಿ ನಿಂತಿದೆ.

ಕೋವಿಡ್ ತಾಂಡವಾಡುವ ಸಮಯದಲ್ಲಿ ಈ ಚಿಕಿತ್ಸೆಯನ್ನು ಪಡೆದು ಗುಣವಾದವರು ಸಾವಿರಾರು, ಇವತ್ತಿಗೂ “ಹಸ್ತಾಲಂಬ” ಚಿಕಿತ್ಸೆಯನ್ನು ಪಡೆಯುತ್ತಿರುವವರು ನೂರಾರು. ವೈರಲ್ ಅಲ್ಲದೇ ಇತರೆ ಎಲ್ಲಾ ತರದ ಜ್ವರದ ಸಮಸ್ಯೆಗಳಿಗೂ ಸಹ ಈ ಚಿಕಿತ್ಸೆ ಅತೀವ ಯಶಸ್ವಿಯಾಗಿದೆ. ರೋಗಿಯ ಎಲ್ಲಾ ಲಕ್ಷಣ, ಪಡೆಯುತ್ತಿರುವ ಚಿಕಿತ್ಸಾ ಕ್ರಮ, ಪಥ್ಯದ ವಿವರ, ಚಿಕಿತ್ಸೆಯ ಪರಿಣಾಮವನ್ನು ದಾಖಲಿಸಿ ಕಾಪಿಡಲಾಗಿದೆ. ಇದೊಂದು ವೈಜ್ಞಾನಿಕ ತಳಹದಿ ಮತ್ತು ಪುರಾವೆಗಳ ಆಧಾರದ ಮೇಲೆ ಅಭಿವೃದ್ಧಿಪಡಿಸಿದ (Science based evidence based ) “ಔಷಧಿ ರಹಿತ ಆಯುರ್ವೇದ ಚಿಕಿತ್ಸೆ”

ಆಯುರ್ವೇದ ಕ್ಷೇತ್ರದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಚುರಪಡಿಸಿದ ಔಷಧಿ ರಹಿತ ಆಯುರ್ವೇದ ಚಿಕಿತ್ಸಾ ಕ್ರಮವಾಗಿದೆ, ಯಶಸ್ವಿಯಾಗಿ ಇಂದಿಗೂ ಸಾವಿರಾರು ಜನರಿಗೆ ವೈರಲ್ ಮತ್ತು ಇತರೆ ಜ್ವರಕ್ಕೆ ಚಿಕಿತ್ಸೆ ನೀಡಿ ಸಂಪೂರ್ಣ ಯಶಸ್ಸಿನತ್ತಲೆ ಸಾಗುತ್ತಿದೆ.

ಕೊರೋನಾ “ವೈರಲ್ ಜ್ವರದ” ಚಿಕಿತ್ಸೆಗೆ ಬಳಸಿದ ಹಲವು ಔಷಧಿಗಳು “ವೈಜ್ಞಾನಿಕವಾಗಿ” ಆಧಾರ ರಹಿತ, “ಅವೈಜ್ಞಾನಿಕ” ಎಂದು… ಕೊನೆಕೊನೆಗೆ “ವಿಶ್ವ ಆರೋಗ್ಯ ಸಂಸ್ಥೆ”(WHO)ಯಿಂದ ತಿರಸ್ಕರಿಸಲ್ಪಟ್ಟವು. ಆದಾಗಲೇ ಲಕ್ಷಾಂತರ ಜನರು ಪ್ರಾಣ ತೆತ್ತಾಗಿತ್ತು, ಬದುಕಲು ಹಲವರು ಚಿಕಿತ್ಸೆ ಪಡೆದಾಗಿತ್ತು. ಅಂದು ಪ್ರಯೋಗಿಸಿದ ಔಷಧಿಗಳ ಅಡ್ಡ ಪರಿಣಾಮಗಳನ್ನು ಇಂದಿಗೂ ಚಿಕಿತ್ಸೆ ಪಡೆದವರು ಅನುಭವಿಸುತ್ತಿದ್ದಾರೆ. ಇದೊಂದು ಮರೆಮಾಚಿದ ಕಹಿ ಸತ್ಯ!!.

ಯಾವುದೇ ರೀತಿಯ ವೈರಸ್, ಬ್ಯಾಕ್ಟೀರಿಯಾ ಇತರೆ ಕಾರಣಗಳಿಂದ ಜ್ವರಗಳು ಭಾದಿಸುವುದು ನಮ್ಮ ರೋಗನಿರೋಧಕ ಶಕ್ತಿ ಕುಂದಿದಾಗ. ಹಸ್ತಾಲಂಬ ಚಿಕಿತ್ಸಯಲ್ಲಿ ಕಾಯಿಲೆಗೆ ಕಾರಣವಾದ ವೈರಸ್, ಬ್ಯಾಕ್ಟೀರಿಯಾಗಳನ್ನು ಕೊಲ್ಲುವ Antibiotic ಕೆಲಸದ ಬದಲು, ವಿಶಿಷ್ಟ ಆಹಾರ ಕ್ರಮ , ಕೆಲ ಆಯುರ್ವೇದ ಪರಿಹಾರಗಳಿಂದ ರೋಗನಿರೋಧಕ (Immunity boost) ಶಕ್ತಿಯನ್ನು ವೃದ್ಧಿಸಿ ಅದರ ಮೂಲಕ ಕಾಯಿಲೆಯ ಮೂಲವನ್ನು ನೀರ್ನಾಮ ಮಾಡುವುದಾಗಿದೆ‌. ಔಷಧಿ ರಹಿತ ಚಿಕಿತ್ಸೆಯಾಗಿದ್ದರಿಂದ, ಔಷಧಿ ಅಂಗಡಿಗೆ ಎಡತಾಕುವ, ಹಣ ಸುರಿಯುವ ಪ್ರಮೇಯವಿಲ್ಲ. ಹೀಗೆ… “ಹಸ್ತಾಲಂಬ” ರೋಗನಿರೋಧಕ ಶಕ್ತಿ ವೃದ್ಧಿಸಿ ಚಿಕಿತ್ಸೆ ನೀಡುವ, ಜ್ವರದ “ಪ್ರಥಮ ಚಿಕಿತ್ಸೆ”. ಯಾವುದೇ ರೀತಿಯ ಅಡ್ಡ ಪರಿಣಾಮ ರಹಿತ ವೈಜ್ಞಾನಿಕ ಚಿಕಿತ್ಸಾ ಕ್ರಮ.

ವೈದ್ಯರು ರೋಗಿಯ “ಪ್ರಥಮ ಚಿಕಿತ್ಸೆ”ಯಲ್ಲಿ ಎಡವಿದರೆ, ಕಾಯಿಲೆಗಳು ಇನ್ನಷ್ಟೂ ಉಲ್ಬಣಗೊಂಡು ದೇಹಕ್ಕೆ ಮಹಾಮಾರಿಯಾಗಿ ಮಾರ್ಪಾಡುಗುತ್ತವೆ, ದೇಹದ ಅಂಗಾಂಗಗಳು ತತ್ತರಿಸಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ “ಸಾವು” ಸಂಭವಿಸುವ ಸಾಧ್ಯತೆಗಳು ತೀರಾ ಹೆಚ್ಚು. ಕೋವಿಡ್ ಚಿಕಿತ್ಸೆಯಲ್ಲೂ ಆಗಿದ್ದೂ ಇದೆ. ವೈರಸ್ ಕಾಯಿಲೆಗಳಿಗೆ ಯಾವುದೇ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲ, ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವುದನ್ನು ಹೊರತುಪಡಿಸಿ.

ಹಸ್ತಾಲಂಬ ಚಿಕಿತ್ಸೆ ಪಡೆಯುವುದು ಹೇಗೆ ?

ಇದೊಂದು ಸಂಪೂರ್ಣ online ಚಿಕಿತ್ಸಾ ನಿರ್ದೇಶನ ನೀಡುವ ಯೋಜನಾ ಕ್ರಮವಾಗಿದ್ದು, ಜ್ವರದ ಲಕ್ಷಣಗಳು, ರಕ್ತ ಪರೀಕ್ಷೆಯ ಆಧಾರದ ಮೇಲೆ ಜ್ವರ ನೀರ್ಣಯ ಮಾಡಿ, ಔಷಧಿ ರಹಿತ ಆಯುರ್ವೇದ ಚಿಕಿತ್ಸಾ ನಿರ್ದೇಶನ ನೀಡುವ ವೈದ್ಯರ ತಂಡವಾಗಿದೆ.

ಇಚ್ಚೆಯುಳ್ಳವರು ತಮ್ಮ ಜ್ವರಕ್ಕೆ ಅಡ್ಡ ಪರಿಣಾಮ ರಹಿತ “ಔಷಧಿ ರಹಿತ” ಚಿಕಿತ್ಸೆ ಪಡೆಯಲು HASTAALAMBA https://sites.google.com/view/sbeba-vffa/home ವೆಬ್ಸೈಟ್ಗೆ ಭೇಟಿ ನೀಡಿ, Request counselling ಬಟನ್ ಒತ್ತುವುದರ ಮೂಲಕ ಒಂದು ಗೂಗಲ್ ಫಾರ್ಮ್ ತುಂಬಿ.

ಆವಾಗ ವೈದ್ಯರ ತಂಡದಿಂದ ನಿಮಗೆ ಫೋನ್ ಕರೆ ಬರುತ್ತೆ. ನಿಮ್ಮ ಲಕ್ಷಣಗಳು, ನೀವು ಈಗಾಗಲೇ ಬಳಲುತ್ತಿರುವ ತೊಂದರೆಗಳಿಗೆ (Hypertension, Diabetes etc…) ಪಡೆಯುತ್ತಿರುವ ಚಿಕಿತ್ಸೆ, ರಕ್ತ ಪರೀಕ್ಷೆಯ ರಿಪೋರ್ಟಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಚಿಕಿತ್ಸೆಯನ್ನು ಸೂಚಿಸಲಾಗುತ್ತೆ.

ಆಹಾರ ಕ್ರಮದ ಬದಲಾವಣೆ, ಔಷಧಿಗಳು ಇಲ್ಲದ ಆಯುರ್ವೇದದ ಪರಿಹಾರಗಳನ್ನು ಸೂಕ್ತವಾಗಿ ವಿವರಿಸಲಾಗುತ್ತೆ.

ರೋಗಿಗೆ ಏನಾದರೂ ಸಂಶಯಗಳಿದ್ದರೆ ನೇರವಾಗಿ ವೈದ್ಯರನ್ನು ಯಾವ ಸಮಯದಲ್ಲಾದರೂ ಫೋನ್ ಮೂಲಕ ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬಹುದು. ಅದಾಗ್ಯೂ ದಿನಕ್ಕೆ ಎರಡು ಬಾರಿ ವೈದ್ಯರು ಫೋನ್ ಮೂಲಕ ರೋಗಿಯನ್ನು ತೀವ್ರ ನಿಗಾವಹಿಸಿ ವಿಚಾರಿಸಿಕೊಳ್ಳುತ್ತಾ, ನಿರ್ದೇಶನ ನೀಡುತ್ತಾರೆ. ರೋಗಿ ಅವುಗಳನ್ನು ಪಾಲಿಸಿದರೆ ಸಾಕು.

ಮೊದಲು ಚಿಕಿತ್ಸೆಗೆ ನೇಮಕಗೊಂಡ ವೈದ್ಯರೇ.. ಜ್ವರ ಗುಣವಾಗುವವರೆಗೂ ನಿಗಾ ವಹಿಸುತ್ತಾರೆ. ವೈದ್ಯರು ಬದಲಾಗುವುದಿಲ್ಲ.

ಹೀಗೆ ಮೂರು ಕ್ರೀಯೆಗಳು “ಹಸ್ತಾಲಂಬ”ದಲ್ಲಿ ಜರುಗುವವು :

1)Patient registration( Request counselling).
2) First aid counselling.
3) Health tracking.

ಹಸ್ತಾಲಂಬ ಚಿಕಿತ್ಸೆಗೆ ತಗಲುವ ವೆಚ್ಚ?

ಇದೊಂದು ಸಂಪೂರ್ಣ ಉಚಿತ ಚಿಕಿತ್ಸೆಯಾಗಿದ್ದು. ಯಾವುದೇ ರೀತಿಯ ಹಣದ ವರ್ಗಾವಣೆ ಇಲ್ಲ. ಚಿಕಿತ್ಸೆ ಪಡೆದು ಗುಣವಾದ ನಂತರ ಆ ವೈದ್ಯರಿಗೆ ಮನಃಪೂರ್ವಕವಾಗಿ ಧನ್ಯವಾದ ಹೇಳುವ ಹೊರತು ಇಲ್ಲಿ ಚಿಕಿತ್ಸೆ ನಿರ್ದೇಶನ ನೀಡುವ, ರೋಗಿಯ ಆರೋಗ್ಯ ಕಾಳಜಿ ವಹಿಸುವ, ಕಾಲಕಾಲಕ್ಕೆ ರೋಗಿಯ ಪ್ರಶ್ನೆಗಳಿಗೆ ಉತ್ತರಿಸುವ ವೈದ್ಯರದು “ಕೇವಲ ಸೇವೆ”. ಇಲ್ಲಿ ಸೇವೆ ನೀಡುವವರು “ಸ್ವಯಂಸೇವಕ”ರು (Volunteers). ಸಾವಿರಾರೂ, ಲಕ್ಷಾಂತರ ಹಣ ಪಡೆದು ಚಿಕಿತ್ಸೆ ನೀಡುವ ವೈದ್ಯರು ಒಂದು ಕಡೆಯಾದರೆ, ‌ಹೀಗೆ ಹಣದ ಹಂಬಲವಿಲ್ಲದೆ ಮನುಕುಲಕ್ಕೆ ನಿಸ್ವಾರ್ಥ ಸೇವೆ ನೀಡುವ ವೈದ್ಯರು ಇನ್ನೊಂದು ಕಡೆ.

ಲೇಖನ ಮುಗಿಸುವ ಮೊದಲು ಒಂದಿಷ್ಟು ಕಿವಿ ಮಾತು :

*) ಹಸ್ತಾಲಂಬ ಚಿಕಿತ್ಸೆ ಅಭಿವೃದ್ಧಿಪಡಿಸಿ, ಜಾರಿಗೆ ತಂದವರು ಕೇರಳದ ಆಯುರ್ವೇದ ವೈದ್ಯರಾದ ಡಾ.ರಾಜಕುಮಾರ ಮತ್ತು ಡಾ.ರಮ್ಯಾ ಕೃಷ್ಣನ್ ದಂಪತಿಗಳು.

*) ಇದು ವೈರಲ್ ಜ್ವರಕ್ಕೆ ನೀಡುವ ಪ್ರಥಮ ಚಿಕಿತ್ಸೆಯಾಗಿದೆ.

*) ಇಚ್ಚೆಯುಳ್ಳವರು “ಅಡ್ಡಪರಿಣಾಮವಿಲ್ಲದ ಔಷಧಿ ರಹಿತ ಚಿಕಿತ್ಸೆ” ಜ್ವರಕ್ಕೆ ಬೇಕಾದರೆ HASTAALAMBA website ಗೆ ಭೇಟಿ ನೀಡಿ ಪರಿಶೀಲಿಸಿ. ನಂತರ Request
counselling ಬಟನ್ ಒತ್ತುವುದರ ಮೂಲಕ Registration ಮಾಡಿಕೊಳ್ಳಿ.

*) ವೈದ್ಯರ ಸಲಹೆ ಚಾಚೂ ತಪ್ಪದೆ ಪಾಲಿಸಿ.

*) ವೈದ್ಯರ ಜೊತೆ ನಿಮ್ಮ ಸಂಪರ್ಕ ಸೌಹಾರ್ದಯುತವಾಗಿರಲಿ.

*) ಕನ್ನಡ, ತೆಲುಗು, ತಮಿಳು, ಮಲೆಯಾಳಿ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಚಿಕಿತ್ಸೆ ಪಡೆಯಬಹುದು.

*) ಜ್ವರ ಸಂಪೂರ್ಣ ವಾಸಿಯಾದ ನಂತರ “ಧನ್ಯವಾದ” ತಿಳಿ‌ಸಿ, ಪ್ರೋತ್ಸಾಹಿಸುವುದು ಮರಿಯಬೇಡಿ.

*) ಹಸ್ತಾಲಂಬ (VFFA) ಸರ್ಕಾರದಿಂದ ಪ್ರಾಯೋಜಿಲ್ಪಟ್ಟ ಯೋಜನೆಯಲ್ಲ. ಇದೊಂದು ಸ್ವಯಂಸೇವಕ ವೈದ್ಯರು ಮನುಕುಲದ ಒಳಿತಿಗಾಗಿ ನೀಡುತ್ತಿರುವ ಸೇವೆ.

( ಸ್ವತಃ ಚಿಕಿತ್ಸೆ ಪಡೆದು ಅನುಭವಕ್ಕೆ ಬಂದ ನಂತರ ಲೇಖನಿಗಿಳಿದ ಬರಹವಿದು. ಇಚ್ಚೆಯುಳ್ಳವರ ಗಮನಕ್ಕೆ)

ಹಸ್ತಾಲಂಬ ಸಂಪೂರ್ಣ ಮಾಹಿತಿಗೆ ವೀಕ್ಷಿಸಿ :
https://youtu.be/DdYLxFL_Ljs


  • ಡಾ. ಪ್ರಕಾಶ ಬಾರ್ಕಿ , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW