ಮೀರದಿರು ಮನಸಿನ ಗಡಿ, ಶುದ್ಧ ಮನಸೇ ನಿಜ ದೇವರ ಗುಡಿ, ಚಾಡಿ ಹೇಳುವ ಬಾಯಿಗಳಿಗೆ ಬೀಗ ಜಡಿ…ಮುದ್ನಾಳ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರು ಕವನವನ್ನು ತಪ್ಪದೆ ಮುಂದೆ ಓದಿ…
ಮನುಜ ಇಡಬೇಡ ಹಿಂದಡಿ
ಭೂತಾಯಿ ನಂಬಿಕೊಂಡು ದುಡಿ
ಕಾಯಕವ ನಂಬಿ ಸತ್ಪಥದಲ್ಲಿ ಮುನ್ನಡಿ.
ಹೊಟ್ಟೆ ಬಟ್ಟೆಗಾಗಿ ದುಡಿ
ರಟ್ಟೆನಂಬಿ ಬಾಳಿನ ಬಂಡಿ ಹೊಡಿ
ಕುಡಿದು ಕುಣಿದು ಕುಪ್ಪಳಿಸುವ ಚಾಳಿಬಿಡಿ.
ಮೀರದಿರು ಮನಸಿನ ಗಡಿ
ಶುದ್ಧ ಮನಸೇ ನಿಜ ದೇವರ ಗುಡಿ
ಚಾಡಿ ಹೇಳುವ ಬಾಯಿಗಳಿಗೆ ಬೀಗ ಜಡಿ.
ದುರುಳ ದುಷ್ಟರ ಸಂಗವ ಬಿಡಿ
ಬದುಕಿನ ಸತ್ಪತದಲ್ಲಿ ತಲೆಯೆತ್ತಿ ನಡಿ
ಬದುಕು ಸಾಗಿದರು ಚಿಂತೆಯಿಲ್ಲ ಕಾಲ್ವೆ ತೋಡಿ.
ದುಡಿಮೆಯೇ ನಿಜ ದೇವರ ಗುಡಿ
ನ್ಯಾಯ ಧರ್ಮದ ಹಾದಿಹಿಡಿದು ನಡಿ
ಅನ್ಯಾಯ ಅಧರ್ಮ ಕಂಡರೆ ತಪ್ಪದೇ ತಡಿ.
ಮನುಜರಲ್ಲಿ ಭೇದಭಾವ ಬಿಡಿ
ಸರ್ವರು ಸಮವೆಂಬ ಪಣವ ತೊಡಿ
ಮೇಲು ಕೀಳೆಂಬ ಭೇದದ ಬೇರುಗಳ ಕಡಿ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ
