‘ನಗೆಯ ನಕ್ಷತ್ರಗಳ ಮಾಲೆಯನು ತೂಗಿ, ನನ್ನ ಕಣ್ನ ಕೊರೈಸಿದವಳನು’… ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆ, ಮುಂದೆ ಓದಿ ….
ಹೇಗೆ ತಾನೇ ಮರೆಯಲಿ ನಾನು
ಆ ಸುಂದರ ಬೆಳುದಿಂಗಳ ರಾತ್ರಿಯನು
ಚಂದ್ರಕಿರಣಗಲಿಂದಲೇ ಜಾರಿ
ಭೂಮಿಗಿಳಿದ ಆ ಕಿನ್ನರಿಯನು.
ನಗೆಯ ನಕ್ಷತ್ರಗಳ ಮಾಲೆಯನು ತೂಗಿ
ನನ್ನ ಕಣ್ನ ಕೊರೈಸಿದವಳನು.
ಕಂಗಳಲ್ಲೇ ಕವನಗಳ ತುಂಬಿ ತಂದು
ನನ್ನೆದೆಯ ಕಡಾಯಿಗೆ ಸುರಿದವಳನು.
ಬೆಳದಿಂಗಳ ಮೈಯ ಬೆಳಗಿ ನಿಂತವಳನು
ತಂಗಾಳಿಯಲಿ ಸೌಗಂಧ ತುಂಬಿದವಳನು
ಪೈಜಣವ ಝಣ ಝಣಿಸಿ ನನ್ನೆದೆಯ ರಂಗದಲಿ
ಕುಣಿ ಕುಣಿದು ರಂಗೇರಿಸಿದ ಆ ರತಿಯನು.
ಹೇಗೆ ತಾನೇ ಮರೆಯಲಿ ನಾನು
ಆ ಸುಂದರ ಬೆಳುದಿಂಗಳ ರಾತ್ರಿಯನು!
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)