ಈಗಲೂ ಹೇಳುವೆ ಕವಿತೆ

ಕವಿ ಕು.ಸ.ಮಧುಸೂದನ್ ರಂಗೇನಹಳ್ಳಿ ಅವರ ರಚನೆಯ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…

ಈಗಲೂ ಹೇಳುವೆ ಕವಿತೆ
ನಿನ್ನೊಂದು ಪ್ರೀತಿ ಮಾತು
ಬದುಕಿಸಿತು ನನ್ನ
ಎಂಬುದೇನು
ಮಿಥ್ಯದ ಮಾತಲ್ಲ

ಅರಿತಿಕೊ ನನ್ನ
ಮಾತಿನ ಮೌಲ್ಯವನ್ನ
ಒಡಲಾಳದೊಳಗಿನ
ದು:ಖ ದುಮ್ಮಾನಗಳ
ಹಗುರಾಗಿಸಿಕೊಂಡಿದ್ದು
ನಿನ್ನೊಂದು
ಮಾತಿನಿಂದಲೆ

ಪ್ರಶ್ನೆಯೆಂದರೆ
ಮಾತಾಡಿದ್ದು ಯಾರ
ಜೊತೆಗೆಂಬುದಿಲ್ಲಿ ಮುಖ್ಯ
ಎದೆಯೊಳಗೆ
ಹಗೆಯ ಚಿತೆ ಉರಿಸಿಕೊಂಡು
ತುಟಿಯಲಿ ಜೇನು ಹನಿಸುವ
ಮುಖವಾಡದ ಮನುಷ್ಯರ ಜೊತೆಗಲ್ಲ.
ಆಡುವ ಮಾತುಗಳು ಮುತ್ತಾಗದಿದ್ದರೂ
ಮತ್ತೊಬ್ಬರ ಕೊರಳಿಗೆ ಕುತ್ತಾಗಬಾರದು

  • ಕು.ಸ.ಮಧುಸೂದನ್ ರಂಗೇನಹಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading