ತಲೆನೋವನ್ನು ತಕ್ಷಣ ನಿವಾರಣೆ ಮಾಡಲು ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರ ಮನೆಮದ್ದನ್ನು ಮಾಡಿ ನೋಡಿ. ಅತ್ಯಂತ ಸರಳ ಹಾಗೂ ಮಾಡಲು ಸುಲಭ. ಮುಂದೆ ಓದಿ…
ಬೇಕಾಗುವ ಪದಾರ್ಥಗಳು :
- ಬೆಳ್ಳುಳ್ಳಿ
- ಶುಂಠಿ ಪೇಸ್ಟ್
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಣೆಗೆ ಹಚ್ಚಿದರೆ ತಲೆನೋವು ಗುಣವಾಗುತ್ತದೆ. ಆರರಿಂದ ಏಳು #ಬೆಳ್ಳುಳ್ಳಿ ಎಸಳನ್ನು ಅನ್ನ ಮಾಡುವಾಗ ಹಾಕಿ ಬೇಯಿಸಿ ತಿನ್ನುವುದರಿಂದ ವಾತದ ಕಾಯಿಲೆಗಳನ್ನು ಗುಣಪಡಿಸುತ್ತದೆ. ದೇಹದ ಶಾಖ ಹೆಚ್ಚಿಸಿ ನೋವು ಮತ್ತು ಬಾವು ನಿವಾರಣೆ ಮಾಡುತ್ತದೆ.
ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿ ಖಾಲಿ ಹೊಟ್ಟೆಯಲ್ಲಿ ಜಗಿದು ತಿಂದು ನೀರು ಕುಡಿದರೆ #ಬಿಪಿ ಹತೋಟಿಗೆ ಬರುತ್ತದೆ.
ಹೆಣ್ಣು ಮಕ್ಕಳ ರಜದ ಹೊಟ್ಟೆ ನೋವು ನಿವಾರಣೆಗೆ ಇತರ ಮೆಡಿಸಿನ್ ಜೊತೆಗೆ ಉಪಯುಕ್ತ. ಇನ್ನೂ ಹಲವಾರು ರೋಗಗಳು ಗುಣಪಡಿಸಲು ಉಪಯುಕ್ತ ಆದರೂ ಇದು ತಾಮಸ ಗುಣ ಹೊಂದಿರುವ ಬೆಳ್ಳುಳ್ಳಿ ಮೆದುಳಿಗೆ ಅಷ್ಟೊಂದು ಒಳ್ಳೆಯದಲ್ಲ. ಮಾನಸಿಕ ಒತ್ತಡ ಹೆಚ್ಚು ಮಾಡುವುದು.
- ಸುಮನಾ ಮಳಲಗದ್ದೆ(ನಾಟಿವೈದ್ಯೆ) ಸಾಗರ