ಮೆಂತ್ಯೆ ಮಹತ್ವ – ಸುಮನಾ ಮಳಲಗದ್ದೆ 

ಮನೆ ಔಷಧಿಗಳ ಕುರಿತು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ, ಈಗ ಮೆಂತ್ಯೆ ಸೊಪ್ಪಿನ ಮಹತ್ವದ ಬಗ್ಗೆ ಹೇಳಿದ್ದಾರೆ ತಪ್ಪದೆ ಮುಂದೆ ಓದಿ….

ಮೆಂತ್ಯೆ ಬಲ್ಲದವರಿಲ್ಲ. ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾದ ಸಾಂಬಾರು ದಿನಸುಗಳಲ್ಲಿ ಒಂದು ಮೆಂತ್ಯ. ಸ್ವಲ್ಪ ಕಹಿ ಗುಣವನ್ನು ಹೊಂದಿದ್ದರು ರುಚಿಯನ್ನು ಕೊಡಬಲ್ಲದು. ಇದರಲ್ಲಿ ಔಷಧೀಯ ಗುಣಗಳು ಇದೆ ನಮ್ಮ ಪೂರ್ವಿಕರು ಆಹಾರವನ್ನು ಔಷಧಿಯನ್ನಾಗಿ ಉಪಯೋಗಿಸುತ್ತಿದ್ದರು. ಈಗ ವಿಪರ್ಯಾಸ ಏನೆಂದರೆ ಕೆಲವು ಮನೆಗಳಲ್ಲಿ ಔಷಧಿಯೇ ಆಹಾರವಾಗಿದೆ.

1) ಮೆಂತ್ಯೆಯನ್ನು ನೆನೆಸಿ ಅರೆದು ಸ್ವಲ್ಪ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಗುಣವಾಗುತ್ತದೆ.

2) ಮೆಂತ್ಯೆಯನ್ನು ನೆನೆಸಿ ರುಬ್ಬಿ ಕೂದಲಿಗೆ ಹಚ್ಚುವುದರಿಂದ ಕೂದಲು ಹೊಟ್ಟು ನಿವಾರಣೆ ಆಗುತ್ತದೆ ನುಣುಪಾದ ಕಪ್ಪು ಬಣ್ಣ ಹೊಂದುತ್ತದೆ.

3) ಮೆಂತ್ಯೆಯನ್ನು ನೆನೆಸಿ ರುಬ್ಬಿ ಮುಖಕ್ಕೆ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಸುಕ್ಕು ನಿವಾರಣೆಯಾಗಿ ಕಾಂತಿ ಹೊಂದುತ್ತದೆ.

4) ಮೆಂತ್ಯೆಯನ್ನು ಕುದಿಸಿ ಕಷಾಯ ಮಾಡಿ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ದಮ್ಮು ನಿವಾರಣೆ ಆಗುತ್ತದೆ.

5) ಮೆಂತ್ಯೆದ ಪುಡಿಯನ್ನು ನೀರು ಅಥವಾ ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಅಜೀರ್ಣ ಭೇದಿ ನಿಲ್ಲುತ್ತದೆ.

6) ಮೆಂತ್ಯೆದ ಚೂರ್ಣ, ಶುಂಠಿ ಚೂರ್ಣ ಅರ್ಧ ಅರ್ಧ ಚಮಚ ಒಂದು ಚಮಚ ಬೆಲ್ಲ ಸೇರಿಸಿ ಊಟದ ನಂತರ ಸೇವಿಸುವುದರಿಂದ ವಾತರೋಗ ನಿವಾರಣೆ ಆಗುತ್ತದೆ.

7) ಮೆಂತ್ಯೆಯನ್ನು ನೆನೆಸಿ ರುಬ್ಬಿ ಕಾಳು ಮೆಣಸು ಪುಡಿ ಸೇರಿಸಿ ಲೇಪಿಸುವುದರಿಂದ ಬಿದ್ದ ಗಾಯದ ಊತ ಗುಣವಾಗುತ್ತದೆ.

8) ಮಧುಮೇಹಿಗಳು ಪ್ರತಿ ದಿನ ಊಟದಲ್ಲಿ ಮೆಂತೆಯನ್ನು ಉಪಯೋಗಿಸುವುದರಿಂದ ಮಧುಮೇಹ ಹತೋಟಿಯಲ್ಲಿರುತ್ತದೆ.

9) ಮೊದಲನೇ ತುತ್ತಿನ ಅನ್ನದಲ್ಲಿ ಮೆಂತ್ಯದ ಪುಡಿ ತುಪ್ಪ ಸೇರಿಸಿ ಉಪಯೋಗಿಸುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.

10) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಪುಡಿಯನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಹತೋಟಿಗೆ ಬರುತ್ತದೆ.

11) ನಾನು ತಯಾರಿಸಿದ ಮೆಡಿಸಿನ್ ಜೊತೆಯಲ್ಲಿ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಎರಡು ಚಮಚ ಕಲ್ಲು ಸಕ್ಕರೆ ಪುಡಿ, ಅರ್ಧ ಕಪ್ ಮೊಸರು, ಆರು ಚಮಚ ಮೆಂತ್ಯ ಹಾಕಿ ತಕ್ಷಣ ಕುಡಿಯುವುದರಿಂದ ಮುಟ್ಟಿನ ಹೊಟ್ಟೆ ನೋವು ಗುಣವಾಗುತ್ತದೆ ಆದರೆ ಸತತವಾಗಿ ಮೂರು ತಿಂಗಳು ಮಾಡಬೇಕಾಗುತ್ತದೆ. ಇದು ಸಿದ್ದ ಔಷಧಿ ತುಂಬಾ ಜನರಿಗೆ ಕೊಟ್ಟು ಇದರ ಅನುಭವ ಪಡೆದಿರುತ್ತೇನೆ.

12) ಮಲಬದ್ಧತೆ ಇರುವವರು ರಾತ್ರಿ ಮಲಗುವಾಗ ಮಜ್ಜಿಗೆ ಅಥವಾ ನೀರಿನಲ್ಲಿ ಮೆಂತ್ಯದ ಪುಡಿ ತೆಗೆದುಕೊಳ್ಳುವುದರಿಂದ ಗುಣವಾಗುತ್ತದೆ.

13) ಹೆರಿಗೆ ನೋವು ಬಂದಾಗ ಜೀರಿಗೆ ಕಷಾಯದೊಂದಿಗೆ ಮೆಂತೆ ಸೇರಿಸಿ ಸೇವಿಸುವುದರಿಂದ ಸಹಜ ಹೆರಿಗೆ ಆಗುತ್ತದೆ.

14) ಮೆಂತ್ಯೆ ಸೊಪ್ಪಿನ ಪೇಸ್ಟ್ ಜೊತೆಯಲ್ಲಿ ಬೆಲ್ಲ ಸೇರಿಸಿ ಸೇವಿಸುವುದರಿಂದ ವಾತ ರೋಗಗಳು ಗುಣವಾಗುತ್ತದೆ.

15) ಎರಡರಿಂದ ಮೂರು ಚಮಚ ಮೆಂತ್ಯ ನೆನೆಸಿ ರುಬ್ಬಿ ಬೆಲ್ಲ ಸೇರಿಸಿ ಕುದಿಸಿ ಬಿಸಿ ಇರುವಾಗ ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಿಂದ ಬರುವ ವಾತರೋಗ ಗುಣವಾಗುತ್ತದೆ.

16) ಬಾಳಂತಿಯರಿಗೆ ಮೆಂತ್ಯೆವನ್ನು ಮತ್ತು ಮೆಂತ್ಯ ಸೊಪ್ಪನ್ನು ಹೆಚ್ಚು ಉಪಯೋಗಿಸುವುದರಿಂದ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ.

17) ಜೀವಿತಾವಧಿಯಲ್ಲಿ ಫುಡ್ ಪಾಯಿಸನ್ ಆದವರಿಗೆ ( ಮದ್ದಿನ ಪ್ರಭಾವಕ್ಕೆ ಒಳಗಾದವರಿಗೆ) ಮೆಂತ್ಯೆ ಅಷ್ಟು ಒಳ್ಳೆಯದಲ್ಲ. ಹೊಟ್ಟೆ ಉಬ್ಬರಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


  • ಸುಮನಾ ಮಳಲಗದ್ದೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW